ಮುನ್ನುಡಿ
ಮೀಕನು ಯೆಶಾಯನ ಸಮಕಾಲೀನ ಪ್ರವಾದಿ. ಇಸ್ರಯೇಲಿನ ದಕ್ಷಿಣ ಪ್ರಾಂತ್ಯವಾದ ಜುದೇಯ ನಾಡಿಗೆ ಸೇರಿದವನು. ಉತ್ತರ ಪ್ರಾಂತ್ಯಗಳಿಗೆ ಬಂದೊದಗಲಿರುವ ದುರಂತವನ್ನು ಆಮೋಸ್ ಪ್ರವಾದಿ ಮುಂಚಿತವಾಗಿ ತಿಳಿಸಿದ್ದನು. ಅಂತೆಯೇ ದಕ್ಷಿಣ ಪ್ರಾಂತ್ಯಗಳಿಗೆ ಬರಲಿರುವ ಅನಾಹುತಗಳನ್ನು ಮೀಕನು ಮುಂತಿಳಿಸುತ್ತಾನೆ. ಜನರ ಅನ್ಯಾಯ ಹಾಗು ಅಕ್ರಮಗಳನ್ನು ದೇವರು ದಂಡಿಸುವರು ಎಂಬುದನ್ನು ಮೀಕನು ಸ್ಪಷ್ಟವಾಗಿ ಹೇಳುತ್ತಾನೆ. ಅಂತೂ ಅವನ ಸಂದೇಶ ಜುದೇಯದ ಉಜ್ವಲ ಭವಿಷ್ಯದ ಚಿಹ್ನೆಗಳನ್ನು ಒಳಗೊಂಡಿದೆ.
ಸಾರ್ವತ್ರಿಕ ಶಾಂತಿ (4:1-4); ದಾವೀದ ವಂಶದಲ್ಲಿ ಜನಿಸುವ ಮಹಾರಾಜನಿಂದ ರಾಷ್ಟ್ರಕ್ಕೆ ಶಾಂತಿ ದೊರಕಲಿದೆ (5:2-4); ನ್ಯಾಯನೀತಿಯ ಪಾಲನೆ, ಪರರ ಮೇಲಿನ ಅಚಲಪ್ರೀತಿ, ದೇವರೊಡನೆ ನಮ್ರ ಸತ್ಸಂಬಂಧ - ಇವೇ ಎಲ್ಲಾ ಪ್ರವಾದನೆಗಳ ಸಾರಾಂಶ. ಮೀಕನ ಗ್ರಂಥದಲ್ಲೂ ಈ ಮುಖ್ಯಾಂಶಗಳು ಅಡಗಿವೆ.
ಪರಿವಿಡಿ
1. ಜುದೇಯ ನಾಡಿಗೆ ಬರಲಿರುವ ದಂಡನೆ 1:1—3:12
2. ಶಾಂತಿಯ ಪುನರ್‍ಸ್ಥಾಪನೆ 4:1—5:15
3. ಎಚ್ಚರಿಕೆ ಹಾಗೂ ನಿರೀಕ್ಷೆ 6:1—7:20