Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನ್ಯಾಯಸ್ಥಾಪಕರು INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಕಾನಾನ್ ನಾಡನ್ನು ಸ್ವಾಧೀನಪಡಿಸಿಕೊಂಡ ಕಾಲದಿಂದ ಆ ನಾಡನ್ನು ಅರಸರು ವ್ಯವಸ್ಥಿತವಾಗಿ ಆಳುವ ತನಕ ಇಸ್ರಯೇಲ್ ಸಮಾಜದಲ್ಲಿ ನಡೆದ ಆಗುಹೋಗುಗಳನ್ನು ಒಳಗೊಂಡಿದೆ ಪವಿತ್ರ ಬೈಬಲ್ಲಿನ ಈ ಭಾಗ. ಈ ಅಸ್ತವ್ಯಸ್ತ ಅವಧಿಯಲ್ಲಿ ಇಸ್ರಯೇಲರು ಮತ್ತೆ ಮತ್ತೆ ತಮ್ಮ ದೇವರಾದ ಸರ್ವೇಶ್ವರನಿಗೆ ಅಪ್ರಾಮಾಣಿಕರಾಗಿ ನಡೆದುಕೊಂಡು ಬೇರೆ ದೇವತೆಗಳತ್ತ ತಿರುಗಿಕೊಳ್ಳುತ್ತಾರೆ. ಆಗ ದೇವರು ಅವರನ್ನು ಅನ್ಯರ ದಬ್ಬಾಳಿಕೆಗೆ ಗುರಿಪಡಿಸುತ್ತಾರೆ. ಪಶ್ಚಾತ್ತಾಪಪಟ್ಟು ತನಗೆ ಮೊರೆಯಿಟ್ಟಾಗ ಅವರನ್ನು ಬಿಡುಗಡೆ ಮಾಡಲು ಏರ್ಪಾಡು ಮಾಡುತ್ತಾರೆ. ಮಹಾವೀರರನ್ನೂ ಯುದ್ಧಪರಾಕ್ರಮಿಗಳನ್ನೂ ಕಳುಹಿಸಿ ಬಿಡುಗಡೆ ಮಾಡುತ್ತಾರೆ. ಹೀಗೆ ಕಳುಹಿಸಲಾದ ಹನ್ನೆರಡು ಪ್ರಮುಖ ನ್ಯಾಯಸ್ಥಾಪಕರಲ್ಲಿ ಅಥವಾ ವಿಮೋಚಕರಲ್ಲಿ ಸಂಸೋನನು ಸುಪ್ರಸಿದ್ಧನು (ಅಧ್ಯಾಯ 13-16). ಪಾಪಕ್ಕೆ ವಿಮುಖರಾಗಿ ದೇವರ ಕಡೆ ತಿರುಗಿಕೊಳ್ಳಬಯಸುವವರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ ಎಂಬ ಪಾಠವನ್ನು ನಾನಾ ಘಟನೆಗಳಿಂದ ಎತ್ತಿತೋರಿಸಲಾಗಿದೆ.
ಪರಿವಿಡಿ
ಯೆಹೋಶುವನ ಮರಣ ಸಂದರ್ಭದಲ್ಲಿ ನಡೆದ ಘಟನೆಗಳು 1:1—2:10
ಇಸ್ರಯೇಲರನ್ನು ಬಿಡುಗಡೆಮಾಡಿದ ಮಹಾವೀರರು 2:11—16:31
1. ಒತ್ನೀಯೆಲ್
2. ಏಹೂದ್
3. ಶಮ್ಗರ್
4. ದೆಬೋರ್ - ಬಾರಾಕ್
5. ಗಿದ್ಯೋನ - ಅಬೀಮೆಲೆಕ್
6. ತೋಲ
7. ಯಾಯೀರ
8. ಯೆಪ್ತಾಹ
9. ಇಬ್ಬಾನ್
10. ಏಲೋನ್
11. ಅಬ್ದೋನ್
12. ಸಂಸೋನ
ದಾನ್ಯರು ಮೀಕನ ವಿಗ್ರಹವನ್ನು ಲಯಿಷಿಗೆ ಒಯ್ದದ್ದು 17
ಗಿಬೇದ್ಯರ ಪೈಶಾಚಿಕ ಕೃತ್ಯ 18
ಇಸ್ರಯೇಲ್ ಹಾಗು ಬೆನ್ಯಮೀನ್ ಕುಲದವರ ನಡುವೆ ಯುದ್ಧ 20:21

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು