ಮುನ್ನುಡಿ
ಅನ್ಯಧರ್ಮೀಯನಾಗಿದ್ದ ತೀತನು ದೀಕ್ಷಾಸ್ನಾನವನ್ನು ಪಡೆದು ಕ್ರಿಸ್ತಾವಲಂಬಿಯಾದನು. ಮಾತ್ರವಲ್ಲ, ಪೌಲನಿಗೆ ಧರ್ಮಪ್ರಚಾರ ಕಾರ್ಯದಲ್ಲಿ ಸಂಗಾತಿಯೂ ಸೇವಕನೂ ಆದನು. ಇವನು ಕ್ರೇಟ್ ದ್ವೀಪದ ಕ್ರೈಸ್ತಸಭೆಯ ಮೇಲ್ವಿಚಾರಕನಾಗಿದ್ದಾಗ ಪೌಲನು ಬರೆದ ಪತ್ರ ಇದು.
ಇದರಲ್ಲಿ ಉಲ್ಲೇಖಿಸಲಾಗಿರುವ ಎರಡು ಮುಖ್ಯ ವಿಷಯಗಳು ಯಾವುವೆಂದರೆ: ಮೊದಲನೆಯದಾಗಿ ದುರ್ನಡತೆಯುಳ್ಳ ಕ್ರೇಟ್ ನಿವಾಸಿಗಳ ಮುಂದೆ ಕ್ರೈಸ್ತಸಭೆಯ ಪ್ರಮುಖರು ಹೆಚ್ಚು ಸದ್ಗುಣಶೀಲರಾಗಿರಬೇಕೆಂಬ ಸಲಹೆ; ಎರಡನೆಯದಾಗಿ ಸಭೆಯಲ್ಲಿರುವ ವಿವಿಧ ವರ್ಗದವರಿಗೆ, ಅಂದರೆ ವಯಸ್ಕರಿಗೆ, ಗಂಡಸರಿಗೆ, ಹೆಂಗಸರಿಗೆ, ಯುವಕಯುವತಿಯರಿಗೆ, ಮಕ್ಕಳಿಗೆ ಮತ್ತು ಸೇವಕರಿಗೆ ಉಪದೇಶ ಮಾಡುವ ವಿಧಾನ.
ಕೊನೆಯದಾಗಿ, ಕ್ರೈಸ್ತ ನಡತೆಯ ಬಗ್ಗೆ ಸಲಹೆಗಳು: ವಿಶ್ವಾಸಿಗಳು ದ್ವೇಷ, ವಾಗ್ವಾದ, ಭಿನ್ನಭೇದಗಳನ್ನು ತೊರೆದು, ಎಲ್ಲರೊಂದಿಗೆ ಪ್ರೀತಿಪ್ರೇಮದಿಂದಲೂ ಶಾಂತಿಸಮಾಧಾನದಿಂದಲೂ ವರ್ತಿಸುವಂತೆ ನೋಡಿಕೊಳ್ಳಬೇಕು; ಈ ಸಲಹೆ ತೀತನಿಗೂ ಅನ್ವಯಿಸುತ್ತದೆ.
ಪರಿವಿಡಿ
ಪೀಠಿಕೆ 1:1-4
ಸಭಾಪ್ರಮುಖರು 1:5-16
ವಿವಿಧ ವರ್ಗದವರಿಗೆ ಉಪದೇಶ 2:1-15
ಪ್ರೋತ್ಸಾಹ ಮತ್ತು ಎಚ್ಚರಿಕೆ 3:1-11
ಸಮಾಪ್ತಿ 3:12-15