ಮುನ್ನುಡಿ
ಪೌಲನ ಪತ್ರವನ್ನು ಕೊಲೊಸ್ಸೆಯವರಿಗೆ ತಲುಪಿಸಲು ಕಳುಹಿಸಲಾದ ತುಖಿಕನೊಂದಿಗೆ ಒನೇಸಿಮನೆಂಬ ಜೀತದಾಳು ಹೋಗಿದ್ದನು. ಈ ಒನೇಸಿಮನ ಯಜಮಾನನೇ ಫಿಲೆಮೋನ. (ಪೌಲನು ಕೊಲೊಸ್ಸೆಯವರಿಗೆ ಬರೆದ ಪತ್ರದ ಮುನ್ನುಡಿಯನ್ನು ನೋಡಿ.)
ಫಿಲೆಮೋನನು ಕೊಲೊಸ್ಸೆ ಸಭೆಯ ಪ್ರಮುಖ ಸದಸ್ಯನಾಗಿದ್ದನೆಂದು ಕೆಲವರ ಅಭಿಪ್ರಾಯ. ಯಜಮಾನನನ್ನು ಬಿಟ್ಟು ಓಡಿಹೋದ ಒನೇಸಿಮನಿಗೆ ಅದೃಷ್ಟವಶಾತ್ ಪೌಲನ ಪರಿಚಯ ಹಾಗೂ ಕ್ರೈಸ್ತ ದೀಕ್ಷಾಸ್ನಾನ ಲಭಿಸುತ್ತದೆ. ಆಗ ಪೌಲನು ಸೆರೆಯಲ್ಲಿದ್ದನು. ಪೌಲನು ಫಿಲೆಮೋನನಿಗೆ ಒಂದು ಪತ್ರವನ್ನು ಬರೆದು, ಒನೇಸಿಮನ ಕೈಯಲ್ಲೇ ಕಳುಹಿಸುತ್ತಾನೆ. ಫಿಲೆಮೋನನು ತನ್ನ ಜೀತದಾಳು ಒನೇಸಿಮನೊಂದಿಗೆ ಸಂಧಾನ ಮಾಡಿಕೊಳ್ಳಬೇಕು; ಯಜಮಾನನ ಕ್ಷಮೆಯನ್ನು ಪಡೆದವನಂತೆ ಮಾತ್ರವಲ್ಲ, ಕ್ರಿಸ್ತಯೇಸುವಿನಲ್ಲಿ ತನ್ನ ಸಹೋದರನಂತೆ ಅವನನ್ನು ಸ್ವಾಗತಿಸಿ ಬರಮಾಡಿಕೊಳ್ಳಬೇಕು ಎಂದು ಪೌಲನು ಈ ಪತ್ರದಲ್ಲಿ ಅಮೋಘವಾಗಿ ವಿನಂತಿಸುತ್ತಾರೆ.
ಪರಿವಿಡಿ
ಪೀಠಿಕೆ 1:1-3
ಫಿಲೆಮೋನನನ್ನು ಕುರಿತು ಪ್ರಶಂಸೆ 1:4-7
ಒನೇಸಿಮನ ಪರವಾಗಿ ವಿನಂತಿ 1:8-22
ಸಮಾಪ್ತಿ 1:23-25