Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 61 - ಕನ್ನಡ ಸತ್ಯವೇದವು C.L. Bible (BSI)


ಪ್ರವಾಸಿಗನ ಪ್ರಾರ್ಥನೆ

1 ದೇವಾ ಆಲಿಸೆನ್ನ ಮೊರೆಯನು I ಕಿವಿಗೊಟ್ಟು ಕೇಳೆನ್ನ ಜಪವನು II

2 ಎದೆಗುಂದಿ ಮೊರೆಯಿಡುತ್ತಿರುವೆ ಜಗದೆಲ್ಲೆಯಿಂದ I ಹತ್ತಲಾಗದ ಆಶ್ರಯಗಿರಿಗೆ ಹತ್ತಿಸೆನ್ನ II

3 ದೇವಾ, ನೀನೆನಗೆ ಶರಣು ಮಹತ್ತರ I ಶತ್ರುಗೆಟುಕದ ಸುಭದ್ರ ಗೋಪುರ II

4 ನಿನ್ನ ಗುಡಾರವಾಗಲಿ ನನಗೆ ನಿರಂತರ ಬಿಡಾರ I ನಿನ್ನ ರೆಕ್ಕೆಗಳ ಮರೆಯೆ ನನಗೆ ಆಶ್ರಯದಾಗರ II

5 ನಾ ಹೊತ್ತ ಹರಕೆಗಳಿಗೆ ದೇವಾ ನೀ ಲಕ್ಷ್ಯವಿತ್ತೆ I ನಿನ್ನ ಭಕ್ತರಿಗೆ ಸಿಗುವ ಭಾದ್ಯತೆಯ ನನಗೂ ಇತ್ತೆ II

6 ದೀರ್ಘಾಯುಸ್ಸನು ದಯಪಾಲಿಸು ರಾಜನಿಗೆ I ತಲತಲಾಂತರಕು ಉಳಿಯಲಿ ಆತನಾಳ್ವಿಕೆ II

7 ದೇವರ ಸಾನ್ನಿಧ್ಯದಲಿ ಆತನು ಸದಾ ಸಾಮ್ರಾಜ್ಯವಾಳಲಿ I ನಿನ್ನಯ ಪ್ರೀತಿ ಸತ್ಯತೆಗಳು ಆತನಿಗೆ ಬೆಂಗಾವಲಾಗಿರಲಿ II

8 ಸಲ್ಲಿಸುವೆನಾಗ ದಿನಬಿಡದೆ ನಿನಗೆ ಹರಕೆಗಳನು I ಸಂಕೀರ್ತಿಸುವೆನು ಸದಾ ನಿನ್ನ ಶ್ರೀನಾಮವನು II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು