ಮುನ್ನುಡಿ
ಪೇತ್ರನು ಬರೆದ ಈ ಎರಡನೆಯ ಪತ್ರ ಅಂದಿನಕಾಲದ ಕ್ರೈಸ್ತಸಭೆಗಳನ್ನು ಉದ್ದೇಶಿಸಿ ಕ್ರೈಸ್ತಭಕ್ತಾದಿಗಳಿಗೆ ಎಚ್ಚರಿಕೆ ನೀಡಲು ಬರೆಯಲಾದುದು. ಇದನ್ನು ಬರೆದ ಸಂದರ್ಭದಲ್ಲಿ ಅನೇಕರು ತಮ್ಮ ಹುಸಿ ಬೋಧನೆಯಿಂದ ವಿಶ್ವಾಸಿಗಳನ್ನು ಮರುಳುಗೊಳಿಸಿ, ಅನೈತಿಕತೆಯ ಮಾರ್ಗಕ್ಕೆ ಎಳೆಯುತ್ತಿದ್ದರು. ಇಂಥ ಸಂದರ್ಭಗಳಲ್ಲಿ ಭಕ್ತಾದಿಗಳು, ಕ್ರಿಸ್ತೇಸುವನ್ನು ಕಣ್ಣಾರೆ ಕಂಡು ಅವರ ಬೋಧನೆಯನ್ನು ಕಿವಿಯಾರೆ ಕೇಳಿ, ಅವರೊಡನೆ ಜೀವಿಸಿದ ವ್ಯಕ್ತಿಗಳ ಸಂಪರ್ಕವನ್ನಿಟ್ಟುಕೊಳ್ಳಬೇಕು. ದೇವರ ಹಾಗೂ ಕ್ರಿಸ್ತೇಸುವಿನ ನಿಜವಾದ ಜ್ಞಾನವನ್ನು ಪಡೆಯಲೆತ್ನಿಸಬೇಕು ಎಂದು ಲೇಖಕನು ಹುರಿದುಂಬಿಸುತ್ತಾನೆ.
ಜನರು ನಿರೀಕ್ಷಿಸಿದ್ದಂತೆ ಯೇಸುಸ್ವಾಮಿ ಶೀಘ್ರದಲ್ಲೇ ಪುನರಾಗಮಿಸುವುದಿಲ್ಲವೆಂದು ಕೆಲವರು ಪ್ರಚಾರಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ, “ಯಾರೊಬ್ಬನೂ ನಾಶವಾಗದೆ ಎಲ್ಲರೂ ಪಾಪವನ್ನು ಪರಿತ್ಯಜಿಸಿ ಪ್ರಭುವಿಗೆ ಅಭಿಮುಖರಾಗಬೇಕು” ಎಂಬ ಉದ್ದೇಶದಿಂದ ಯೇಸುವಿನ ಪುನರಾಗಮನ ತಡವಾಗುತ್ತಿದೆ ಎಂದು ಲೇಖಕನು ಸಮರ್ಥಿಸುತ್ತಾನೆ.
ಪರಿವಿಡಿ
ಪೀಠಿಕೆ 1:1-2
ಕ್ರೈಸ್ತಕರೆ 1:3-21
ಹುಸಿಬೋಧಕರು 2:1-22
ಯೇಸುವಿನ ಪುನರಾಗಮನ 3:1-18