ಕೀರ್ತನೆಗಳು 93 - ಕನ್ನಡ ಸತ್ಯವೇದವು C.L. Bible (BSI)ಪ್ರಭು - ರಾಜಾಧಿರಾಜ 1 ವಹಿಸಿಹನು ಪ್ರಭು, ರಾಜ್ಯಾಧಿಕಾರವನು I ಧರಿಸಿಹನು ಘನತೆಯ ವಸ್ತ್ರ ಲಾಂಛನವನು I ತೊಟ್ಟಿಹನು ಶೌರ್ಯವೆಂಬ ನಡುಕಟ್ಟನು I ಸ್ಥಿರಪಡಿಸಿಹನು ಕದಲದಂತೆ ಜಗವನು II 2 ನಿನ್ನ ಸಿಂಹಾಸನ ಸ್ಥಿರ ಆದಿಯಿಂದ I ನೀನಿರುವೆ ಪ್ರಭು ಅನಾದಿಯಿಂದ II 3 ಸಮುದ್ರಗಳು ಪ್ರಭು, ಮೊರೆಯುತಿಹವು I ಗರ್ಜನೆಗೈದು ಭೋರ್ಗರೆಯುತಿಹವು II 4 ಸಾಗರಗಳ ಗರ್ಜನೆಗಿಂತ I ಸಮುದ್ರ ತರಂಗಗಳಿಗಿಂತ I ಮಹೋನ್ನತ ಪ್ರಭು ಬಲವಂತ II 5 ನಿನ್ನ ಆಜ್ಞೆಗಳು ಪ್ರಭು, ಸುಸ್ಥಿರ I ನಿನ್ನ ಆಲಯಕೆ ಪವಿತ್ರತೆ ಅರ್ಹ I ಯುಗಯುಗಾಂತರಕೂ ಅದು ಅರ್ಹ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India