ಮುನ್ನುಡಿ
ಬೈಬಲ್ ಗ್ರಂಥದ “ಪೂರ್ವಕಾಲದ ಇತಿಹಾಸ” ಎಂಬ ಈ ಎರಡನೇ ಭಾಗವು ಮೊದಲನೆಯ ಭಾಗ ಎಲ್ಲಿ ಮುಕ್ತಾಯಗೊಳ್ಳುತ್ತದೋ ಅಲ್ಲಿಂದಲೇ ಆರಂಭವಾಗುತ್ತದೆ. ಅರಸ ಸೊಲೊಮೋನನ ಆಡಳಿತ, ಅವನು ಜೆರುಸಲೇಮಿನಲ್ಲಿ ಕಟ್ಟಿಸಿದ ಮಹಾದೇವಾಲಯ ಹಾಗೂ ಅವನ ಮರಣ ಇವುಗಳನ್ನು ವಿವರಿಸಿದ ಮೇಲೆ, ಸಮಗ್ರ ಇಸ್ರಯೇಲ್ ಹೇಗೆ ಉತ್ತರ ಹಾಗೂ ದಕ್ಷಿಣ ಪ್ರಾಂತ್ಯಗಳಾಗಿ ಸೀಳಿ ಹೋಯಿತೆಂಬುದರತ್ತ ಓದುಗರ ಗಮನ ಸೆಳೆಯುತ್ತದೆ. ‘ಇಸ್ರಯೇಲ್’ ಎಂಬ ಹೆಸರನ್ನು ಉಳಿಸಿಕೊಂಡ ಉತ್ತರ ಪ್ರಾಂತ್ಯದ ರಾಜಧಾನಿ ಸಮಾರಿಯ. ‘ಜುದೇಯ’ ಎಂಬ ಹೆಸರಿನಿಂದ ಕರೆಯಲಾಗುವ ದಕ್ಷಿಣ ಪ್ರಾಂತ್ಯದ ರಾಜಧಾನಿ ಜೆರುಸಲೇಮ್. ಈ ಎರಡು ಪ್ರಾಂತಗಳ ನಡುವೆ ಕದನ ನಡೆಯುತ್ತದೆ. ಉತ್ತರ ಪ್ರಾಂತ್ಯ ತನ್ನ ಅರಸನಾದ ಯಾರೊಬ್ಬಾಮನ ನಾಯಕತ್ವದಲ್ಲಿ ದಕ್ಷಿಣ ಪ್ರಾಂತ್ಯದ ಅರಸನಾದ ರೆಹಬ್ಬಾಮನ ವಿರುದ್ಧ ದಂಗೆ ಏಳುತ್ತದೆ.
ತದನಂತರ ಜುದೇಯ ಪ್ರಾಂತ್ಯದ ಚರಿತ್ರೆಯನ್ನೇ ಇಲ್ಲಿ ಮುಂದುವರಿಸಲಾಗಿದೆ. ಕ್ರಿ. ಪೂ. 586ರಲ್ಲಿ ಸಂಭವಿಸಿದ ಜೆರುಸಲೇಮಿನ ಪತನದೊಂದಿಗೆ ಈ ಎರಡನೆಯ ಭಾಗ ಕೊನೆಗೊಳ್ಳುತ್ತದೆ.
ಪರಿವಿಡಿ
ಸೊಲೊಮೋನನ ಆಡಳಿತ 1:1—9:31
ಅ) ಅವನ ಆಳ್ವಿಕೆಯ ಮೊದಲ ವರ್ಷಗಳು 1:1-17
ಆ) ಮಹಾದೇವಾಲಯದ ನಿರ್ಮಾಣ 2:1—7:10
ಇ) ಅನಂತರ ನಡೆದ ಘಟನೆಗಳು 7:11—9:31
ಉತ್ತರ ಪ್ರಾಂತ್ಯದಿಂದ ದಂಗೆ 10:1-19
ಜುದೇಯದ ಅರಸರು 11:1—36:12
ಜೆರುಸಲೇಮಿನ ಪತನ 36:13-23