ಮುನ್ನುಡಿ
ಯೊವಾನ್ನನು ಬರೆದ ಮೊದಲನೆಯ ಪತ್ರದ ಉದ್ದೇಶಗಳು ಎರಡು : 1. ಜನರು ದೇವರ ಹಾಗೂ ದೇವರ ಪುತ್ರ ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ಬಾಳಬೇಕೆಂದು ಪ್ರೋತ್ಸಾಹಿಸುವುದು. 2. ಈ ಅನ್ಯೋನ್ಯ ಬಾಳ್ವೆಗೆ ಭಂಗತರುವ ಹುಸಿಬೋಧಕರ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವುದು.
ಈ ಪತ್ರವನ್ನು ಬರೆದ ಸಂದರ್ಭದಲ್ಲಿ ಸುಳ್ಳುಬೋಧಕರ ಪ್ರಭಾವ ಹೆಚ್ಚಾಗಿತ್ತು. ಭೌತಿಕ ಜಗತ್ತಿನೊಂದಿಗೆ ಸಂಪರ್ಕವಿರುವುದರಿಂದ ಮನುಷ್ಯನಿಗೆ ಉಂಟಾಗುವುದು ಕೇಡೇ ಹೊರತು ಒಳಿತಲ್ಲ. ಎಂತಲೇ ಕಳಂಕಗೊಳಿಸುವ ಜಗತ್ತಿನಲ್ಲಿ ದೇವರ ಪುತ್ರ ಯೇಸುಸ್ವಾಮಿ ನಿಜಕ್ಕೂ ಹುಟ್ಟಿ ಬಾಳಿರಲು ಸಾಧ್ಯವಿಲ್ಲ ಎಂದು ಕೆಲವರು ವಾದಿಸುತ್ತಿದ್ದರು: ಮತ್ತೆ ಕೆಲವರು, ಆ ಜೀವೋದ್ಧಾರ ಹೊಂದಬೇಕಾದರೆ ನಾವು ಐಹಿಕ ಜೀವನದ ಆಶೆ ಆಕಾಂಕ್ಷೆಗಳನ್ನು ಕಿತ್ತೆಸೆಯಬೇಕು. ಪರಪ್ರೀತಿಗೂ ಜೀವೋದ್ಧಾರಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುತ್ತಿದ್ದರು.
ಇದಕ್ಕೆ ತದ್ವಿರುದ್ಧವಾಗಿ ಯೊವಾನ್ನನು ಸರಳವಾದ ಶೈಲಿಯಲ್ಲಿ ಬರೆಯುತ್ತಾ ಯೇಸುಸ್ವಾಮಿ ಮನುಷ್ಯ ಆದುದು ಸತ್ಯಸ್ಯಸತ್ಯ. ಅವರಲ್ಲಿ ವಿಶ್ವಾಸವಿಟ್ಟು ದೇವರನ್ನು ಪ್ರೀತಿಸುವ ಎಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸಲೇಬೇಕು ಎಂದು ಸಮರ್ಥಿಸುತ್ತಾನೆ.
ಪರಿವಿಡಿ
ಪೀಠಿಕೆ 1:1-4
ಬೆಳಕು ಮತ್ತು ಕತ್ತಲು 1:5—2:29
ದೇವರ ಮಕ್ಕಳು ಮತ್ತು ಸೈತಾನನ ಮಕ್ಕಳು 3:1-24
ಸತ್ಯ ಮತ್ತು ಅಸತ್ಯ 4:1-6
ಪ್ರೀತಿಸಬೇಕಾದ ಕರ್ತವ್ಯ 4:7-21
ವಿಶ್ವಾಸದ ವಿಜಯ 5:1-21