Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 141 - ಕನ್ನಡ ಸತ್ಯವೇದವು C.L. Bible (BSI)


ಸಜ್ಜನರು ಕೊಡುವ ಶಿಕ್ಷೆ - ಭಕ್ತನ ಪಾಲಿಗೆ ರಕ್ಷೆ

1 ಬೇಗನೆ ಬಾ ಪ್ರಭು, ಮೊರೆಯಿಡುವೆ ನಿನಗೆ I ಮೊರೆಯಿಡುವಾಗಲೆಲ್ಲ ಕಿವಿಗೊಡು ನನಗೆ II

2 ಸಮರ್ಪಕವಾಗಲಿ ನನ್ನ ಪ್ರಾರ್ಥನೆ ಧೂಪಾರತಿಯಂತೆ I ಕೈಮುಗಿದು ಮಾಡುವ ವಂದನೆ ಸಂಧ್ಯಾಬಲಿಯರ್ಪಣೆಯಂತೆ II

3 ಕಾವಲಿರಿಸು ಪ್ರಭು ನನ್ನ ಬಾಯಿಗೆ I ಪಹರೆಯಿರಲಿ ನನ್ನ ತುಟಿ ಕದಗಳಿಗೆ II

4 ಮಾಡು ನನ್ನ ಹೃದಯ ದುರಾಚಾರವನು ಮೆಚ್ಚದಂತೆ I ಕಾಪಾಡು ದುರ್ಜನರೊಡಗೂಡಿ ಕೇಡನು ಮಾಡದಂತೆ I ನೋಡು ದುರುಳರೌತಣಗಳಲಿ ನಾ ಪಾಲ್ಗೊಳ್ಳದಂತೆ II

5 ಸಜ್ಜನರು ವಿಧಿಸುವಾ ಶಿಕ್ಷೆ ಎನಗೆ ಕಟಾಕ್ಷ I ದುರ್ಜನರಿಂದ ನನಗಾಗದಿರಲಿ ಅಭಿಷೇಕ I ಸತತ ಪ್ರಾರ್ಥಿಸುವೆ ಆ ದುಷ್ಕೃತ್ಯಗಳ ವಿರುದ್ಧ II

6 ದುರುಳರ ಒಡೆಯರು ಶಿಖರದಿಂದ ಬಿದ್ದಾಗ ಕೆಳಕೆ I ನನ್ನ ಮಾತು ಯಥಾರ್ಥವೆಂದು ಜನ ಕಿವಿಗೊಡುವರೆನಗೆ II

7 ಉತ್ತ ಹೊಲದ ಹೆಂಟೆಗಳನು ಒಡೆದು ಚದರಿಸುವ ಹಾಗೆ I ಎರಚಲಾಗುವುದು ಅವರ ಎಲುಬುಗಳನು ಸನರಕದ ಬಾಯಿಗೆ II

8 ಹೇ ಪ್ರಭೂ, ದೇವಾ, ನನ್ನ ದೃಷ್ಟಿ ನಿನ್ನ ಮೇಲಿದೆ I ವಿನಾಶಕೊಪ್ಪಿಸಬೇಡೆನ್ನ, ನಿನ್ನಾಶ್ರಯ ಕೋರಿರುವೆ II

9 ಕಾಪಾಡು ಕೆಡುಕರೊಡ್ಡಿದ ಉರುಲಿನಿಂದ I ತಪ್ಪಿಸೆನ್ನನು ಅವರಿಟ್ಟ ಬೋನಿನಿಂದ II

10 ದುರುಳರೊಡ್ಡಿದ ಉರುಲಲಿ ಆ ದುರುಳರೆ ಸಿಕ್ಕಿಬೀಳಲಿ I ನಾನಾದರೊ ನುಗ್ಗಿ ನಡೆವೆನು ಸುರಕ್ಷಿತವಾಗಿಯೆ ಅಲ್ಲಿ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು