Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 3 - ಕನ್ನಡ ಸತ್ಯವೇದವು C.L. Bible (BSI)


ಅರಸ ದಾವೀದನ ಮಕ್ಕಳು

1 ದಾವೀದನು ಹೆಬ್ರೋನಿನಲ್ಲಿದ್ದಾಗ ಅವನಿಗೆ ಹುಟ್ಟಿದ ಗಂಡುಮಕ್ಕಳ ಹೆಸರುಗಳು ಇವು: ಅಮ್ನೋನ - ಜೆಸ್ರೀಲಿನ ಅಹೀನೋಮ ಇವನ ತಾಯಿ. ದಾನಿಯೇಲ - ಕರ್ಮೇಲಿನ ಆಬೀಗೈಲಳು ಇವನ ತಾಯಿ.

2 ಅಬ್ಷಾಲೋಮ - ಗೆಷೂರಿನ ಅರಸ ತಲ್ಮೈಯ ಮಗಳು ಮಾಕ ಇವನ ತಾಯಿ. ಅದೋನಿಯ - ಹಗ್ಗೀತ್ ಇವನ ತಾಯಿ.

3 ಶೆಫಟ್ಯ - ಅಬೀಟಲಳು ಇವನ ತಾಯಿ. ಇತ್ರಾಮ - ಎಗ್ಲಳು ಇವನ ತಾಯಿ.

4 ದಾವೀದನು ಹೆಬ್ರೋನಿನಲ್ಲಿ ಆಳ್ವಿಕೆ ಮಾಡಿದ ಏಳೂವರೆ ವರ್ಷಗಳಲ್ಲಿ ಈ ಆರೂ ಜನ ಮಕ್ಕಳು ಅಲ್ಲಿಯೇ ಹುಟ್ಟಿದರು. ಜೆರುಸಲೇಮಿನಲ್ಲಿ ಅವನು ಅರಸನಾಗಿ ಮೂವತ್ಮೂರು ವರ್ಷ ಆಡಳಿತ ಮಾಡಿದನು.

5 ಅಲ್ಲಿ ಅವನಿಗೆ ಅನೇಕ ಗಂಡುಮಕ್ಕಳು ಹುಟ್ಟಿದರು. ದಾವೀದನ ಹೆಂಡತಿ ಬತ್ಷೂವ ಅಮ್ಮೀಯೇಲನ ಮಗಳು. ಆಕೆ - ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡುಮಕ್ಕಳಿಗೆ ಜನ್ಮವಿತ್ತಳು.

6 ಅವನಿಗೆ ಇನ್ನೂ ಒಂಬತ್ತು ಜನ ಗಂಡುಮಕ್ಕಳಿದ್ದರು: ಇಬ್ಹಾರ್, ಎಲೀಷಾಮ, ಎಲೀಫೆಲೆಟ್,

7 ನೊಗ, ನೆಫೆಗ್, ಯಾಫೀಯ,

8 ಎಲೀಷಾಮ, ಎಲ್ಯಾದ, ಎಲೀಫೆಲೆಟ್ ಎಂಬವರೇ.

9 ಇವರಲ್ಲದೆ ದಾವೀದನಿಗೆ ಅವನ ಉಪಪತ್ನಿಯರಿಂದ ಗಂಡುಮಕ್ಕಳಿದ್ದರು; ತಾಮಾರ್ ಎಂಬ ಹೆಣ್ಣುಮಗಳೂ ಇದ್ದಳು.


ಅರಸ ಸೊಲೊಮೋನನ ವಂಶಜರು

10 ಸೊಲೊಮೋನನ ವಂಶದಲ್ಲಿ ಜನಿಸಿದವರ ಹೆಸರುಗಳು ಇಂತಿವೆ: ಸೊಲೊಮೋನ, ರೆಹಬ್ಬಾಮ, ಅಬೀಯ, ಆಸ, ಯೆಹೋಷಾಫಾಟ್,

11 ಯೆಹೋರಾಮ್, ಅಹಜ್ಯ, ಯೆಹೋವಾಷ್,

12 ಅಮಚ್ಯ, ಅಜರ್ಯ, ಯೋತಾಮ್,

13 ಅಹಾಜ್, ಹಿಜ್ಕೀಯ, ಮನಸ್ಸೆ,

14 ಅಮೋನ್ ಹಾಗು ಯೋಷೀಯ

15 ಯೋಷೀಯನಿಗೆ ನಾಲ್ಕು ಜನಮಕ್ಕಳು: ಯೋಹಾನಾನ್, ಯೆಹೋಯಾಕೀಮ್, ಚಿದ್ಕೀಯ ಮತ್ತು ಶಲ್ಲೂಮ್.

16 ಯೆಹೋಯಾಕೀಮನಿಗೆ ಯೆಕೊನ್ಯ ಮತ್ತು ಚಿದ್ಕೀಯ ಎಂಬಿಬ್ಬರು ಮಕ್ಕಳಿದ್ದರು.


ಅರಸ ಯೆಹೋಯಾಕೀಮನ ವಂಶಜರು

17 ಬಾಬಿಲೋನಿಯರಿಂದ ಸೆರೆಯಾಳಾಗಿ ಒಯ್ಯಲ್ಪಟ್ಟ ಅರಸ ಯೆಕೊನ್ಯನ ವಂಶಜರು ಇವರು: ಯೆಕೊನ್ಯನಿಗೆ ಏಳು ಜನ ಗಂಡುಮಕ್ಕಳು: ಶೆಯಲ್ತೀಯೇಲ್,

18 ಮಲ್ಕೀರಾಮ್, ಪೆದಾಯ, ಶೆನಚ್ಚರ್, ಯೆಕಮ್ಯ, ಹೋಷಾಮ, ನೆಬದ್ಯ ಎಂಬವರು.

19 ಪೆದಾಯನಿಗೆ ಜೆರುಬ್ಬಾಬೆಲ್ ಮತ್ತು ಶಿಮ್ಮೀ ಎಂಬಿಬ್ಬರು ಮಕ್ಕಳಿದ್ದರು. ಜೆರುಬ್ಬಾಬೆಲನಿಗೆ ಮೆಷುಲ್ಲಾಮ್, ಹನನ್ಯ ಎಂಬ ಇಬ್ಬರು ಗಂಡುಮಕ್ಕಳು ಹಾಗೂ ಶೆಲೋಮೀತ್ ಎಂಬ ಮಗಳೂ ಇದ್ದಳು.

20 ಇವರಲ್ಲದೆ ಹಷುಬ, ಓಹೆಲ್, ಬೆರೆಕ್ಯ, ಹಸದ್ಯ, ಯೂಷಬ್ಹೆಸೆದ್ ಎಂಬ ಐವರು ಗಂಡು ಮಕ್ಕಳು ಅವನಿಗಿದ್ದರು.

21 ಹನನ್ಯನ ಇಬ್ಬರು ಮಕ್ಕಳು: ಪೆಲಟ್ಯ ಮತ್ತು ಯೆಶಾಯ ಎಂಬವರು ಯೆಶಾಯ ರೆಫಾಯನ ತಂದೆ, ಇವನು ಅರ್ನಾನನ ತಂದೆ, ಇವನು ಓಬದ್ಯನ ತಂದೆ, ಇವನು ಶೆಕನ್ಯನ ತಂದೆ.

22 ಶೆಕನ್ಯನಿಗೆ ಶೆಮಾಯ ಎಂಬ ಮಗನೂ ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ, ಶೆಷಾಟ್ ಎಂಬ ಐದು ಜನ ಮೊಮ್ಮಕ್ಕಳೂ ಇದ್ದರು.

23 ನೆಯರ್ಯನಿಗೆ ಎಲ್ಯೋಗೇನೈ, ಹಿಜ್ಕೀಯ, ಅಜ್ರೀಕಾಮ್ ಎಂಬ ಮೂವರು ಮಕ್ಕಳಿದ್ದರು.

24 ಎಲ್ಯೋಗೇನೈಯ ಏಳು ಜನ ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ, ಅನಾನೀ ಎಂಬವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು