ಮುನ್ನುಡಿ
ಪ್ರವಾದಿ ಮಲಾಕಿಯನ ಈ ಗ್ರಂಥದ ಕಾಲ ಸುಮಾರು ಕ್ರಿ. ಪೂ. 5ನೇ ಶತಮಾನ. ಜೆರುಸಲೇಮಿನ ಮಹಾದೇವಾಲಯವನ್ನು ಆಗಲೇ ಕಟ್ಟಿ ಮುಗಿಸಲಾಗಿತ್ತು. ದೇವರೊಡನೆ ಮಾಡಿಕೊಂಡ ಒಡಂಬಡಿಕೆಗೆ ಯಾಜಕರು ಮತ್ತು ಭಕ್ತಾದಿಗಳು ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡುವುದೇ ಈ ಗ್ರಂಥದ ಮುಖ್ಯ ಉದ್ದೇಶ. ದೇವಜನರ ನಡವಳಿಕೆಯಲ್ಲಿ, ಆರಾಧನಾ ವಿಧಿಗಳಲ್ಲಿ, ನ್ಯೂನತೆಗಳೂ ಲೋಪದೋಷಗಳೂ ಕಂಡುಬಂದವು. ದೇವರಿಗೆ ಸಲ್ಲತಕ್ಕ ಕಾಣಿಕೆಗಳನ್ನು ಕ್ರಮಬದ್ಧವಾಗಿ ಜನರು ಸಲ್ಲಿಸುತ್ತಿರಲಿಲ್ಲ. ಯಾಜಕರೂ ಜನರೂ ದೇವರ ಬೋಧನೆಗೆ ತಕ್ಕಂತೆ ನಡೆದುಕೊಳ್ಳುತ್ತಿರಲಿಲ್ಲ. ಆದ್ದರಿಂದ ದೇವರಾದ ಸರ್ವೇಶ್ವರ ಬಂದೇ ಬರುವರು. ತಮ್ಮ ಪ್ರಜೆಯನ್ನು ದಂಡಿಸಿ, ಅವರನ್ನು ಪರಿಶುದ್ಧಗೊಳಿಸುವರು. ಅವರು ಬರುವುದಕ್ಕೆ ಮುಂಚೆ ಮಾರ್ಗವನ್ನು ಸಿದ್ಧಗೊಳಿಸಲು ಹಾಗು ಅವರ ಒಡಂಬಡಿಕೆಯನ್ನು ಪ್ರಕಟಿಸಲು ತಮ್ಮ ದೂತನನ್ನು ಮುಂದಾಳಾಗಿ ಕಳುಹಿಸುವರು. ಇದೇ ಈ ಗ್ರಂಥದ ಸಾರಾಂಶ.
ಪರಿವಿಡಿ
1. ಇಸ್ರಯೇಲಿನ ಅಪರಾಧ 1:1—2:16
2. ದೇವರ ದಂಡನೆ ಮತ್ತು ಕರುಣೆ 2:17—4:6