Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 114 - ಕನ್ನಡ ಸತ್ಯವೇದವು C.L. Bible (BSI)


ಬಿಡುಗಡೆಯ ಹಾಡು

1 ಇಸ್ರಯೇಲ್ ಜನರು ಈಜಿಪ್ಟನು ಬಿಟ್ಟು ಹೊರಟಾಗ I ಯಕೋಬ್ಯರು ಪರ ನುಡಿಯಾಡುವರನು ಬಿಟ್ಟಗಲಿದಾಗ, II

2 ಜುದೇಯ ಆಯಿತಾತನಿಗೆ ದೇವಾಲಯ I ಇಸ್ರಯೇಲ್ ಆಯಿತಾತನಿಗೆ ಸ್ವರಾಜ್ಯ II

3 ಇದ ಕಂಡು ಓಡಿಹೋಯಿತು ಕಡಲು I ಮರಳಿ ಬಂದಿತು ಜೋರ್ಡಾನ್ ಹೊನಲು II

4 ಕುಪ್ಪಳಿಸಿದವು ಪರ್ವತಗಳು ಟಗರುಗಳಂತೆ I ಕುಣಿದವು ಬೆಟ್ಟಗುಡ್ಡಗಳು ಕುರಿಮರಿಗಳಂತೆ II

5 ಕಡಲೇ, ಓಡುತ್ತಿರುವೆ ಏಕೆ? I ಜೋರ್ಡನ್, ಮರಳುತಿರುವೆ ಏಕೆ? II

6 ಪರ್ವತಗಳೇ, ಕುಪ್ಪಳಿಸಿದಿರೇಕೆ ಟಗರುಗಳಂತೆ? I ಬೆಟ್ಟಗುಡ್ಡಗಳೇ, ಕುಣಿದಿರೇಕೆ ಕುರಿಮರಿಗಳಂತೆ? II

7 ನಡುಗು ಭೂಲೋಕವೇ, ಪ್ರಭುವಿನ ಮುಂದೆ I ನಡುನಡುಗು ಯಕೋಬ ದೇವರ ಮುಂದೆ II

8 ಮಾರ್ಪಡಿಸಿಹನು ಗೋರ್ಕಲ್ಲನು ಕೊಳವಾಗಿ I ಕಲ್ಲು ಬಂಡೆಯನು ನೀರಿನ ಬುಗ್ಗೆಯಾಗಿ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು