Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 110 - ಕನ್ನಡ ಸತ್ಯವೇದವು C.L. Bible (BSI)


ಗುರುರಾಜನ ವಿಜಯ

1 ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ I “ಆಸೀನನಾಗಿರು ನೀನು ನನ್ನ ಬಲಗಡೆಗೆ I ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ” II

2 ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು I ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು II

3 ಸೇನೆಯನು ನೀ ಅಣಿಗೊಳಿಸುವ ದಿನದೊಳು I ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು I ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು I ಉದಯಕಾಲದಿಬ್ಬನಿಯಂತೆ ಇಳಿದು ಬರುವರು II

4 “ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ” I ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ ಮಾತ II

5 ಬೆಂಬಲವಾಗಿ ನಿಂತಿಹನು ಪ್ರಭು ನಿನ್ನ ಹತ್ತಿರದಲೆ I ಸದೆಬಡಿವನು ಅರಸರನು ತನ್ನ ಪ್ರಕೋಪ ದಿನದಲೆ II

6 ನ್ಯಾಯತೀರಿಸುವನು ಪ್ರಭು ಸಕಲ ಜನಾಂಗಗಳಲಿ I ಛೇಧಿಸುವನು ಶತ್ರುಗಳ ಶಿರಸನು ರಣರಂಗದಲಿ I ತುಂಬಿಸುವನು ಹೆಣಗಳನು ಎಲ್ಲೆಡೆಗಳಲಿ II

7 ತೊರೆಯ ನೀರನು ಕುಡಿವನಾ ಒಡೆಯ I ತಲೆಯೆತ್ತಿ ನಡೆವನು ಗಳಿಸಿ ವಿಜಯ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು