ಮುನ್ನುಡಿ
ಪ್ರವಾದಿ ಜೆಕರ್ಯನ ಗ್ರಂಥವನ್ನು ಒಂದನೇ ಅಧ್ಯಾಯದಿಂದ 8ನೇ ಅಧ್ಯಾಯದವರೆಗೆ ಮೊದಲನೇ ಭಾಗವಾಗಿಯೂ, ಒಂಭತ್ತನೇ ಅಧ್ಯಾಯದಿಂದ 14ನೇ ಅಧ್ಯಾಯದವರೆಗೆ ಎರಡನೇ ಭಾಗವಾಗಿಯೂ ವಿಂಗಡಿಸಬಹುದು. ಮೊದಲನೇ ಭಾಗ ರಚಿತವಾದದ್ದು ಕ್ರಿ. ಪೂ. 520ರಿಂದ 518ರೊಳಗೆ; ದರ್ಶನಗಳು, ಜೆರುಸಲೇಮಿನ ಪುನಸ್ಥಾಪನೆ, ಮಹಾದೇವಾಲಯದ ಪುನಃನಿರ್ಮಾಣ, ದೇವಜನರ ಶುದ್ಧೀಕರಣ, ಲೋಕರಕ್ಷಕನ ಆಗಮನ - ಈ ವಿಷಯಗಳು ಮೊದಲನೇ ಭಾಗದಲ್ಲಿ ಅಡಗಿದೆ. ಎರಡನೇ ಭಾಗದಲ್ಲಿ, ಬರಲಿರುವ ಲೋಕೋದ್ಧಾರಕನನ್ನು ಕುರಿತ ಸಂದೇಶವಿದೆ. ಲೋಕೋದ್ಧಾರಕನ ವಿಷಯ ಇತರ ಪ್ರವಾದನಾ ಗ್ರಂಥಗಳಲ್ಲೂ ಕಂಡುಬರುತ್ತದೆ. ಆದರೆ ಆತ ದೀನ ಹಾಗೂ ನಮ್ರಸ್ವಭಾವವುಳ್ಳವನು (9:9) ಎಂಬ ಅಂಶ ಇದರಲ್ಲಿ ವಿಶಿಷ್ಟವಾದುದು. ಅಂತೆಯೇ ಅಂತಿಮ ನ್ಯಾಯತೀರ್ಪು ಸಹ ಈ ಭಾಗದ ಮುಖ್ಯಾಂಶವೆನ್ನಬಹುದು.
ಪರಿವಿಡಿ
1. ಎಚ್ಚರಿಕೆ ಹಾಗೂ ನಿರೀಕ್ಷೆಯ ಸಂದೇಶ 1:1—8:23
2. ನೆರೆರಾಷ್ಟ್ರಗಳಿಗೆ ನ್ಯಾಯತೀರ್ಪು 9:1-8
3. ಬರಲಿರುವ ಶಾಂತಿಸಮೃದ್ಧಿ 9:9—14:21