ಮುನ್ನುಡಿ
ಜಗದಲ್ಲೆಲ್ಲಾ ಚದರಿರುವ ಸರ್ವ ದೇವಜನರನ್ನು ಉದ್ದೇಶಿಸಿ ಬರೆದಿರುವ ಪತ್ರವಿದು. ತಮ್ಮ ದೈನಂದಿನ ಜೀವನದಲ್ಲಿ ಭಕ್ತಾದಿಗಳು ಅನುಸರಿಸಬೇಕಾದ ಕ್ರಿಯಾತ್ಮಕ ಸೂತ್ರಗಳನ್ನು ಸಂಯೋಜಿಸಿಕೊಡುವ ಪ್ರಯತ್ನವನ್ನು ಲೇಖಕನು ಇಲ್ಲಿ ಮಾಡಿದ್ದಾನೆ. ಕ್ರೈಸ್ತಮನೋದೃಷ್ಟಿ ಮತ್ತು ನಡೆನುಡಿಗಳನ್ನು ಕುರಿತ ಕೆಲವು ಹೇಳಿಕೆಗಳು ಹಾಗೂ ಹೋಲಿಕೆಗಳು ಸ್ವಾರಸ್ಯವಾಗಿವೆ. ಬಡತನ, ಸಿರಿತನ, ಪಾಪ, ಪ್ರಲೋಭನೆ, ಸನ್ನಡತೆ, ದುರ್ನಡತೆ, ವಿಶ್ವಾಸ, ಸತ್ಕಾರ್ಯ, ನಾಲಿಗೆಯ ಸದುಪಯೋಗ, ಜಾಣ್ಮೆ, ಜಗಳ, ಗರ್ವ, ನಮ್ರತೆ, ತನ್ನನ್ನೇ ಕೊಚ್ಚಿಕೊಂಡು ಪರರನ್ನು ತುಚ್ಛೀಕರಿಸುವ ಚಟ, ತಾಳ್ಮೆ, ಪ್ರಾರ್ಥನೆ ಇವುಗಳ ಬಗ್ಗೆ ಸರ್ವರಿಗೂ ಮನವರಿಕೆ ಆಗುವಂಥ ಸಂಕ್ಷಿಪ್ತ ವಿವರಣೆ ಇದರಲ್ಲಿದೆ.
ಕ್ರೈಸ್ತಧರ್ಮದಲ್ಲಿ ವಿಶ್ವಾಸವು ಪ್ರಾಮುಖ್ಯವಾದುದೇನೋ ನಿಜ. ಆದರೆ ವಿಶ್ವಾಸವನ್ನು ಸತ್ಕಾರ್ಯಗಳಿಂದ ಸಚೇತನಗೊಳಿಸದಿದ್ದರೆ ಅದು ಸತ್ತ ವಿಶ್ವಾಸವೇ ಎಂಬ ಅಂಶವನ್ನು ಲೇಖಕನು ಒತ್ತಿ ಹೇಳುತ್ತಾನೆ.
ಪರಿವಿಡಿ
ಪೀಠಿಕೆ 1:1
ವಿಶ್ವಾಸ ಮತ್ತು ಜ್ಞಾನ 1:2-8
ಬಡತನ ಮತ್ತು ಸಿರಿತನ 1:9-11
ಪರಿಶೋಧನೆ ಮತ್ತು ಪ್ರಲೋಭನೆ 1:12-18
ಲಾಲನೆ ಮತ್ತು ಪಾಲನೆ 1:19-27
ಪಕ್ಷಪಾತದ ಬಗ್ಗೆ ಎಚ್ಚರಿಕೆ 2:1-13
ವಿಶ್ವಾಸ ಮತ್ತು ಸತ್ಕಾರ್ಯಗಳು 2:14-26
ನಾಲಿಗೆಯ ಸದುಪಯೋಗ 3:1-18
ವಿಶ್ವದಲ್ಲಿ ಕ್ರೈಸ್ತಭಕ್ತರು 4:1—5:6
ಇತರ ಬುದ್ಧಿವಾದಗಳು 5:7-20