Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 9 - ಕನ್ನಡ ಸತ್ಯವೇದವು C.L. Bible (BSI)


ಸೆರೆಯಿಂದ ಹಿಂದಿರುಗಿದವರು

1 ಇಸ್ರಯೇಲಿನ ಎಲ್ಲಾ ಜನರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ಪಟ್ಟಿಮಾಡಲಾಗಿದೆ. ಈ ಮಾಹಿತಿ ‘ಇಸ್ರಯೇಲಿನ ಅರಸರ ಪುಸ್ತಕ’ದಲ್ಲಿ ದಾಖಲಾಗಿದೆ. ಯೆಹೂದ್ಯರು ತಮ್ಮ ಪಾಪಕ್ಕೆ ಶಿಕ್ಷೆಯಾಗಿ ಬಾಬಿಲೋನಿಗೆ ಸೆರೆಯಾಳುಗಳಾಗಿ ಹೋಗಬೇಕಾಯಿತು.

2 ಪಟ್ಟಣಗಳಲ್ಲಿದ್ದ ತಮ್ಮ ಸೊತ್ತುಗಳಿಗೆ ಹಿಂದಿರುಗಿ ಬಂದವರಲ್ಲಿ ಇಸ್ರಯೇಲಿನ ಜನಸಾಮಾನ್ಯರೂ ಯಾಜಕರೂ ಲೇವಿಯರೂ ದೇವಾಲಯದ ಕೆಲಸದವರೂ ಸೇರಿದ್ದರು.

3 ಯೆಹೂದ, ಬೆನ್ಯಾಮೀನ್, ಎಫ್ರಯಿಮ್ ಮತ್ತು ಮನಸ್ಸೆ ಗೋತ್ರಗಳವರು ಜೆರುಸಲೇಮಿನಲ್ಲಿ ವಾಸಮಾಡಲು ಹೋದರು.

4-6 ಜೆರುಸಲೇಮಿನಲ್ಲಿ ಯೆಹೂದನ ಗೋತ್ರದ ಆರುನೂರ ತೊಂಬತ್ತು ಕುಟುಂಬಗಳು ನೆಲಸಿದವು. ಯೆಹೂದನ ಮಗ ಪೆರೆಚನ ಸಂತತಿಯವರಿಗೆ ಅಮ್ಮೀಹೂದನ ಮಗನೂ ಒಮ್ರಿಯ ಮೊಮ್ಮಗನೂ ಆದ ಊತೈ ನಾಯಕನಾಗಿದ್ದನು. ಇಮ್ರಿ ಮತ್ತು ಬಾನಿ ಎಂಬವರು ಅವನ ಪೂರ್ವಜರಲ್ಲಿ ಇಬ್ಬರು. ಯೆಹೂದನ ಮಗ ಶೇಲಾಹನ ಸಂತಾನದವರಿಗೆ ಆಸಾಯನು ನಾಯಕ ಹಾಗೂ ಗೋತ್ರದ ಮುಖ್ಯಸ್ಥನಾಗಿದ್ದನು. ಯೆಹೂದನ ಮಗ ಜೆರಹನ ಸಂತತಿಯವರಿಗೆ ಯೆಯೂವೇಲ್ ನಾಯಕನಾಗಿದ್ದನು.

7-8 ಜೆರುಸಲೇಮಿನಲ್ಲಿ ನೆಲೆಸಿದ ಬೆನ್ಯಾಮೀನನ ಗೋತ್ರದವರು: ಸಲ್ಲೂ - ಇವನು ಮೆಷುಲ್ಲಾಮನ ಮಗ ಹೋದವ್ಯನ ಮೊಮ್ಮಗ ಹಾಗೂ ಹಸ್ಸೆನುವಾಹನ ಮರಿಮಗ. ಇಬ್ನಿಯಾಹ - ಇವನು ಯೆರೋಹಾಮನ ಮಗ. ಏಲಾ - ಇವನು ಶೆಫಟ್ಯನ ಮಗ ರೆಯೂವೇಲನ ಮೊಮ್ಮಗ, ಇಬ್ನಿಯಾಹನ ಮರಿಮಗ.

9 ಈ ಗೋತ್ರದ ಒಂಬೈನೂರ ಐವತ್ತಾರು ಕುಟುಂಬಗಳು ಅಲ್ಲಿ ನೆಲೆಸಿದ್ದವು. ಮೇಲೆ ಹೇಳಿದವರು ಆಯಾ ಗೋತ್ರಗಳ ಪ್ರಧಾನ ಪುರುಷರಾಗಿದ್ದರು.


ಜೆರುಸಲೇಮಿನಲ್ಲಿ ನೆಲೆಸಿದ ಯಾಜಕರು

10-12 ಜೆರುಸಲೇಮಿನಲ್ಲಿ ನೆಲೆಸಿದ ಯಾಜಕರು: ಯೆದಾಯ, ಯೆಹೋಯಾರೀಬ್, ಯಾಕೀನ್, ಹಿಲ್ಕೀಯನ ಮಗ ಅಜರ್ಯ - ಇವನು ದೇವಾಲಯದ ಪ್ರಮುಖ ಅಧಿಕಾರಿ. ಇವನ ಪೂರ್ವಜರಲ್ಲಿ ಮೆಷುಲ್ಲಾಮ, ಚಾದೋಕ್, ಮೆರಾಯೋತ್ ಮತ್ತು ಅಹೀಚೂಬ ಎಂಬವರು ಇದ್ದರು. ಯೆಹೋರಾಮನ ಮಗ ಅದಾಯ: ಇವನ ಪೂರ್ವಜರಲ್ಲಿ ಪಶ್ಹೂರ, ಮಲ್ಕೀಯ ಎಂಬವರಿದ್ದರು. ಅದೀಯೋಲನ ಮಗ ಮಾಸೈ: ಇವನ ಪೂರ್ವಜರಲ್ಲಿ ಯಹ್ಜೇರ, ಮೆಷುಲ್ಲಾಮ, ಮೆಷಿಲ್ಲೇಮೋತ, ಇಮ್ಮೇರ ಎಂಬವರಿದ್ದರು.

13 ಗೋತ್ರಗಳ ಮುಖ್ಯಸ್ಥರಾದ ಯಾಜಕರ ಒಟ್ಟು ಸಂಖ್ಯೆ ಒಂದು ಸಾವಿರದ ಏಳನೂರ ಅರವತ್ತು ಮಂದಿ, ದೇವಾಲಯದ ಎಲ್ಲಾ ಕೆಲಸಗಳಲ್ಲಿ ಅವರು ನಿಪುಣರಾಗಿದ್ದರು.


ಜೆರುಸಲೇಮಿನಲ್ಲಿ ನೆಲಸಿದ ಲೇವಿಯರು

14-16 ಜೆರುಸಲೇಮಿನಲ್ಲಿ ನೆಲೆಸಿದ ಲೇವಿಯರು: ಹಷಬ್ಯನ ಮಗ ಶೆಮಾಯ; ಇವನ ಪೂರ್ವಜರಲ್ಲಿ ಅಜ್ರೀಕಾಮ, ಹಷಬ್ಯ ಹಾಗು ಮೆರಾರೀ ಗೋತ್ರದ ಬಕ್ಬಕ್ಕರ್, ಹೆರೆಷ್, ಗಾಲಾಲ್ ಎಂಬವರಿದ್ದರು. ಶೆಮಾಯನ ಮಗ ಓಬದ್ಯ: ಇವನ ಪೂರ್ವಜರಲ್ಲಿ ಗಾಲಾಲ, ಯದೂತೂನ ಎಂಬವರಿದ್ದರು. ಮೀಕನ ಮಗ ಮತ್ತನ್ಯ: ಇವನ ಪೂರ್ವಜರಲ್ಲಿ ಜಿಕ್ರೀ, ಆಸಾಫ ಎಂಬವರಿದ್ದರು. ಆಸನ ಮಗನೂ ಎಲ್ಕಾನನ ಮೊಮ್ಮಗನೂ ಆದ ಬೆರೆಕ್ಯ; ನಟೋಫಾತ್ಯರ ಗ್ರಾಮಗಳಲ್ಲಿ ಇವನು ನೆಲೆಸಿದ್ದನು.


ಜೆರುಸಲೇಮಿನಲ್ಲಿ ನೆಲೆಸಿದ ದೇವಾಲಯದ ದ್ವಾರಪಾಲಕರು

17 ಜೆರುಸಲೇಮಿನಲ್ಲಿ ನೆಲೆಸಿದ ದೇವಾಲಯದ ದ್ವಾರಪಾಲಕರು: ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಎಂಬವರು. ಶಲ್ಲೂಮ್ ಅವರ ಮುಖ್ಯಸ್ಥನಾಗಿದ್ದನು.

18 ಇದುವರೆಗೂ ಶಲ್ಲೂಮನ ಕುಟುಂಬಸ್ಥರು ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲನ್ನು ಕಾಯುತ್ತಿದ್ದಾರೆ. ಇದಕ್ಕೆ ಮೊದಲು ಅವರು ಲೇವಿಯರ ಪಾಳೆಯಗಳ ಕಾವಲುಗಾರರಾಗಿ ಇದ್ದರು.

19 ಕೋರೇಯನ ಮಗನೂ ಎಬ್ಯಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನು ಹಾಗೂ ಕೋರಹನ ಗೋತ್ರದ ಸದಸ್ಯರು, ದೇವದರ್ಶನದ ಗುಡಾರದ ದ್ವಾರವನ್ನು ಕಾಯುವ ಜವಬ್ದಾರಿ ವಹಿಸಿಕೊಂಡು ಇದ್ದರು.ಅವರ ಪೂರ್ವಜರು ಸಹ ಸರ್ವೇಶ್ವರನ ಗುಡಾರವನ್ನು ಕಾಯುವವರಾಗಿದ್ದರು.

20 ಎಲ್ಲಾಜಾರನ ಮಗ ಫೀನೆಹಾಸ ದ್ವಾರಪಾಲಕರ ಮೇಲ್ವಿಚಾರಕನಾಗಿದ್ದನು. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು.

21 ಮೆಷೆಲೆಮ್ಮನ ಮಗ ಜೆಕರ್ಯನು ದೇವದರ್ಶನದ ಗುಡಾರದ ದ್ವಾರಪಾಲಕನಾಗಿದ್ದನು.

22 ಒಟ್ಟು ಇನ್ನೂರ ಹನ್ನೆರಡು ಮಂದಿ, ದ್ವಾರಪಾಲಕರಾಗಿ ನೇಮಕಗೊಂಡಿದ್ದರು. ಅವರು ನೆಲೆಸಿದ್ದ ಗ್ರಾಮಗಳಲ್ಲಿ ಅವರ ಹೆಸರುಗಳು ದಾಖಲಾಗಿದ್ದವು. ಈ ಜವಾಬ್ದಾರಿಯ ಸ್ಥಾನಗಳಿಗೆ ಅವರ ಪೂರ್ವಜರನ್ನು ನೇಮಿಸಿದವರು ಅರಸ ದಾವೀದನು ಮತ್ತು ಪ್ರವಾದಿ ಸಮುವೇಲನು.

23 ಅವರ ವಂಶಜರು ದೇವಾಲಯದ ದ್ವಾರಪಾಲಕರಾಗಿ ಸೇವೆ ಮುಂದುವರೆಸಿಕೊಂಡು ಬಂದರು.

24 ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ ಒಂದೊಂದು ದ್ವಾರ ಇದ್ದು ಪ್ರತಿಯೊಂದಕ್ಕೂ ಒಬ್ಬೊಬ್ಬ ಪ್ರಮುಖ ದ್ವಾರಪಾಲಕನಿದ್ದನು.

25 ಈ ಪ್ರಮುಖ ದ್ವಾರಪಾಲಕರಿಗೆ ಗ್ರಾಮಗಳಲ್ಲಿ ನೆಲೆಸಿದ್ದ ಅವರ ಬಂಧುಗಳು ಸಹಾಯಕರಾಗಿದ್ದರು. ಅವರು ಸರದಿಯ ಮೇಲೆ ಏಳೇಳು ದಿವಸ ಬಂದು ಸಹಾಯ ಮಾಡಬೇಕಾಗಿತ್ತು.

26 ನಾಲ್ಕು ಜನ ಮುಖ್ಯ ದ್ವಾರಪಾಲಕರು ಲೇವಿಯರಾಗಿದ್ದು ಅವರಿಗೆ ಅಂತಿಮ ಜವಾಬ್ದಾರಿ ಕೊಡಲಾಗಿತ್ತು. ದೇವಾಲಯದ ಕೋಣೆಗಳನ್ನು ಹಾಗೂ ಭಂಡಾರಗಳನ್ನು ಅವರು ನೋಡಿಕೊಳ್ಳಬೇಕಾಗಿತ್ತು.

27 ದೇವಾಲಯವನ್ನು ಕಾಯುವುದೂ ಪ್ರತಿದಿನ ಬೆಳಿಗ್ಗೆ ಬಾಗಿಲುಗಳನ್ನು ತೆರೆಯುವುದೂ ಅವರ ಕರ್ತವ್ಯವಾಗಿತ್ತು. ಆದುದರಿಂದ ಅವರು ದೇವಾಲಯದ ಹತ್ತಿರವೇ ಇರುತ್ತಿದ್ದರು.


ಇತರ ಲೇವಿಯರು

28 ಪೂಜಾಸಾಮಗ್ರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇತರ ಲೇವಿಯರದಾಗಿತ್ತು. ಅವುಗಳನ್ನು ಕೊಡುವಾಗಲೂ ಮರಳಿ ತೆಗೆದುಕೊಳ್ಳುವಾಗಲೂ ಲೆಕ್ಕಿಸುತ್ತಿದ್ದರು.

29 ಇತರರು ಬೇರೆ ಪವಿತ್ರ ಸಲಕರಣೆಗಳಾದ ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ ಹಾಗೂ ಪರಿಮಳ ದ್ರವ್ಯಗಳ ಸರಬರಾಜು ಮಾಡುವ ಜವಾಬ್ದಾರಿಕೆ ಹೊಂದಿದ್ದರು.

30 ಆದರೆ ಪರಿಮಳದ್ರವ್ಯಗಳನ್ನು ಮಿಶ್ರಮಾಡುವ ಜವಾಬ್ದಾರಿ ಯಾಜಕರದಾಗಿತ್ತು.

31 ಕೋರಹಿಯ ಗೋತ್ರದ ಶಲ್ಲೂಮನ ಚೊಚ್ಚಲು ಮಗ ಮತ್ತಿತ್ಯ ಎಂಬ ಲೇವಿಯನು ರೊಟ್ಟಿ ಸುಡುವ ಕೆಲಸದ ಮೇಲ್ವಿಚಾರಕನಾಗಿದ್ದನು.

32 ಕೇಹಾತ್ಯ ಗೋತ್ರದ ಮಿಕ್ಕ ಸದಸ್ಯರು ಪ್ರತೀ ಸಬ್ಬತ್ ದಿನ ದೇವಾಲಯದಲ್ಲಿ ಸಮರ್ಪಿಸಲಾಗುತ್ತಿದ್ದ ನೈವೇದ್ಯದ ರೊಟ್ಟಿಗಳನ್ನು ತಯಾರಿಸುವ ಜವಾಬ್ದಾರಿ ಹೊಂದಿದ್ದರು.

33 ಇನ್ನು ಕೆಲವು ಲೇವಿಯ ಕುಟುಂಬಗಳ ಮೇಲೆ ದೇವಾಲಯದ ಸಂಗೀತದ ಹೊಣೆಯಿತ್ತು. ಈ ಕುಟುಂಬಗಳ ಮುಖ್ಯಸ್ಥರು ದೇವಾಲಯದ ಕಟ್ಟಡಗಳಲ್ಲಿ ವಾಸಿಸುತ್ತಾ, ಹಗಲಿರುಳೂ ಕೆಲಸ ಮಾಡಬೇಕಾಗಿದ್ದರಿಂದ ಬೇರೆ ಕೆಲಸಗಳ ಜವಾಬ್ದಾರಿ ಅವರಿಗಿರಲಿಲ್ಲ.

34 ಇವರೆಲ್ಲರೂ ತಮ್ಮ ಪೂರ್ವಜರ ಸಾಲಿಗೆ ಸೇರಿದಂತೆ ಲೇವಿ ಗೋತ್ರಗಳ ಮುಖ್ಯಸ್ಥರಾಗಿದ್ದು ಜೆರುಸಲೇಮಿನಲ್ಲೇ ನೆಲೆಸಿದ್ದರು.


ಅರಸ ಸೌಲನ ಪೂರ್ವಜರು ಹಾಗೂ ವಂಶಜರು
( ೧ ಪೂರ್ವ. 8:29-38 )

35 ಯೆಯೂವೇಲನು ಗಿಬ್ಯೋನ ಪಟ್ಟಣವನ್ನು ಕಟ್ಟಿ ಅಲ್ಲಿ ನೆಲೆಸಿದನು. ಅವನ ಹೆಂಡತಿ ಮಾಕಳು.

36 ಅವನ ಚೊಚ್ಚಲು ಮಗ ಅಬ್ದೋನ. ಇತರ ಮಕ್ಕಳ ಹೆಸರು - ಚೂರ್, ಕೀಷ್, ಬಾಳ್, ನೇರ್, ನಾದಾಬ್,

37 ಗೆದೋರ್, ಅಹ್ಯೋ, ಜೆಕರ್ಯ ಹಾಗೂ ಮಿಕ್ಲೋತ್.

38 ಮಿಕ್ಲೋತ್ ಶಿಮಾಮ್ ನ ತಂದೆ. ಇವರ ವಂಶಜರು ಜೆರುಸಲೇಮಿನಲ್ಲಿ ತಮ್ಮ ಗೋತ್ರದ ಇತರ ಕುಟುಂಬಗಳ ಸಮೀಪದಲ್ಲಿ ನೆಲೆಸಿದ್ದರು.

39 ನೇರನು ಕೀಷನ ತಂದೆ. ಕೀಷ ಸೌಲನ ತಂದೆ. ಸೌಲನಿಗೆ ನಾಲ್ವರು ಮಕ್ಕಳು: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಪ್ಬಾಳ್ ಎಂಬವರು.

40 ಯೋನಾತಾನ್ ಮೆರೀಬ್ಬಾಳನ ತಂದೆ. ಇವನು ಮೀಕನ ತಂದೆ.

41 ಮೀಕನಿಗೆ ನಾಲ್ವರು ಮಕ್ಕಳು - ಪೀತೋನ್, ಮೆಲೆಕ್, ತಹ್ರೇಯ ಹಾಗೂ ಅಹಾಜ್ ಎಂಬವರು.

42 ಅಹಾಜ್ ಯಗ್ರಾಹನ ತಂದೆ. ಇವನು ಅಲೆಮೆತ್, ಅಜ್ಮಾವೆತ್, ಜಿಮ್ರಿ ಎಂಬವರ ತಂದೆ. ಜಿಮ್ರಿ ಮೋಚನ ತಂದೆ.

43 ಬಿನ್ನ ಮೋಚನ ಮಗ, ಬಿನ್ನನ ಮಗ ರೆಫಾಯ; ಇವನ ಮಗ ಎಲ್ಲಾಸ; ಇವನ ಮಗ ಆಚೇಲ್.

44 ಆಚೇಲನಿಗೆ ಆರು ಜನ ಮಕ್ಕಳು - ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ, ಓಬದ್ಯ ಹಾಗು ಹಾನಾನ್ ಎಂಬವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು