ಮುನ್ನುಡಿ
ಪೌಲನಿಗೂ ಕ್ರೈಸ್ತರಿಗೂ ತೀವ್ರ ವೈಮನಸ್ಸುಂಟಾಗಿದ್ದ ಸಂದರ್ಭದಲ್ಲಿ ಬರೆದ ಪತ್ರ ಇದು. ಕೊರಿಂಥದ ಸಭಾಸದಸ್ಯರಲ್ಲಿ ಕೆಲವರು ಪೌಲನ ವರ್ತನೆಯನ್ನು ಬಹುವಾಗಿ ಖಂಡಿಸುತ್ತಿದ್ದರು. ಪೌಲನಾದರೋ ತನ್ನ ಮೇಲೆ ಹೊರಿಸಲಾದ ದೋಷಾರೋಪಣೆಯನ್ನು ಲೆಕ್ಕಿಸದೆ ಕೊರಿಂಥದವರೊಂದಿಗೆ ಸಂಧಾನವನ್ನು ಹೃತ್ಪೂರ್ವಕವಾಗಿ ಬಯಸುತ್ತಾನೆ. ಅದು ಕೈಗೂಡಿದಾಗ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾನೆ.
ಪತ್ರದ ಪ್ರಾರಂಭದಲ್ಲಿ ಪೌಲನು ಕೊರಿಂಥದ ಸಭೆಯೊಂದಿಗೆ ತನಗಿದ್ದ ನಿಕಟ ಬಾಂಧವ್ಯವನ್ನು ಕುರಿತು ಪ್ರಸ್ತಾಪಿಸುತ್ತಾನೆ. ಅಲ್ಲಿದ್ದ ಕೆಲವರ ಅಸಭ್ಯತೆ ಹಾಗೂ ಪ್ರತಿಭಟನೆಯಿಂದಾಗಿ ತಾನು ಕಠಿಣವಾಗಿ ವರ್ತಿಸಬೇಕಾಯಿತೆಂದು ಹೇಳುತ್ತಾನೆ. ಈ ಕಠಿಣತೆಯು ಕೊರಿಂಥದವರ ಮನಪರಿವರ್ತನೆಗೂ ಶಾಂತಿಸಂಧಾನಕ್ಕೂ ನಾಂದಿಯಾದ ಕಾರಣ ಸಂತೋಷಿಸುತ್ತಾನೆ. ಜುದೇಯದಲ್ಲಿದ್ದ ಕ್ರೈಸ್ತಭಕ್ತಾದಿಗಳ ಅವಶ್ಯಕತೆಗಳನ್ನು ನೀಗಿಸಲು ಉದಾರ ಕಾಣಿಕೆಯನ್ನು ನೀಡಬೇಕೆಂದು ಪ್ರೋತ್ಸಾಹಿಸುತ್ತಾನೆ.
ಕೊರಿಂಥದಲ್ಲಿ ಕೆಲವರು ತಾವೇ ನಿಜವಾದ ಪ್ರೇಷಿತರೆಂದೂ ಪೌಲನೊಬ್ಬ ಕಳ್ಳಪ್ರೇಷಿತನೆಂದೂ ಪ್ರಚಾರಮಾಡುತ್ತಿದ್ದರು. ಆದ್ದರಿಂದ ಪೌಲನು ತನ್ನ ಪ್ರೇಷಿತತ್ವವನ್ನು ಕೊನೆಯ ಅಧ್ಯಾಯಗಳಲ್ಲಿ ಸಮರ್ಥಿಸುತ್ತಾನೆ
ಪರಿವಿಡಿ
ಪೀಠಿಕೆ 1:1-11
ಪೌಲ ಹಾಗೂ ಕೊರಿಂಥದ ಸಭೆ 1:12—7:16
ಜುದೇಯದ ಸಭೆಗೆ ಕಾಣಿಕೆ 8:1—9:15
ಪೌಲನ ಪ್ರೇಷಿತತ್ವದ ಸಮರ್ಥನೆ 10:1—13:10
ಸಮಾಪ್ತಿ 13:11-13