Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 136 - ಕನ್ನಡ ಸತ್ಯವೇದವು C.L. Bible (BSI)


ಪ್ರಭುವಿಗೆ ಸ್ತುತಿಮಾಲೆ

1 ಒಳ್ಳೆಯವನಾದ ಪ್ರಭುವಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

2 ದೇವಾದಿ ದೇವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

3 ಮಹೋನ್ನತ ಪ್ರಭುವಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

4 ಮಹತ್ಕಾರ್ಯವೆಸಗಬಲ್ಲ ಆ ಏಕೈಕನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

5 ಜ್ಞಾನದಿಂದ ಜಗವನು ನಿರ್ಮಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

6 ಜಲರಾಶಿಯ ಮೇಲೆ ಭೂಮಿಯನು ಹಾಸಿದವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

7 ಮಹಾ ಜ್ಯೋತಿರ್ಮಂಡಲವನು ಸೃಷ್ಟಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

8 ಹಗಲನ್ನಾಳಲು ಸೂರ್ಯನನ್ನು ಸೃಜಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

9 ರಾತ್ರಿಯನ್ನಾಳಲು ಚಂದ್ರ ನಕ್ಷತ್ರಗಳನ್ನು ಸೃಷ್ಟಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

10 ಈಜಿಪ್ಟಿನ ಚೊಚ್ಚಲುಗಳನು ಸಂಹರಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

11 ಇಸ್ರಯೇಲರನು ಅಲ್ಲಿಂದ ಹೊರತಂದವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

12 ಭುಜಬಲದಿಂದ ಕೈಚಾಚಿ ಅವರನು ಬಿಡಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

13 ಕೆಂಪು ಕಡಲನು ಇಬ್ಭಾಗಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

14 ಇಸ್ರಯೇಲರನು ಅದರ ನಡುವೆ ದಾಟಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

15 ಫರೋಹನನ್ನೂ ಅವನ ಸೈನ್ಯವನ್ನೂ ಆ ಕಡಲಲ್ಲಿ ಮುಳುಗಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

16 ತನ್ನ ಪ್ರಜೆಯನು ಅರಣ್ಯಮಾರ್ಗವಾಗಿ ಕರೆತಂದವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

17 ಬಲವಂತ ರಾಜರನು ಉರುಳಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

18 ಪ್ರಖ್ಯಾತ ರಾಜರನ್ನು ಸಂಹರಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

19 ಅಮೋರಿಯರ ರಾಜನಾದ ಸೀಹೋನನ್ನು ಕೊಂದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

20 ಬಾಷಾನಿನ ಅರಸನಾದ ಓಗನನ್ನು ಸಂಹರಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

21 ಅವರ ನಾಡನ್ನು ಇಸ್ರಯೇಲರಿಗೆ ಕೊಟ್ಟಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

22 ಅದನ್ನು ದಾಸರಾದ ನಮಗೆ ಸೊತ್ತಾಗಿ ನೀಡಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

23 ಹೀನ ಸ್ಥಿತಿಯಲ್ಲಿದ್ದ ನಮ್ಮನ್ನು ಜ್ಞಾಪಿಸಿಕೊಂಡಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

24 ಶತ್ರುಹಗೆಗಳಿಂದ ನಮ್ಮನ್ನು ಬಿಡಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

25 ಸಕಲ ಜೀವಿಗಳಿಗೆ ಆಹಾರ ನೀಡುವಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

26 ಪರಲೋಕದಲ್ಲಿರುವ ದೇವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು