ಇಸ್ರಯೇಲಿನ ಪುರಾತನ ಹಾಗೂ ಕ್ರೂರ ಶತ್ರುಗಳಲ್ಲಿ ಅಸ್ಸೀರಿಯ ರಾಷ್ಟ್ರವು ಒಂದು. ಇದರ ರಾಜಧಾನಿ ನಿನೆವೆ ನಗರ. ಈ ನಗರ ಕ್ರಿ. ಪೂ. ಏಳನೇ ಶತಮಾನದ ಅಂತ್ಯದಲ್ಲಿ ನೆಲಸಮವಾಯಿತು. ಇದರ ನಿವಾಸಿಗಳು ನಿರ್ದಯಿಗಳಾಗಿಯೂ ಅಹಂಕಾರಿಗಳಾಗಿಯೂ ಇದ್ದುದರಿಂದ ದೇವರ ದಂಡನೆಗೆ ಗುರಿಯಾದರು. ಈ ದುರಂತ ಸಂಭವಿಸುವುದಕ್ಕೆ ಮುಂಚಿತವಾಗಿ ಪ್ರವಾದಿ ನಹೂಮನು ಅದನ್ನು ಕುರಿತು ಒಂದು ಪುಟ್ಟಕಾವ್ಯವನ್ನು ಗದ್ಯ ಹಾಗೂ ಪದ್ಯದ ರೂಪದಲ್ಲಿ ರಚಿಸಿದ್ದಾನೆ.