Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 8 - ಕನ್ನಡ ಸತ್ಯವೇದವು C.L. Bible (BSI)


ಬೆನ್ಯಾಮೀನ್ ವಂಶಜರು

1 ಬೆನ್ಯಾಮೀನನಿಗೆ ಐದು ಜನ ಮಕ್ಕಳಿದ್ದರು. ವಯಸ್ಸಿಗನುಗುಣವಾಗಿ ಅವರ ಹೆಸರುಗಳು ಇಂತಿವೆ - ಬೆಳ, ಅಷ್ಬೇಲ್, ಅಹ್ರಹ,

2 ನೋಹ ಮತ್ತು ರಾಫ.

3 ಬೆಳನ ಮಕ್ಕಳು - ಅದ್ದಾರ್, ಗೇರ, ಅಬೀಹೂದ್,

4 ಅಬೀಷೂವ, ನಾಮಾನ್, ಅಹೋಹ,

5 ಗೇರ, ಶೆಪೂಫಾನ್, ಹೂರಾಮ್ ಎಂಬವರು.

6-7 ಏಹೂದನ ಸಂತಾನದವರು - ನಾಮಾನ್, ಅಹೀಯ, ಗೇರ ಎಂಬವರು. ಅವರು ಗೇಬದಲ್ಲಿ ವಾಸಿಸಿದ ಕುಟುಂಬಗಳ ಮುಖ್ಯಸ್ಥರು. ಆದರೆ ಅವರು ಹೊರಗೆ ಹೋಗುವಂತೆ ಒತ್ತಾಯಿಸಲ್ಪಟ್ಟಾಗ ಮಾನಹತಿಯಲ್ಲಿ ವಾಸಿಸಲು ಹೋದರು. ಹೀಗೆ ಹೊರಡುವಾಗ ಉಚ್ಚ ಮತ್ತು ಅಹೀಹೂದನ ತಂದೆ ಗೇರ ಮುಂದಾಳಾಗಿದ್ದರು.

8-9 ಶಹರಯಿಮನು ತನ್ನ ಇಬ್ಬರು ಪತ್ನಿಯರಾದ ಹೂಷೀಮ್ ಮತ್ತು ಬಾರ ಎಂಬವರಿಂದ ವಿವಾಹ ವಿಚ್ಛೇದನ ಮಾಡಿಕೊಂಡನು. ಅನಂತರ ಮೋವಾಬ್ ದೇಶದಲ್ಲಿ ವಾಸಿಸಿದನು. ಅಲ್ಲಿ ಹೋದೆಷ್ ಎಂಬಾಕೆಯನ್ನು ವಿವಾಹವಾಗಿ ಏಳು ಜನ ಮಕ್ಕಳನ್ನು ಪಡೆದನು - ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ, ಮಿರ್ಮ ಎಂದು ಅವರ ಹೆಸರು.

10 ಅವನ ಎಲ್ಲಾ ಮಕ್ಕಳು ಗೋತ್ರಪ್ರಧಾನರು.

11 ಹುಷೀಮ್ ಎಂಬುವಳಿಂದ ಅವನಿಗೆ ಅಬೀಟೂಬ್, ಎಲ್ಪಾಲ ಎಂಬಿಬ್ಬರು ಮಕ್ಕಳು ಜನಿಸಿದರು.

12 ಎಲ್ಪಾಲನಿಗೆ ಮೂರು ಜನ ಮಕ್ಕಳು - ಏಬೆರ್, ಮಿಷ್ಷಾಮ್, ಶೆಮೆದ್ ಎಂಬವರು. ಓನೋ, ಲೋದ್ ಎಂಬ ಪಟ್ಟಣಗಳನ್ನು ಅವುಗಳ ಸುತ್ತುಮುತ್ತಲಿನ ಗ್ರಾಮಗಳನ್ನೂ ಕಟ್ಟಿಸಿದವನು ಶೆಮೆದ್.

13 ಗತ್ ಪಟ್ಟಣದ ಜನರನ್ನು ಹೊಡೆದೋಡಿಸಿ ಅಲ್ಲಿ ನೆಲೆಸಿದ ಹಾಗು ಅಯ್ಯಾಲೋನ್ ಪಟ್ಟಣದಲ್ಲಿ ವಾಸಿಸಿದ ಕುಟುಂಬಗಳ ಮುಖ್ಯಸ್ಥರು - ಬೆರೀಯ ಮತ್ತು ಶಮ ಎಂಬವರು.

14 ಬೆರೀಯನ ವಂಶಜರಲ್ಲಿ ಅಹ್ಯೋ, ಶಾಷಕ್, ಯೆರೇಮೋತ್,

15 ಜೆಬದ್ಯ, ಅರಾದ್, ಎದೆರ್,

16 ಮೀಕಾಯೇಲ್, ಇಷ್ಪ, ಯೋಹ ಎಂಬವರೂ ಸೇರಿದ್ದರು.


ಜೆರುಸಲೇಮಿನಲ್ಲಿ ನೆಲೆಸಿದ ಬೆನ್ಯಾಮೀನರು

17 ಎಲ್ಪಾಲನ ಮಕ್ಕಳು - ಜೆಬದ್ಯ, ಮೆಷುಲ್ಲಾಮ್, ಹಿಜ್ಕೇ, ಹೆಬೆರ್,

18 ಇಷ್ಮೆರೈ, ಇಜ್ಲೀಯ ಹಾಗೂ ಯೋಬಾಬ್ ಎಂಬವರು.

19 ಶಿಮ್ಮೀಯ ಮಕ್ಕಳು - ಯಾಕೀಮ್, ಜಿಕ್ರೀ, ಜಬ್ದೀ,

20 ಎಲೀಗೇನೈ, ಚಿಲ್ಲೆತೈ, ಎಲೀಯೇಲ್,

21 ಅದಾಯ, ಬೆರಾಯ ಮತ್ತು ಶಿಮ್ರಾತ್ ಎಂಬವರು.

22 ಶಾಷಕನ ಮಕ್ಕಳು - ಇಷ್ಪಾನ್, ಏಬೆರ್, ಎಲೀಯೇಲ್,

23 ಅಬ್ದೋನ್, ಜಿಕ್ರಿ, ಹನಾನ್,

24 ಹನನ್ಯ, ಏಲಾಮ್, ಅನೆತೋತೀಯ,

25 ಇಫ್ದೆಯಾಹ, ಪೆನೂವೇಲ್ ಎಂಬವರು.

26 ಯೆರೋಹಾಮನ ಮಕ್ಕಳು - ಶಂಷೆರೈ, ಶೆಹರ್ಯ, ಅತಲ್ಯ,

27 ಯಾರೆಷ್ಯ, ಏಲೀಯ ಹಾಗೂ ಜಿಕ್ರೀ ಎಂಬವರು.

28 ಇವರು ಜೆರುಸಲೇಮಿನಲ್ಲಿ ನೆಲೆಸಿದ ಪುರಾತನ ಕುಟುಂಬಗಳ ಮುಖ್ಯಸ್ಥರೂ ಅವರ ಪ್ರಮುಖ ವಂಶಜರೂ ಆಗಿದ್ದಾರೆ.


ಗಿಬೆಯೋನ್, ಜೆರುಸಲೇಮಗಳಲ್ಲಿಯ ಬೆನ್ಯಾಮೀನರು

29 ಯೆಗೂವೇಲ, ಗಿಬ್ಯೋನ ಪಟ್ಟಣವನ್ನು ಕಟ್ಟಿಸಿ ಅಲ್ಲಿ ನೆಲೆಸಿದನು. ಅವನ ಹೆಂಡತಿ ಮಾಕ ಎಂಬುವಳು.

30 ಅಬ್ದೋನ ಅವನ ಹಿರಿಯ ಮಗ. ಚೂರ್, ಕೀಷ್, ಬಾಳ್, ನಾದಾಬ್,

31 ಗೆದೋರ್, ಅಹ್ಯೋ, ಜೆಕೆರ್,

32 ಮತ್ತು ಶಿಮ್ಮೀಯ ತಂದೆ ಮಿಕ್ಲೋತ್ ಎಂಬವರು ಅವನ ಇತರ ಮಕ್ಕಳು. ಅವರ ವಂಶಜರು ಜೆರುಸಲೇಮಿನಲ್ಲಿ ತಮ್ಮ ಗೋತ್ರದ ಇತರ ಕುಟುಂಬಗಳ ಹತ್ತಿರ ವಾಸಿಸಿದರು.


ಅರಸ ಸೌಲನ ಕುಟುಂಬ

33 ಕೀಷನ ತಂದೆ ನೇರ. ಕೀಷ ಅರಸ ಸೌಲನ ತಂದೆ. ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು ಸೌಲನ ಮಕ್ಕಳು.

34 ಯೋನಾತಾನ್ ಮೆರೀಬ್ಬಾಳನ ತಂದೆ. ಇವನು ಮೀಕನ ತಂದೆ.

35 ಮೀಕನಿಗೆ ನಾಲ್ವರು ಮಕ್ಕಳು - ಪೀತೋನ್, ಮೆಲಿಕ್, ತರೇಯ, ಆಹಾಜ್ ಎಂಬವರು.

36 ಆಹಾಜ ಯೆಹೋವಾದ್ಧಾಹನ ತಂದೆ. ಇವನಿಗೆ ಮೂರು ಜನ ಮಕ್ಕಳು - ಅಲೆಮೆತ್, ಅಜ್ಮಾವೆತ್, ಜಿಮ್ರೀ ಎಂಬವರು. ಜಿಮ್ರೀ ಮೋಚನ ತಂದೆ.

37 ಮೋಚನು ಬಿನ್ನನಿಗೆ, ಬಿನ್ನನು ರಾಫನಿಗೆ, ರಾಫನು ಎಲ್ಲಾಸನಿಗೆ, ಎಲ್ಲಾಸ ಅಚೇಲನಿಗೆ ತಂದೆಯಾಗಿದ್ದರು.

38 ಅಚೇಲನಿಗೆ ಆರು ಜನ ಮಕ್ಕಳಿದ್ದರು: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ, ಹಾನಾನ್ ಎಂಬವರು.

39 ಅಚೇಲನ ತಮ್ಮನಾದ ಏಷೆಕನ ಮಕ್ಕಳು - ಮೊದಲನೆಯವನು ಊಲಾಮ್, ಎರಡನೆಯವನು ಯೆಯೂಷ್, ಮೂರನೆಯವನು ಎಲೀಫೆಲೆಟ್ ಎಂಬವರು.

40 ಊಲಾಮನ ಮಕ್ಕಳು ಶೂರಸೈನಿಕರೂ ಬಿಲ್ಲುವಿದ್ಯೆಯಲ್ಲಿ ಪರಿಣಿತರೂ ಆಗಿದ್ದರು. ಅವನಿಗೆ ಒಟ್ಟು ಒಂದುನೂರ ಐವತ್ತು ಮಂದಿ ಮಕ್ಕಳು ಮೊಮ್ಮಕ್ಕಳೂ ಇದ್ದರು. ಇವರೆಲ್ಲರೂ ಬೆನ್ಯಾಮೀನ್ ಗೋತ್ರದವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು