Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನೆಹೆಮೀಯ 7 - ಕನ್ನಡ ಸತ್ಯವೇದವು C.L. Bible (BSI)

1 ಗೋಡೆಯನ್ನು ಕಟ್ಟಿ ಮುಗಿಸಿದನಂತರ ನಾನು ಕದಗಳನ್ನು ಹಚ್ಚಿಸಿದೆ; ದ್ವಾರಪಾಲಕರನ್ನೂ ಗಾಯಕರನ್ನೂ ಲೇವಿಯರನ್ನೂ ನೇಮಿಸಲಾಯಿತು.

2 ಆಮೇಲೆ ನನ್ನ ತಮ್ಮ ಹನಾನಿಗೆ ಹಾಗು ಬಹಳ ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ ದುರ್ಗಾ ಅಧಿಕಾರಿಯೂ ಆಗಿದ್ದ ಹನನ್ಯನಿಗೆ ಜೆರುಸಲೇಮಿನ ಮೇಲ್ವಿಚಾರಣೆಯನ್ನು ಒಪ್ಪಿಸಿದೆ.

3 ಅವರಿಗೆ, “ಬಿಸಿಲೇರುವುದಕ್ಕಿಂತ ಮೊದಲೇ ಜೆರುಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಲ್ಲೇ ಕದಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ, ಜೆರುಸಲೇಮಿನ ನಿವಾಸಿಗಳಲ್ಲೇ ಕಾವಲುಗಾರರನ್ನು ಗೊತ್ತುಮಾಡಿರಿ. ಪ್ರತಿಯೊಬ್ಬನನ್ನು ಅವನವನ ಮನೆಯ ಎದುರಿನಲ್ಲೇ ಕಾವಲಿರುವಂತೆ ನೇಮಿಸಿರಿ,” ಎಂದು ಆಜ್ಞಾಪಿಸಿದೆ.


ಬಾಬಿಲೋನಿನ ಸೆರೆವಾಸದಿಂದ ಹಿಂದಿರುಗಿದವರ ಪಟ್ಟಿ
( ಎಜ್ರ. 2:1-70 )

4 ಪಟ್ಟಣವೇನೊ ಸವಿಸ್ತಾರವಾಗಿತ್ತು. ಆದರೆ ಅದರೊಳಗಿದ್ದ ಜನ ಬಹಳ ಸ್ವಲ್ಪಮಂದಿ. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.

5 ಹೀಗಿರಲು, ನಾನು ನನ್ನ ದೇವರ ಪ್ರೇರಣೆಯಿಂದ ಶ್ರೀಮಂತರನ್ನು, ಅಧಿಕಾರಿಗಳನ್ನು ಹಾಗು ಜನಸಾಮಾನ್ಯರನ್ನು ಜನಗಣತಿಗಾಗಿ ಸಭೆಸೇರಿಸಿದೆ. ಆಗ ಜೆರುಸಲೇಮಿಗೆ ಮೊದಲು ಹಿಂದಿರುಗಿ ಬಂದವರ ಹೆಸರುಗಳ ಪಟ್ಟಿ ನನಗೆ ಸಿಕ್ಕಿತು. ಅದರಲ್ಲಿ ಹೀಗೆ ಬರೆದಿತ್ತು:

6 ಸೆರೆಯಿಂದ ಹಿಂತಿರುಗಿ ಬಂದ ಯೆಹೂದ ಜನಾಂಗದವರ ಪಟ್ಟಿ: ಬಾಬಿಲೋನಿನ ಅರಸ ನೆಬೂಕದ್ನೆಚ್ಚರನಿಂದ ಸೆರೆಗೆ ಒಯ್ಯಲ್ಪಟ್ಟವರಲ್ಲಿ ಜೆರುಸಲೇಮಿಗೂ ಜುದೇಯ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಹಿಂದಿರುಗಿದವರು ಇವರು: ಅ ಇವರ ನಾಯಕರಲ್ಲಿ

7 ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರತ್, ಬಿಗ್ವೈ, ನೆಹೂಮ್ ಹಾಗು ಬಾಣ ಎಂಬವರು: ಆ ಅವರ ಜನಸಾಮಾನ್ಯರಲ್ಲಿ:

8 ಪರೋಷಿನವರು - 2172

9 ಶೆಫಟ್ಯನವರು -372

10 ಆರಹನವರು - 652

11 ಪಹತ್‍ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು - 2818

12 ಏಲಾಮಿನವರು - 1254

13 ಜತ್ತೂವಿನವರು - 845

14 ಜಕ್ಕೈಯವರು - 760

15 ಬಿನ್ನೂಯವರು - 648

16 ಬೇಬೈಯವರು - 628

17 ಅಜ್ಗಾದಿನವರು - 2322

18 ಅದೋನೀಕಾಮಿನವರು - 667

19 ಬಿಗ್ವೈಯವರು - 2067

20 ಅದೀನನವರು - 665

21 ಅಟೇರಿನವರಾದ ಹಿಜ್ಕೀಯನ ಸಂತಾನದವರು - 98

22 ಹಾಷುಮಿನವರು -328

23 ಬೇಚೈಯವರು -324

24 ಹಾರಿಫಿನವರು - 112

25 ಗಿಬ್ಯೋನಿನವರು - 95

26 ಬೆತ್ಲೆಹೇಮ್ ನೆಟೋಫ ಊರುಗಳವರು - 188

27 ಅನಾತೋತ್ ಊರಿನವರು - 128

28 ಬೇತಜ್ಮಾವೇತಿನವರು - 42

29 ಕಿರ್ಯತ್ಯಾರೀಮ್ ಕೆಫೀರಾ ಬೇರೋತ್ ಊರುಗಳವರು - 743

30 ರಾಮಾ, ಗೆಬ ಊರುಗಳವರು - 621

31 ಮಿಕ್ಮಾಸಿನವರು - 122

32 ಬೇತೇಲ್, ಆಯಿ ಎಂಬ ಊರುಗಳವರು - 123

33 ಎರಡನೆಯ ನೆಬೋನಿನವರು - 52

34 ಎರಡನೆಯ ಏಲಾಮಿನವರು - 1254

35 ಹಾರಿಮನವರು -320

36 ಜೆರಿಕೋವಿನವರು -345

37 ಲೋದ್, ಹಾದೀದ್, ಓನೋ ಎಂಬ ಊರುಗಳವರು - 721

38 ಸೆನಾಹನವರು -3930 ಇ

39 ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು - 973

40 ಇಮ್ಮೇರನವರು - 1052

41 ಪಷ್ಹೂರನವರು - 1247

42 ಹಾರಿಮನವರು - 1017 ಈ

43 ಲೇವಿಯರಲ್ಲಿ - ಹೋದವ್ಯನವರಾದ ಯೇಷೂವ, ಕದ್ಮೀಯೇಲ್ ಇವರ ಸಂತಾನದವರು - 74 ಉ

44 ಗಾಯಕರಲ್ಲಿ - ಆಸಾಫ್ಯರು - 148 ಊ

45 ದ್ವಾರಪಾಲಕರಲ್ಲಿ - ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು - 138 ಎ

46 ದೇವಸ್ಥಾನ ಪರಿಚಾರಕರಲ್ಲಿ - ಜೀಹ, ಹಸೂಫ, ಟಬ್ಬಾವೋತ್, ಕೇರೋಸ್, ಸೀಯ,

47 ಪಾದೋನ್, ಲೆಬಾನ, ಹಗಾಬ,

48-49 ಸಲ್ಮೈ, ಹಾನಾನ್, ಗಿದ್ದೇಲ್, ಗಹರ್, ರೆವಾಯ, ರೆಚೀನ್,

50-51 ನೆಕೋದ, ಗಜ್ಜಾಮ್, ಉಜ್ಜ, ಪಾಸೇಹ,

52 ಬೇಸೈ, ಮೆಯನೀಮ್, ನೆಫೀಷೆಸೀಮ್,

53 ಬಕ್ಬೂಕ್, ಹಕ್ಕೂಫ, ಹರ್ಹೂರ್, ಬಚ್ಲೂತ್, ಮೆಹೀದ,

54-55 ಹರ್ಷ, ಬರ್ಕೋಸ್, ಸೀಸೆರ, ತೆಮಹ,

56 ನೆಚೀಹ, ಹಟೀಫ ಇವರ ಸಂತಾನದವರು. ಏ

57 ಸೊಲೊಮೋನನ ದಾಸರಲ್ಲಿ - ಸೋಟೈ, ಸೋಫೆರೆತ್, ಪೆರೀದ, ಯಾಲ,

58 ದರ್ಕೋನ್, ಗಿದೇಲ್, ಶೆಫಟ್ಯ, ಹಟ್ಟೀಲ್,

59 ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಇವರ ಸಂತಾನದವರು.

60 ಎಲ್ಲಾ ದೇವಸ್ಥಾನ ಪರಿಚಾರಕರು ಹಾಗು ಸೊಲೊಮೋನನ ಸೇವಕರು ಒಟ್ಟು -392 ಮಂದಿ.

61 ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದೋನ್, ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ ತಾವು ಇಸ್ರಯೇಲರೆಂಬುದನ್ನು ಸ್ಥಾಪಿಸಲಾರದವರಾದ

62 ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು 642 ಮಂದಿ.

63 ಯಾಜಕರಲ್ಲಿ ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯನ್ನು ತೋರಿಸಲಾರದೆ ಹೋದರು. (ಈ ಬರ್ಜಿಲ್ಲೈ ಎಂಬುವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನು ಇಟ್ಟುಕೊಂಡಿದ್ದನು.)

64 ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕಾ ಸೇವೆಯಿಂದ ಬಹಿಷ್ಕೃತರಾದರು.

65 ಊರಿಮ್‍ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ರಾಜ್ಯಪಾಲ ತೀರ್ಪುಮಾಡಿದನು.

66 ಸರ್ವಸಮೂಹದವರ ಒಟ್ಟು ಸಂಖ್ಯೆ - ನಾಲ್ವತ್ತೆರಡು ಸಾವಿರದ ಮುನ್ನೂರರುವತ್ತು.

67 ಈ ಸಂಖ್ಯೆಯಲ್ಲಿ ಎಣಿಕೆಯಾಗದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಾಲ್ವತ್ತೈದು ಮಂದಿ.

68 ಅವರಿಗೆ ಏಳುನೂರ ಮೂವತ್ತಾರು ಕುದುರೆಗಳೂ ಇನ್ನೂರ ನಾಲ್ವತ್ತೈದು ಹೇಸರಕತ್ತೆಗಳೂ

69 ನಾನೂರ ಮೂವತ್ತೈದು ಒಂಟೆಗಳೂ ಆರುಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು.

70 ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕ್ಕೆಬೇಕಾದ ದ್ರವ್ಯಸಹಾಯ ನೀಡಿದರು. ತಿರ್ಷಾತಾ ಎನಿಸಿಕೊಳ್ಳುವ ರಾಜ್ಯಪಾಲ ಭಂಡಾರಕ್ಕೆ ಕೊಟ್ಟದ್ದು - ಎಂಟು ಕಿಲೋಗ್ರಾಂ ಬಂಗಾರ. ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.

71 ಬೇರೆ ಕೆಲವು ಮಂದಿ ಗೋತ್ರಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ನೂರಾರವತ್ತೆಂಟು ಕಿಲೋಗ್ರಾಂ ಬಂಗಾರ; ಸಾವಿರದ ಇನ್ನೂರ ಐವತ್ತು ಕಿಲೋಗ್ರಾಂ ಬೆಳ್ಳಿ

72 ಉಳಿದ ಜನರು ಕೊಟ್ಟದ್ದು - ನೂರ ಅರವತ್ತೆಂಟು ಕಿಲೋಗ್ರಾಂ ಬಂಗಾರ; ನೂರ ನಲವತ್ತು ಕಿಲೋಗ್ರಾಂ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳು.

73 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಜನಸಾಮಾನ್ಯರು, ದೇವಸ್ಥಾನದ ಪರಿಚಾರಕರು ಅಂತೂ ಇಸ್ರಯೇಲರೆಲ್ಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು