Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 148 - ಕನ್ನಡ ಸತ್ಯವೇದವು C.L. Bible (BSI)


ಹೊಗಳಲಿ ಭೂಮ್ಯಾಕಾಶಗಳು ಪ್ರಭುವನು

1 ಹೊಗಳಿರಿ ಸ್ವರ್ಗದಿಂದ ಪ್ರಭುವನು I ವಂದಿಸಿ ಮಹೋನ್ನತದಲಿ ಆತನನು II

2 ಆತನ ಸಮಸ್ತ ದೂತರೇ, ಸ್ತುತಿಸಿ ಆತನನು I ಆತನ ಎಲ್ಲಾ ಗಣಗಳೇ, ಹೊಗಳಿ ಆತನನು II

3 ಸೂರ್ಯಚಂದ್ರರೇ, ಹೊಗಳಿ ಆತನನು I ಮಿನುಗುವ ತಾರೆಗಳೇ, ಹೊಗಳಿ ಆತನನು II

4 ಉನ್ನತೋನ್ನತ ಆಕಾಶವೇ, ಹೊಗಳು ಆತನನು I ಅದರ ಮೇಲಿನ ಜಲರಾಶಿಗಳೇ, ಹೊಗಳಿ ಆತನನು II

5 ಹೊಗಳಲಿ ಪ್ರಭುವಿನ ನಾಮವನು ಇವೆಲ್ಲ I ಆತನ ಅಪ್ಪಣೆಗೆ ಉಂಟಾದವುಗಳೆಲ್ಲ II

6 ಸ್ಥಾಪಿಸಿದನು ಎಂದೆಂದಿಗೂ ಅವನ್ನು I ವಿಧಿಸಿಹನು ಮೀರಲಾಗದ ನಿಯಮವನು I

7 ತಿಮಿಂಗಲಗಳೂ ಆದಿಸಾಗರಗಳೂ I ಹೊಗಳಲಿ ಭೂಮಂಡಲದಿಂದ ಪ್ರಭುವನು II

8 ಕಿಚ್ಚು, ಕಲ್ಮಳೆ, ಹಿಮ, ಹಬೆ ಇವುಗಳೆಲ್ಲವೂ I ಆತ ಹೇಳಿದಂತೆ ಕೇಳುವ ಬಿರುಗಾಳಿಯೂ, II

9 ಎಲ್ಲಾ ಬೆಟ್ಟಗಳೂ ಗುಡ್ಡಗಳೂ I ಫಲವೃಕ್ಷಗಳೂ ದೇವದಾರುಗಳೂ II

10 ಕಾಡುಮೃಗಗಳು, ಸಾಕುಪ್ರಾಣಿಗಳು I ಕ್ರಿಮಿಕೀಟಗಳು, ಪ್ರಾಣಿಪಕ್ಷಿಗಳು II

11 ಭೂರಾಜರು, ಎಲ್ಲ ಜನಾಂಗಗಳು I ಅಧಿಕಾರಿಗಳು, ದೇಶಾಧಿಪತಿಗಳು II

12 ಯುವಕರೂ ಯುವತಿಯರೂ I ಮುದುಕರೂ ಮಕ್ಕಳೂ II

13 ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು I ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು I ಆತನ ಮಹತ್ತಾದ ಏಕೈಕ ನಾಮವನು II

14 ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ I ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ I ತನ್ನ ಆಪ್ತಜನರಾದ ಇಸ್ರಯೇಲರಿಗೆ I ಅಲ್ಲೆಲೂಯ! II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು