ಕೀರ್ತನೆಗಳು 123 - ಕನ್ನಡ ಸತ್ಯವೇದವು C.L. Bible (BSI)ಭಕ್ತರ ಕಣ್ಣು ದೇವರತ್ತ (ಯಾತ್ರಾಗೀತೆ) 1 ಪರಲೋಕದಲಿ ಆಸೀನನಾಗಿರುವ ಪ್ರಭುವೆ I ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ II 2 ದಾಸನ ಕಣ್ಣು ಯಜಮಾನನತ್ತ I ದಾಸಿಯ ಕಣ್ಣು ಯಜಮಾನಿಯತ್ತ II ನನ್ನ ಕಣ್ಣು ಸ್ವಾಮಿದೇವನತ್ತ I ಆತನ ಕಟಾಕ್ಷವನ್ನು ನಿರೀಕ್ಷಿಸುತ್ತಾ II 3 ದಯೆತೋರು ಪ್ರಭು, ನಮಗೆ ದಯೆ ತೋರು I ಅತ್ಯಧಿಕವಾಗಿ ನಾವು ತಿರಸ್ಕೃತರು II 4 ಬೇಸತ್ತಿದೆ ಮನ ಗರ್ವಿಗಳ ನಿಂದೆಯಿಂದ I ಸುಖಭೋಗಿಗಳು ಮಾಡುವ ಅಪಹಾಸ್ಯದಿಂದ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India