Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 11 - ಕನ್ನಡ ಸತ್ಯವೇದವು C.L. Bible (BSI)


ಶರಣರಿಗಿದೆ ಸಂರಕ್ಷಣೆ

1 ನಾನು ಆಶ್ರಯಿಸಿಕೊಂಡಿರಲು ಪ್ರಭುವನು I ನೀವು ಹೇಳುವುದೆಂತು ನನಗೀ ಮಾತನು: II

2-3 “ನೇರ ಮನಸ್ಕರನು ಕೊಲ್ಲಲು ಇರುಳೊಳು I ಬಿಲ್ಲು ಬಗ್ಗಿಸಿಹರಿದೋ ಆ ದುರುಳರು I ಎದೆಗೆ ಬಾಣವನು ಹೂಡಿ ನಿಂತಿರುವರು” II “ಓಡಿರಿ, ಪಕ್ಷಿಪಾರಿವಾಳಗಳಂತೆ ಗಿರಿಶಿಖರಗಳಿಗೆ I ಅಸ್ತಿವಾರವೆ ಕಿತ್ತಿರಲು, ಗತಿಯೆನಿತು ಸತ್ಯವಂತರಿಗೆ?” II

4 ಪ್ರಭು ಪ್ರಸನ್ನವಿರುವನು ಪವಿತ್ರಾಲಯದಲಿ I ಸ್ಥಾಪಿಸಿಹನು ಸಿಂಹಾಸನವನು ಪರದಲಿ I ನರಮಾನವರನು ನೋಡುತಿಹನು ನೇತ್ರಗಳಲಿ I ಪರೀಕ್ಷಿಸುತಿಹನು ಅವರನು ಸೂಕ್ಷ್ಮರೀತಿಯಲಿ II

5 ಪರೀಕ್ಷಿಸುವನು ಪ್ರಭು ಸಜ್ಜನ ದುರ್ಜನರನು I ದ್ವೇಷಿಸುವನು ಮನಸಾರೆ ಹಿಂಸಾತ್ಮಕರನು II

6 ಅಗ್ನಿಗಂಧಕಗಳನು ದುರುಳರ ಮೇಲೆ ಮಳೆಗರೆಯಲಿ I ಉರಿಗಾಳಿಯೆ ಅವರ ಪಾಲಿನ ಧೂಮಪಾನವಾಗಲಿ II

7 ಸತ್ಯಸ್ವರೂಪನಾದ ಪ್ರಭು ಸತ್ಯ ಪ್ರಿಯನು I ಸತ್ಪುರುಷನು ಸೇರುವನು ಆತನ ಸನ್ನಿಧಿಯನು II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು