ಮುನ್ನುಡಿ
ಕ್ರಿಸ್ತಯೇಸುವಿನ ಪುನರಾಗಮನದ ಬಗ್ಗೆ ವಾದವಿವಾದಗಳು ಪ್ರಬಲವಾಗಿ ಥೆಸಲೋನಿಕದ ಸಭೆಯಲ್ಲಿ ಕಾಣಿಸಿಕೊಂಡಿದ್ದ ಗೊಂದಲ ಮುಂದುವರೆಯುತ್ತಿತ್ತು. ಪ್ರಭು ಯೇಸುವಿನ ಪುನರಾಗಮನದ ದಿನ ಈಗಾಗಲೇ ಬಂದಿದೆ ಎಂಬ ಅಭಿಪ್ರಾಯವನ್ನು ಕೆಲವರು ಪ್ರಚಾರ ಮಾಡುತ್ತಿದ್ದರು. ಇಂಥ ಅಭಿಪ್ರಾಯವನ್ನು ಅಲ್ಲಗಳೆಯುವ ಸಲುವಾಗಿ ಪೌಲನು ಈ ಪತ್ರವನ್ನು ಥೆಸಲೋನಿಕದ ಸಭೆಗೆ ಬರೆಯುತ್ತಾನೆ.
ಲೇಖಕನು ಥೆಸಲೋನಿಯರ ನಿಲುವನ್ನು ತಿದ್ದುತ್ತಾನೆ. ಕ್ರಿಸ್ತಯೇಸು ಪುನರಾಗಮಿಸುವುದಕ್ಕೆ ಮುಂಚೆ, ಕ್ರಿಸ್ತವಿರೋಧಿಯಾದ “ಪಾಪ ಪುರುಷ” ಎಂಬ ಗುಪ್ತಶಕ್ತಿಯ ಕೈವಾಡ ಹೆಚ್ಚಿ, ಕೆಡುಕು ಮತ್ತು ದುಷ್ಟತನ ಪರಮಾವಧಿಯನ್ನು ಮುಟ್ಟುತ್ತವೆ.
ಇಂತಿರಲು, ಕ್ರೈಸ್ತವಿಶ್ವಾಸಿಗಳು ತಮಗೆ ಬಂದೊದಗುವ ಕಷ್ಟಸಂಕಟಗಳಲ್ಲೂ ವಿಶ್ವಾಸದಲ್ಲಿ ಸ್ಥಿರವಾಗಿ ನಿಲ್ಲಬೇಕು; ಪ್ರೇಷಿತ ಪೌಲನ ಮತ್ತು ಅವನ ಸಂಗಡಿಗರ ಆದರ್ಶವನ್ನು ಅನುಸರಿಸಿ ದುಡಿಮೆಯಿಂದ ಜೀವನ ನಡೆಸಬೇಕು; ಒಳಿತನ್ನು ಮಾಡುವುದರಲ್ಲಿ ಇನಿತೂ ಹಿಂಜರಿಯದೆ ಮುನ್ನುಗ್ಗಲೇಬೇಕು ಎಂದು ಈ ಪತ್ರ ಓದುಗರನ್ನು ಹುರಿದುಂಬಿಸುತ್ತದೆ.
ಪರಿವಿಡಿ
ಪೀಠಿಕೆ 1:1-2
ಪ್ರೋತ್ಸಾಹ ಮತ್ತು ಪ್ರಶಂಸೆ 1:3-12
ಯೇಸುವಿನ ಪುನರಾಗಮನದ ಬಗ್ಗೆ ಉಪದೇಶ 2:1-17
ಕ್ರೈಸ್ತ ಸನ್ನಡತೆಗೆ ಸಲಹೆ 3:1-16
ಸಮಾಪ್ತಿ 3:17-18