ಮುನ್ನುಡಿ
“ಭಾರತದೇಶ” (ಇಂಡಿಯಾ) ಎಂಬ ಪದವನ್ನು ಇಮ್ಮಡಿಬಳಸುವ ಬೈಬಲ್ಲಿನ ಈ ಗ್ರಂಥ, ಪರ್ಷಿಯಾ ದೇಶದ ಅಹಷ್ವೇರೋಷನೆಂಬ ಚಕ್ರವರ್ತಿ ತನ್ನ ಚಳಿಗಾಲದ ಅರಮನೆಯಲ್ಲಿ ವಾಸಮಾಡುತ್ತಿದ್ದಾಗ ನಡೆದ ಘಟನೆಗಳನ್ನು ವಿವರಿಸುತ್ತದೆ.
ಚಕ್ರವರ್ತಿಯ ಮುಖ್ಯಾಧಿಕಾರಿಯಾದ ಹಾಮಾನನು, ಸೆರೆಯಾಳುಗಳಾಗಿ ಬಂದು ಪ್ರವರ್ಧಿಸುತ್ತಿದ್ದ ಯೆಹೂದ್ಯರನ್ನು ಸದೆಬಡಿಯಲು ಪ್ರಯತ್ನಿಸುತ್ತಾನೆ. ರೂಪಸಿಯೂ ಲಾವಣ್ಯವತಿಯೂ ಆದ ಒಬ್ಬ ಯೆಹೂದ್ಯ ಯುವತಿ ಸುದೈವದಿಂದ ಅದೇ ಸಮಯಕ್ಕೆ ಚಕ್ರವರ್ತಿಯ ಪ್ರೇಮಕ್ಕೆ ಪಾತ್ರಳಾಗುತ್ತಾಳೆ. ಕ್ರಮೇಣ ರಾಣಿಯ ಪದವಿಗೇ ಏರುತ್ತಾಳೆ. ಇವಳೇ ಎಸ್ತೇರಳು.
ತನ್ನ ನಾಡಿಗರು ನಿರ್ಮೂಲವಾಗದಂತೆ ಕಾಪಾಡುವುದರಲ್ಲಿ ಈ ಮಹಿಳೆ ತೋರುವ ಧೈರ್ಯಾಸಕ್ತಿ ಆಶ್ಚರ್ಯಕರವಾದುದು ಹಾಗು ಅಪೂರ್ವವಾದುದು.
‘ಪೂರಿಮ್’ ಎಂಬ ಯೆಹೂದ್ಯ ಹಬ್ಬದ ಹಿನ್ನೆಲೆ ಹಾಗು ಅರ್ಥವನ್ನು ಈ ಗ್ರಂಥದಲ್ಲಿ ಕಾಣಬಹುದು.
ಪರಿವಿಡಿ
ರಾಣಿಯಾದ ಎಸ್ತೇರಳು 1:1—2:23
ಯೆಹೂದ್ಯರ ವಿರುದ್ಧ ಹಾಮಾನನ ಒಳಸಂಚು 3:1—5:14
ಹಾಮಾನನ ಹತ್ಯೆ 6:1—7:10
ಶತ್ರುಗಳ ಮೇಲೆ ಯೆಹೂದ್ಯರು ಸಾಧಿಸಿದ ಜಯ 8:1—10:3