ಮುನ್ನುಡಿ
ಪ್ರವಾದನೆಯ ಗ್ರಂಥಗಳಲ್ಲಿ ಅತಿ ಚಿಕ್ಕದೆಂದರೆ ಓಬದ್ಯನ ಗ್ರಂಥ. ಕ್ರಿ. ಪೂ. 586ರಲ್ಲಿ ಜುದೇಯ ನಾಡಿನ ಮುಖ್ಯ ಪಟ್ಟಣವಾದ ಜೆರುಸಲೇಮ್ ನಗರ ನಾಶವಾಯಿತು. ಈ ಗ್ರಂಥ ರಚಿತವಾದುದು ಅನಂತರದಲ್ಲೇ.
ಜುದೇಯ ನಾಡಿನ ಶತ್ರುಗಳಲ್ಲಿ ಎದೋಮ್ ನಾಡು ಒಂದು. ಇದರ ನಿವಾಸಿಗಳು ಜೆರುಸಲೇಮಿನ ವಿನಾಶ ಕುರಿತು ಆನಂದಪಟ್ಟರು. ಮಾತ್ರವಲ್ಲ, ಆ ನಗರವನ್ನು ಕೊಳ್ಳೆಹೊಡೆದರು. ಅದರ ಶತ್ರುಗಳಿಗೂ ನೆರವಾದರು. ಈ ಕಾರಣ, ಎದೋಮಿಗೆ ಬರಲಿದ್ದ ದಂಡನೆಯನ್ನೂ ಸೋಲನ್ನೂ ಪ್ರವಾದಿ ಓಬದ್ಯನು ಮುಂತಿಳಿಸುತ್ತಾನೆ.
ಪರಿವಿಡಿ
ಎದೋಮಿಗೆ ಬರಲಿರುವ ದಂಡನೆ 1-14
ದೇವರ ದಿನ 15-21