Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಸಂಖ್ಯಾಕಾಂಡ” ಎಂಬ ಬೈಬಲ್ಲಿನ ಈ ಭಾಗವು ಇಸ್ರಯೇಲ್ ಸಮಾಜದ ಸುಮಾರು ನಾಲ್ವತ್ತು ವರ್ಷದ ಚರಿತ್ರೆಯಿಂದ ಕೂಡಿದೆ. ಇಸ್ರಯೇಲರು ಸೀನಾಯಿ ಬೆಟ್ಟವನ್ನು ಬಿಟ್ಟು ತಮಗೆ ದೇವರು ವಾಗ್ದಾನ ಮಾಡಿದ ಕಾನಾನ್ ನಾಡಿನ ಗಡಿಯನ್ನು ಮುಟ್ಟುವ ತನಕ ನಡೆದ ಘಟನೆಗಳನ್ನು ನೆನಪಿಗೆ ತರುತ್ತದೆ. ಹೆಸರೇ ಸೂಚಿಸುವಂತೆ ಈ ಭಾಗದ ಮುಖ್ಯಾಂಶಗಳೆಂದರೆ ಜನಗಣತಿಗಳು. ಈ ಜನಾಂಗದ ಮೊದಲನೆಯ ಎಣಿಕೆ ಸೀನಾಯಿ ಬೆಟ್ಟದ ಬಳಿ ನಡೆಯಿತು. ಒಂದು ತಲೆಮಾರು ಮುಗಿದ ಬಳಿಕ ಇವರು ಜೋರ್ಡನ್ ನದಿಯ ಹತ್ತಿರವಿರುವ ಮೋವಾಬ್ ಮೈದಾನದಲ್ಲಿರುವಾಗ ಅವರ ಎರಡನೆಯ ಎಣಿಕೆ ಆಯಿತು. ಈ ಜನಗಣತಿಗಳ ನಡುವೆ ಇಸ್ರಯೇಲರು ಕಾನಾನ್ ನಾಡಿನ ದಕ್ಷಿಣಭಾಗದಲ್ಲಿ ಮೆರಿಬಾ (ಕಾದೇಶ್ ಬಾರ್‍ನೆ) ಎಂಬ ಸ್ಥಳವನ್ನು ಸೇರಿದ್ದರು. ಆದರೆ ಈ ಮಾರ್ಗವಾಗಿ ವಾಗ್ದತ್ತ ನಾಡನ್ನು ಪ್ರವೇಶಿಸಲಾಗಲಿಲ್ಲ. ಅನೇಕ ವರ್ಷಗಳಾದ ಮೇಲೆ ಅವರು ಆ ನಾಡಿನ ಪೂರ್ವಭಾಗಕ್ಕೆ ಬರುತ್ತಾರೆ. ಕೆಲವರು ಆ ಭಾಗದಲ್ಲಿ ವಾಸಿಸುತ್ತಾರೆ. ಮಿಕ್ಕವರು ಜೋರ್ಡಾನ್ ನದಿಯನ್ನು ದಾಟಿ ದೈವದತ್ತವಾದ ಆ ಕಾನಾನ್ ನಾಡನ್ನು ವಶಪಡಿಸಿಕೊಳ್ಳುತ್ತಾರೆ.
ಪ್ರಯಾಣದ ಕಷ್ಟದುಃಖಗಳ ನಡುವೆ ಆ ಜನರ ಜಿಗುಪ್ಸೆ, ದೇವರ ಹಾಗು ಅವರ ಪ್ರತಿನಿಧಿ ಮೋಶೆಯ ವಿರುದ್ಧ ಪ್ರತಿಭಟನೆ, ಅವಿಶ್ವಾಸ, ಆದರೂ ಮೋಶೆಯ ಸ್ಥೈರ್ಯ, ದೇವರ ಸೈರಣೆ, ಜನರ ಮೇಲೆ ಅವರಿಗಿದ್ದ ಅಪಾರ ಅಕ್ಕರೆ ಇವು ಈ ಕಾಂಡದ ಮುಖ್ಯಾಂಶಗಳು.
ಪರಿವಿಡಿ
ಸೀನಾಯಿ ಬೆಟ್ಟವನ್ನು ಬಿಟ್ಟು ತೆರಳಲು ಇಸ್ರಯೇಲರ ಸಿದ್ಧತೆ 1:1—9:23
ಅ) ಮೊತ್ತಮೊದಲನೆಯ ಜನಗಣತಿ 1:1—4:49
ಆ) ವಿವಿಧ ವಿಧಿನಿಬಂಧನೆಗಳು 5:1—8:26
ಇ) ಎರಡನೇ ಪಾಸ್ಕಭೋಜನ 9:1-23
ಸೀನಾಯಿ ಬೆಟ್ಟದಿಂದ ಮೋವಾಬ್ ಪ್ರಾಂತದವರೆಗೆ 10:1—21:35
ಮೋವಾಬಿನಲ್ಲಿ ನಡೆದ ಘಟನೆಗಳು 22:1—32:42
ಈಜಿಪ್ಟಿನಿಂದ ಮೋವಾಬ್‍ವರೆಗಿನ ಪ್ರಯಾಣದ ಸಾರಾಂಶ 33:1-49
ಜೋರ್ಡನ್ ನದಿ ದಾಟುವುದಕ್ಕೆ ಮುಂಚೆ ಕೊಟ್ಟ ಕಟ್ಟಳೆಗಳು 33:50—36:13

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು