ಅರಣ್ಯಕಾಂಡ 7 - ಕನ್ನಡ ಸತ್ಯವೇದವು C.L. Bible (BSI)ಗೋತ್ರನಾಯಕರ ಕಾಣಿಕೆಗಳು 1 ಮೋಶೆ ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದ ಮೇಲೆ ಅದನ್ನೂ ಅದರ ಸಾಮಾನುಗಳನ್ನೂ ಹಾಗೂ ಬಲಿಪೀಠವನ್ನು ಅದರ ಉಪಕರಣಗಳನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದನು. 2 ಆಗ ಇಸ್ರಯೇಲರ ಮುಖ್ಯಸ್ಥರು, ಅಂದರೆ ಗೋತ್ರನಾಯಕರು ಹಾಗೂ ಕುಲಾಧಿಪತಿಗಳಾಗಿದ್ದು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು, ಕಾಣಿಕೆಗಳನ್ನು ತಂದೊಪ್ಪಿಸಿದರು. 3 ಇಬ್ಬರಿಬ್ಬರು ಒಂದು ಕಮಾನು ಬಂಡಿಯನ್ನೂ ಒಂದು ಜೊತೆ ಎತ್ತುಗಳನ್ನೂ ಅಂತು ಆರು ಬಂಡಿಗಳನ್ನೂ ಆರು ಜೊತೆ ಎತ್ತುಗಳನ್ನೂ ದೇವದರ್ಶನದ ಗುಡಾರದ ಮುಂದೆ ಸರ್ವೇಶ್ವರನ ಸನ್ನಿಧಿಗೆ ತಂದು ಅರ್ಪಿಸಿದರು. 4 ಸರ್ವೇಶ್ವರ ಸ್ವಾಮಿ ಮೋಶೆಗೆ, 5 “ಈ ಕಾಣಿಕೆಯ ವಸ್ತುಗಳನ್ನು ಇವರ ಕೈಯಿಂದ ತೆಗೆದುಕೋ; ಇವು ದೇವದರ್ಶನದ ಗುಡಾರದ ಸೇವೆಗೆ ಉಪಯೋಗವಾಗಲಿ. ಲೇವಿಯರಿಗೆ ಅವರವರ ಕೆಲಸಕ್ಕೆ ತಕ್ಕ ಹಾಗೆ ಅವುಗಳನ್ನು ಕೊಡು,” ಎಂದು ಆಜ್ಞಾಪಿಸಿದರು. 6 ಅಂತೆಯೇ, ಮೋಶೆ ಆ ಬಂಡಿಗಳನ್ನು ಹಾಗೂ ಎತ್ತುಗಳನ್ನು ತೆಗೆದುಕೊಂಡು ಲೇವಿಯರಿಗೆ ಕೊಟ್ಟನು. 7 ಎರಡು ಬಂಡಿಗಳನ್ನು ಹಾಗೂ ನಾಲ್ಕು ಎತ್ತುಗಳನ್ನು ಗೇರ್ಷೋನ್ಯರಿಗೆ 8 ನಾಲ್ಕು ಬಂಡಿ ಹಾಗೂ ಎಂಟು ಎತ್ತುಗಳನ್ನು ಮೆರಾರೀಯರಿಗೆ ಅವರವರ ಸೇವೆಗೆ ತಕ್ಕ ಹಾಗೆ ಕೊಟ್ಟನು. ಇವರು ಮಹಾಯಾಜಕ ಆರೋನನ ಮಗ ಈತಾಮಾರನ ಕೈಕೆಳಗೆ ಸೇವೆ ಮಾಡಬೇಕಾಗಿತ್ತು. 9 ಕೆಹಾತ್ಯರಿಗೆ ಮಾತ್ರ ಏನನ್ನೂ ಕೊಡಲಿಲ್ಲ. ಏಕೆಂದರೆ ದೇವದರ್ಶನದ ಗುಡಾರದ ಸಾಮಾನುಗಳನ್ನು ಸಾಗಿಸುವುದೇ ಅವರಿಗೆ ನೇಮಕವಾದ ಕೆಲಸವಾಗಿತ್ತು. ಅವರು ಅವುಗಳನ್ನು ಹೆಗಲ ಮೇಲೆ ಹೊರಬೇಕಾಗಿತ್ತು. 10 ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಕಾಣಿಕೆಗಳನ್ನು ತಂದು ಅದರ ಮುಂದೆ ಇಟ್ಟರು. 11 ಆಗ ಸರ್ವೇಶ್ವರ ಮೋಶೆಗೆ, “ಒಬ್ಬೊಬ್ಬ ಕುಲಾಧಿಪತಿ ಒಂದೊಂದು ದಿನ ಬಲಿಪೀಠದ ಪ್ರತಿಷ್ಠೆಗಾಗಿ ತನ್ನ ಕಾಣಿಕೆಯನ್ನು ಸಮರ್ಪಿಸಲಿ,” ಎಂದು ಆಜ್ಞಾಪಿಸಿದನು. 12 ಮೊದಲನೆಯ ದಿನ ಕಾಣಿಕೆ ತಂದೊಪ್ಪಿಸಿದವನು ಯೆಹೂದ ಕುಲಾಧಿಪತಿ ಅಮ್ಮೀನಾದಾಬನ ಮಗ ನಹಶೋನ. 13 ಅವನು ತಂದ ಕಾಣಿಕೆಗಳು: ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಬೆಳ್ಳಿಯ ಒಂದು ಹರಿವಾಣ; 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 14 ಧೂಪ ದ್ರವ್ಯ ತುಂಬಿದ್ದ 10 ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ. 15 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ; 16 ಪಾಪಪರಿಹಾರಕ ಬಲಿಗಾಗಿ ಒಂದು ಹೋತ; 17 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಅಮ್ಮೀನಾದಾಬನ ಮಗ ನಹಶೋನನು ಸಮರ್ಪಿಸಿದ ಕಾಣಿಕೆಗಳು ಇವೇ. 18 ಎರಡನೆಯ ದಿನ ಇಸ್ಸಾಕಾರ್ ಕುಲಾಧಿಪತಿ ಚೂವಾರನ ಮಗ ನೆತನೇಲನು ತಂದ ಕಾಣಿಕೆಗಳು: 19 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ; 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 20 ಧೂಪದ್ರವ್ಯ ತುಂಬಿದ್ದ 10 ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 21 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ 22 ಪಾಪಪರಿಹಾರಕ ಬಲಿಗಾಗಿ ಒಂದು ಹೋತ; 23 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಚೂವಾರನ ಮಗ ನೆತನೇಲನು ಕೊಟ್ಟ ಕಾಣಿಕೆಗಳು. 24 ಮೂರನೆಯ ದಿನ ಜೆಬುಲೂನ್ ಕುಲಾಧಿಪತಿ ಹೇಲೋನನ ಮಗ ಎಲೀಯಾಬನು ತಂದ ಕಾಣಿಕೆಗಳು: 25 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 26 ಧೂಪದ್ರವ್ಯ ತುಂಬಿದ್ದ 10 ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 27 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದಕುರಿ, 28 ಪಾಪಪರಿಹಾರಕ ಬಲಿಗಾಗಿ ಒಂದು ಹೋತ; 29 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಹೇಲೋನನ ಮಗ ಎಲೀಯಾಬನು ಸಮರ್ಪಿಸಿದ ಕಾಣಿಕೆಗಳು. 30 ನಾಲ್ಕನೆಯ ದಿನ ರೂಬೇನ್ ಕುಲಾಧಿಪತಿ ಶೆದೇಯೂರನ ಮಗ ಎಲೀಚೂರನು ತಂದ ಕಾಣಿಕೆಗಳು: 31 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 32 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 33 ದಹನ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 34 ಪಾಪ ಪರಿಹಾರಕ ಬಲಿಗಾಗಿ ಒಂದು ಹೋತ, 35 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು, ಶೆದೇಯೂರನ ಮಗ ಎಲೀಚೂರನು ಸಮರ್ಪಿಸಿದ ಕಾಣಿಕೆಗಳು ಇವೇ. 36 ಐದನೆಯ ದಿನ ಸಿಮೆಯೋನ್ ಕುಲಾಧಿಪತಿ ಚೂರಿಷದ್ದೈಯನ ಮಗ ಶೆಲುಮೀಯೇಲನು ತಂದ ಕಾಣಿಕೆಗಳು: 37 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು. 38 ಧೂಪದ್ರವ್ಯ ತುಂಬಿದ್ದ 10 ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 39 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 40 ಪಾಪ ಪರಿಹಾರಕ ಬಲಿಗಾಗಿ ಒಂದು ಹೋತ; 41 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಚೂರೀಷದ್ದೈಯನ ಮಗ ಶೆಲುಮೀಯೇಲನು ಸಮರ್ಪಿಸಿದ ಕಾಣಿಕೆಗಳು. 42 ಆರನೆಯ ದಿನ ಗಾದ್ ಕುಲಾಧಿಪತಿ ದೆಗೂವೇಲನ ಮಗ ಎಲ್ಯಾಸಾಫನು ತಂದ ಕಾಣಿಕೆಗಳು: 43 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 44 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 45 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 46 ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ; 47 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ದೆಗೂವೇಲನ ಮಗ ಎಲ್ಯಾಸಾಫನು ಸಮರ್ಪಿಸಿದ ಕಾಣಿಕೆಗಳು. 48 ಏಳನೆಯ ದಿನ ಎಫ್ರಾಯಿಮ್ ಕುಲಾಧಿಪತಿ ಅಮ್ಮೂಹೂದನ ಮಗ ಎಲೀಷಾವನು ತಂದ ಕಾಣಿಕೆಗಳು: 49 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 50 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 51 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 52 ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ; 53 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಅಮ್ಮೀಹೂದನ ಮಗ ಎಲೀಷಾವನು ಸಮರ್ಪಿಸಿದ ಕಾಣಿಕೆಗಳು ಇವೇ. 54 ಎಂಟನೆಯ ದಿನ ಮನಸ್ಸೆ ಕುಲಾಧಿಪತಿ ಪೆದಾಚೂರನ ಮಗ ಗಮ್ಲೀಯೇಲನು ತಂದ ಕಾಣಿಕೆಗಳು: 55 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 56 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 57 ಸರ್ವಾಂಗ ಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 58 ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ; 59 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಪೆದಾಚೂರನ ಮಗ ಗಮ್ಲೀಯೇಲನು ಸಮರ್ಪಿಸಿದ ಕಾಣಿಕೆಗಳು ಇವೇ. 60 ಒಂಬತ್ತನೆಯ ದಿನ ಬೆನ್ಯಾಮಿನ್ ಕುಲಾಧಿಪತಿ ಗಿದ್ಯೋನಿಯ ಮಗ ಅಬೀದಾನನು ತಂದ ಕಾಣಿಕೆಗಳು: 61 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 62 ಧೂಪದ್ರವ್ಯ ತುಂಬಿದ್ದ 10 ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 63 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 64 ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ; 65 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಗಿದ್ಯೋನಿಯ ಮಗ ಅಬೀದಾನನು ಸಮರ್ಪಿಸಿದ ಕಾಣಿಕೆಗಳು. 66 ಹತ್ತನೆಯ ದಿನ ದಾನ್ ಕುಲಾಧಿಪತಿ ಅಮ್ಮೀಷದ್ದೈಯನ ಮಗ ಅಹೀಗೆಜೆರನು ತಂದ ಕಾಣಿಕೆಗಳು: 67 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 68 ಧೂಪದ್ರವ್ಯ ತುಂಬಿದ್ದ 10 ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 69 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 70 ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ; 71 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಅಮ್ಮೀಷದ್ದೈಯನ ಮಗ ಅಹೀಗೆಜೆರನು ಸಮರ್ಪಿಸಿದ ಕಾಣಿಕೆಗಳು ಇವೇ. 72 ಹನ್ನೊಂದನೆಯ ದಿನ ಆಶೇರ್ ಕುಲಾಧಿಪತಿ ಒಕ್ರಾನನ ಮಗ ಪಗೀಯೇಲನು ತಂದ ಕಾಣಿಕೆಗಳು: 73 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 74 ಧೂಪದ್ರವ್ಯ ತುಂಬಿದ್ದ 10 ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 75 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 76 ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ; 77 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಒಕ್ರಾನನ ಮಗ ಪಗೀಯೇಲನು ಸಮರ್ಪಿಸಿದ ಕಾಣಿಕೆಗಳು. 78 ಹನ್ನೆರಡನೆಯ ದಿನ ನಫ್ತಾಲಿ ಕುಲಾಧಿಪತಿ ಏನಾನನ ಮಗ ಅಹೀರನು ತಂದ ಕಾಣಿಕೆಗಳು: 79 ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು 80 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ 81 ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ, 82 ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ; 83 ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಏನಾನನ ಮಗ ಅಹೀರನು ಸಮರ್ಪಿಸಿದ ಕಾಣಿಕೆಗಳು. 84 ಬಲಿಪೀಠವನ್ನು ಅಭಿಷೇಕಿಸಲಾದ ದಿನದಂದು ಇಸ್ರಯೇಲರ ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಸಮರ್ಪಿಸಿದ ಕಾಣಿಕೆಗಳು ಒಟ್ಟು: 12 ಬೆಳ್ಳಿಯ ಹರಿವಾಣಗಳು; 12 ಬೆಳ್ಳಿಯ ಬಟ್ಟಲುಗಳು; 12 ಚಿನ್ನದ ಧೂಪಾರತಿಗಳು; 85 ಒಂದೊಂದು ಬೆಳ್ಳಿಯ ಹರಿವಾಣ 130 ಶೆಕೆಲ್ ತೂಕವುಳ್ಳದ್ದಾಗಿತ್ತು; ಒಂದೊಂದು ಬೆಳ್ಳಿಯ ಬಟ್ಟಲು 70 ಶೆಕೆಲ್ ತೂಕವುಳ್ಳದ್ದಾಗಿತ್ತು; ಆ ಬೆಳ್ಳಿಯ ಪಾತ್ರೆಗಳ ಒಟ್ಟು ತೂಕ ದೇವಸ್ಥಾನದ ನಾಣ್ಯದ ತೂಕದ ಮೇರೆಗೆ 2400 ಶೆಕೆಲ್ ತೂಕ. 86 ಧೂಫದ್ರವ್ಯ ತುಂಬಿದ್ದ ಚಿನ್ನದ ಧೂಪಾರತಿಗಳು ಹನ್ನೆರಡು; ದೇವಸ್ಥಾನದ ನಾಣ್ಯದ ಪ್ರಕಾರ ಒಂದೊಂದರ ತೂಕ 10 ಶೆಕೆಲ್. ಹೀಗೆ ಸರ್ವೇಶ್ವರ ಸ್ವಾಮಿ ಆತನೊಡನೆ ಮಾತಾಡಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India