ಮುನ್ನುಡಿ
:ಪರಮಗೀತೆ” ಎಂಬ ಗ್ರಂಥ ಹಲವು ಪ್ರಣಯ ಕವಿತೆಗಳ ಸರಮಾಲೆಯಾಗಿದೆ. ಸಾಮಾನ್ಯವಾಗಿ ಒಬ್ಬ ನಲ್ಲನು ತನ್ನ ನಲ್ಲೆಯನ್ನು ಕುರಿತೋ ಅಥವಾ ನಲ್ಲೆ ತನ್ನ ನಲ್ಲನನ್ನು ಕುರಿತೋ ಹಾಡುವ ಪ್ರೇಮಗೀತೆಗಳಿಂದ ಕೂಡಿರುವ ಈ ಗ್ರಂಥವನ್ನು ಹಿಬ್ರು ಮೂಲದಲ್ಲಿ “ಸೊಲೊಮೋನನ ಗೀತೆ” ಎಂದು ಕರೆಯಲಾಗಿದೆ.
ಯೆಹೂದ್ಯರ ಅಭಿಪ್ರಾಯದಂತೆ ದೇವರಿಗೂ ಅವರ ಪ್ರಜೆಯಾದ ಇಸ್ರಯೇಲರಿಗೂ ಇರುವ ಪ್ರೇಮಬಾಂಧವ್ಯವನ್ನು ಈ ಗ್ರಂಥ ಚಿತ್ರಿಸುವಂಥದ್ದಾಗಿದೆ. ಕ್ರಿಸ್ತ ಯೇಸುವಿಗೂ ಅವರಿಂದ ಸ್ಥಾಪಿತವಾದ ಧರ್ಮಸಭೆಗೂ ಇರುವ ನಿಕಟಸಂಬಂಧವನ್ನೂ ಇದು ಚಿತ್ರಿಸುತ್ತದೆ ಎಂಬುದು ಕ್ರೈಸ್ತಭಕ್ತಾದಿಗಳ ಅಭಿಮತ.
ಪರಿವಿಡಿ
1ನೇ ಗೀತೆ 1:1—2:7
2ನೇ ಗೀತೆ 2:8—3:5
3ನೇ ಗೀತೆ 3:6—5:1
4ನೇ ಗೀತೆ 5:2—6:3
5ನೇ ಗೀತೆ 6:4—8:4
6ನೇ ಗೀತೆ 8:5-14