ಮುನ್ನುಡಿ
ಯೊವಾನ್ನನು ಈ ಎರಡನೆಯ ಪತ್ರವನ್ನು ಒಬ್ಬ “ಶ್ರೀಮಾತೆಗೂ ಆಕೆಯ ಮಕ್ಕಳಿಗೂ” ಬರೆದನೆಂದು ಹೇಳಲಾಗಿದೆ. ಇಲ್ಲಿ ಶ್ರೀಮಾತೆ ಮತ್ತು ಆಕೆಯ ಮಕ್ಕಳು ಎಂದರೆ ಒಂದು ಸ್ಥಳೀಯ ಕ್ರೈಸ್ತಸಭೆ ಮತ್ತು ಅದರ ಸದಸ್ಯರು ಎಂಬುದು ಹಲವರ ಅಭಿಪ್ರಾಯ. ಸಭಾಪ್ರಮುಖನಾದ ಲೇಖಕನು ನೆರೆಯ ಸಭೆಗೆ ಅತ್ಯಂತ ಆತ್ಮೀಯತೆಯಿಂದ ಈ ಪುಟ್ಟ ಪತ್ರವನ್ನು ಬರೆದಿದ್ದಾನೆ.
ಜನರು ಒಬ್ಬರನ್ನೊಬ್ಬರು ಪ್ರೀತಿಸಬೇಕು; ಸುಳ್ಳುಬೋಧಕರ ಬಗ್ಗೆ ಎಚ್ಚರಿಕೆಯಿಂದಿರಬೇಕು - ಇದೇ ಈ ಪತ್ರದ ಸಂದೇಶ.
ಪರಿವಿಡಿ
ಪೀಠಿಕೆ 1-3
ಪ್ರೀತಿಯ ಪ್ರಾಮುಖ್ಯತೆ 4-6
ಸುಳ್ಳುಬೋಧಕರ ಬಗ್ಗೆ ಎಚ್ಚರಿಕೆ 7-11
ಸಮಾಪ್ತಿ 12-13