Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 13 - ಕನ್ನಡ ಸತ್ಯವೇದವು C.L. Bible (BSI)


ಶತ್ರುಪೀಡಿತನ ಪ್ರಾರ್ಥನೆ

1 ಎಷ್ಟುಕಾಲ ಪ್ರಭು, ನೀ ಎನ್ನ ಪೂರ್ತಿ ಮರೆತಿರುವೆ? I ಇನ್ನೆಷ್ಟರ ತನಕ ನೀನೆನಗೆ ವಿಮುಖನಾಗಿರುವೆ? II

2 ಎನಿತುಕಾಲ ನಾ ಚಿಂತೆಯಿಂದಿರಬೇಕು? I ದಿನವೆಲ್ಲಾ ಮನದಲ್ಲಿ ನೊಂದಿರಬೇಕು? I ನನ್ನ ಮೇಲೆ ವೈರಿ ದೊರೆತನ ಮಾಡಬೇಕು? II

3 ಹೇ ಪ್ರಭು, ಹೇ ದೇವ, ಎನ್ನ ವೀಕ್ಷಿಸಿ ಸದುತ್ತರ ಪಾಲಿಸು I ಮರಣ ನಿದ್ರೆ ಬಾರದಂತೆ ನನ್ನ ನೇತ್ರಗಳನು ಬೆಳಗಿಸು II

4 ತಾನು ಜಯಗಳಿಸಿದೆನೆಂದು ಶತ್ರು ಹೇಳಿಕೊಳ್ಳದಿರಲಿ I ನಾನು ಜಾರಿ ಬಿದ್ದೆನೆಂದು ವೈರಿ ಹಿರಿಹಿಗ್ಗದಿರಲಿ II

5 ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ I ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ II

6 ಪ್ರಭು ಮಾಡಿದ ಮಹೋಪಕಾರಗಳಿಗಾಗಿ I ಹಾಡುವೆ ಗೀತವನು ಮನಃಪೂರ್ವಕವಾಗಿ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು