ಮುನ್ನುಡಿ
ಕನ್ನಡದಲ್ಲಿ ಗಾದೆಗಳು, ಸಂಸ್ಕೃತದಲ್ಲಿ ಸುಭಾಷಿತಗಳು ಇರುವಂತೆ ಬೈಬಲ್ಲಿನಲ್ಲೂ “ಜ್ಞಾನೋಕ್ತಿಗಳು” ಎಂಬ ಒಂದು ಪ್ರತ್ಯೇಕ ಕಾಂಡವೇ ಇದೆ. ಇದು ಧರ್ಮಪ್ರಚಾರಕ್ಕೆ, ನೀತಿಬೋಧೆಗೆ ಸೀಮಿತವಾಗಿರದೆ ದಿನನಿತ್ಯದ ಜೀವನಕ್ಕೆ ಅನ್ವಯಿಸುವ ಮುತ್ತಿನಂತ ಮಾತುಗಳಿಂದ ಕೂಡಿದೆ. “ಸರ್ವೇಶ್ವರನಲ್ಲಿ ಭಯಭಕ್ತಿಯೇ ಜ್ಞಾನಕ್ಕೆ ಮೂಲ” ಎಂದು ಆರಂಭದಲ್ಲೇ ಹೇಳಿದೆಯಾದರೂ ಸಾರ್ವಜನಿಕ ಮುದ್ರೆ ಬಿದ್ದಿರುವ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಚುಟುಕಾದ, ಚುರುಕಾದ ನಾಣ್ನುಡಿಗಳಿಂದ ಮನಮುಟ್ಟಿಸುತ್ತದೆ. ನಿಸ್ವಾರ್ಥತೆ, ಪ್ರಾಮಾಣಿಕತೆ, ನಯವಿನಯತೆ, ತಾಳ್ಮೆ, ದೀನದಲಿತರಲ್ಲಿ ಅನುಕಂಪ ಇತ್ಯಾದಿ ಸದ್ಗುಣಗಳನ್ನು ನೆನಪಿನಲ್ಲಿಟ್ಟು ಮೆಲುಕುಹಾಕುವಂತೆ ಮಾಡುತ್ತದೆ. ಪ್ರಾಚೀನ ಇಸ್ರಯೇಲ್ ದಾರ್ಶನಿಕರ ಅನುಭವದ ಸಾರವನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುತ್ತದೆ. ಇದರಲ್ಲಿನ ಹಲವಾರು ವಚನಗಳು ಲೋಕೋಕ್ತಿಗಳೂ ಆಗಿಬಿಟ್ಟಿವೆ.
ಪರಿವಿಡಿ
ಜ್ಞಾನದ ಪ್ರಶಂಸೆ 1:1—9:18
ಸೊಲೊಮೋನನ ಇನ್ನು ಕೆಲವು ಜ್ಞಾನೋಕ್ತಿಗಳು 10:1—29:27
ಆಗೂರನ ಹಿತೋಕ್ತಿಗಳು 30:1-33
ಇತರ ವಚನಗಳು 31:1-31