ಕೀರ್ತನೆಗಳು 125 - ಕನ್ನಡ ಸತ್ಯವೇದವು C.L. Bible (BSI)ಒಳಿತಾಗಲಿ ಒಳ್ಳೆಯವರಿಗೆ (ಯಾತ್ರಾಗೀತೆ) 1 ಪ್ರಭುವಿನಲಿ ನಂಬಿಕೆ ನಿರೀಕ್ಷೆಯಿಂದಿರುವವರು I ನಿಶ್ಚಲ, ಸುಸ್ಥಿರ, ಗಿರಿ ಸಿಯೋನಿನಂತೆ ಇರುವರು II 2 ಪರ್ವತಗಳಿರುವಂತೆ ಜೆರುಸಲೇಮಿನ ಸುತ್ತಮುತ್ತಲು I ಇಹನು ಪ್ರಭು ಇಂದಿಗೂ ಎಂದಿಗೂ ತನ್ನ ಜನರ ಸುತ್ತಲು II 3 ಸಜ್ಜನರ ನಾಡಿನಲಿ ಉಳಿಯದು ದುರ್ಜನರ ದಬ್ಬಾಳಿಕೆ I ಉಳಿಯಿತಾದರೆ ಸಜ್ಜನರೂ ಕೈಹಚ್ಚಬಹುದು ಅಕ್ರಮಕೆ II 4 ಒಳಿತನು ಮಾಡು ಪ್ರಭು, ಒಳ್ಳೆಯವರಿಗೆ I ಒಳ್ಳೆಯವರಿಗೆ ಮೇಣ್ ನೇರ ಮನಸ್ಕರಿಗೆ II 5 ಅಕ್ರಮಿಗಳ ದುರ್ಗತಿ ದುರ್ಮಾರ್ಗಿಗಳಿಗೆ I ಶುಭವಾಗಲಿ ಪ್ರಭೂ, ಇಸ್ರಯೇಲರಿಗೆ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India