ಮುನ್ನುಡಿ
“ಸಮುವೇಲ” ಹಾಗೂ “ಅರಸುಗಳು” ಎಂಬ ಹಿಂದಿನ ಗ್ರಂಥಗಳಂತೆ ಈ “ಪೂರ್ವಕಾಲದ ಇತಿಹಾಸ"ವೂ ಚಾರಿತ್ರಿಕ ವಿವರಗಳಿಂದ ಕೂಡಿದೆ; ಅದು ಮಾತ್ರವಲ್ಲ, ಅದೇ ಚಾರಿತ್ರಿಕ ಘಟನೆಗಳನ್ನು ಮತ್ತೆ ವರ್ಣಿಸುತ್ತದೆ. ಆದರೆ ದೃಷ್ಟಿಕೋನಗಳು ಬೇರೆ; ಗುರಿ ಧ್ಯೇಯಗಳೂ ಬೇರೆ.
ಇದರ ಗ್ರಂಥಕರ್ತನ ಎರಡು ಪ್ರಮುಖ ಉದ್ದೇಶಗಳು ಸ್ಪಷ್ಟವಾಗಿವೆ:
1: ಇಸ್ರಯೇಲ್ ಸಾಮ್ರಾಜ್ಯ ಎರಡು ರಾಜ್ಯಗಳಾಗಿ ಸೀಳಿಹೋಗಿ ನಾನಾ ಆಪತ್ತು-ವಿಪತ್ತುಗಳಿಗೆ ಒಳಗಾಗಬೇಕಾಯಿತಾದರೂ ಸರ್ವೇಶ್ವರ ಆ ರಾಷ್ಟ್ರಕ್ಕೆ ಮಾಡಿದ ವಾಗ್ದಾನಗಳನ್ನು ತಪ್ಪದೆ ನೆರವೇರಿಸುತ್ತಾ ಬರುತ್ತಾರೆಂದು ಓದುಗರಿಗೆ ಮನಮುಟ್ಟಿಸುವುದು; ಈ ಭರವಸೆಗೆ ತಳಹದಿ ಎಂದರೆ ಅರಸ ದಾವೀದನ ಹಾಗು ಸೊಲೊಮೋನನ ಸಾಧನೆಗಳು; ಯೆಹೋಷಾಫಾಟ, ಹಿಜ್ಕೀಯ ಹಾಗೂ ಯೋಷೀಯ ಇವರುಗಳು ಮಾಡಿದ ಸುಧಾರಣೆಗಳು.
2: ಜೆರುಸಲೇಮಿನ ಮಹಾದೇವಾಲಯವನ್ನು ಕಟ್ಟಿಸಿದವನು ಅರಸ ಸೊಲೊಮೋನನಾದರೂ ಅಲ್ಲಿನ ದೇವಾರಾಧನೆಯ ಕ್ರಮ, ಯಾಜಕರ ಹಾಗೂ ಲೇವಿಯರ ವ್ಯವಸ್ಥಾಪನೆ ಇತ್ಯಾದಿಗಳಿಗೆ ದಾವೀದರಸನೇ ಮೂಲಪುರುಷನೆಂದು ಒತ್ತಿ ಹೇಳುವುದು ಈ ಗ್ರಂಥಕರ್ತನ ಇನ್ನೊಂದು ಉದ್ದೇಶ.
ಪರಿವಿಡಿ
ವಂಶಾವಳಿಗಳು ಹಾಗೂ ಪಟ್ಟಿಗಳು 1:1—9:44
ಸೌಲನ ಮರಣ 10:1-14
ದಾವೀದನ ಆಳ್ವಿಕೆ 11:1—29:30
ಅ) ಅಡ್ಡಿ-ಆತಂಕಗಳು ಹಾಗೂ ಸಾಧನೆಗಳು 11:1—22:1
ಆ) ದೇವಾಲಯ ಕಟ್ಟಲು ಸಿದ್ಧತೆ 22:2—29:30