ಮುನ್ನುಡಿ
ಅರಸುಗಳ ಈ ಎರಡನೇ ಭಾಗ, ಜುದೇಯ ಹಾಗು ಇಸ್ರಯೇಲ್ ರಾಜ್ಯಗಳ ಚರಿತ್ರೆಯನ್ನು ಅರಸುಗಳ ಮೊದಲನೇ ಭಾಗ ಎಲ್ಲಿ ನಿಲ್ಲಿಸಿತೋ ಅಲ್ಲಿಂದ ಮುಂದುವರಿಸುತ್ತದೆ. ಈ ದ್ವಿತೀಯ ಭಾಗವನ್ನೂ ಇಬ್ಭಾಗವಾಗಿ ವಿಂಗಡಿಸಬಹುದು: (1) ಕ್ರಿ. ಪೂ. 850ರಿಂದ ಕ್ರಿ. ಪೂ. 722ರ ವರೆಗೆ; (2) ಕ್ರಿ. ಪೂ. 722ರಿಂದ 586ರವರೆಗೆ. ಇಲ್ಲಿನ ಮೊದಲನೇ ಭಾಗ ಸಮಾರಿಯದ ಪತನದೊಂದಿಗೆ (722) ಎರಡನೇ ಭಾಗ ಜೆರುಸಲೇಮಿನ ಪತನದೊಂದಿಗೆ (586) ಮುಕ್ತಾಯಗೊಳ್ಳುತ್ತವೆ.
ಇಸ್ರಯೇಲ್ - ಜುದೇಯದ ಅರಸುಗಳು ಹಾಗು ಪ್ರಜೆಗಳು ದೇವರಲ್ಲಿ ಅವಿಶ್ವಾಸ ಮತ್ತು ಅಪ್ರಾಮಾಣಿಕತೆಯಿಂದ ನಡೆದುಕೊಂಡದ್ದೇ ರಾಷ್ಟ್ರೀಯ ಅನಾಹುತಕ್ಕೆ ಹಾಗು ಅಧೋಗತಿಗೆ ಕಾರಣ ಎಂಬ ಪಾಠವನ್ನು ಈ ಭಾಗದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಪವಿತ್ರ ಜೆರುಸಲೇಮಿನ ಪತನ, ಬಾಬಿಲೋನಿಗೆ ಯೆಹೂದ ಜನರ ಗಡಿಪಾರು. ಈ ಘಟನೆಗಳು ಇಸ್ರಯೇಲಿನ ಇತಿಹಾಸದಲ್ಲೇ ಗಮನಾರ್ಹವಾದ ತಿರುವುಗಳು. ಬಾಬಿಲೋನಿನಲ್ಲಿ ಸೆರೆಯಾಳಾಗಿದ್ದ ಅರಸ ಯೆಹೋಯಾಖೀನನ ಬಿಡುಗಡೆಯೊಂದಿಗೆ ಬೈಬಲ್ಲಿನ ಈ ಭಾಗ ಮುಕ್ತಾಯಗೊಳ್ಳುತ್ತದೆ.
ಇದರಲ್ಲಿ ನಮ್ಮ ಕಣ್ಮುಂದೆ ಎದ್ದು ನಿಲ್ಲುವ ಮಹಾನುಭಾವ ಹಾಗು ಪವಾಡಪುರುಷ ಎಂದರೆ ಪ್ರವಾದಿ ಎಲೀಷ.
ಪರಿವಿಡಿ
1: ಸೀಳಿಹೋದ ಸಾಮ್ರಾಜ್ಯ 1:1—17:41
ಅ. ಪ್ರವಾದಿ ಎಲೀಷ 1:1—8:15
ಆ. ಜುದೇಯದ, ಇಸ್ರಯೇಲಿನ ಅರಸುಗಳು 8:16—17:4
ಇ. ಸಮಾರಿಯಾದ ಪತನ 17:5—17:41
2: ಜುದೇಯದ ರಾಜ್ಯ 18:1—24:20
ಅ. ಹಿಜ್ಕೀಯನಿಂದ ಯೋಷೀಯನವರೆಗೆ 18:1—21:26
ಆ. ಯೋಷೀಯನ ಆಡಳಿತ 22:1—23:30
ಇ. ಜುದೇಯದ ಕೊನೆಯ ಅರಸುಗಳು 23:31—24:20
ಈ. ಜೆರುಸಲೇಮಿನ ಪತನ 25:1-30