1 ಪೂರ್ವಕಾಲ ವೃತ್ತಾಂತ 2 - ಕನ್ನಡ ಸತ್ಯವೇದವು C.L. Bible (BSI)ಯೆಹೂದನ ವಂಶಾವಳಿ 1 ಯಕೋಬನ ಹನ್ನೆರಡು ಜನ ಮಕ್ಕಳು ಇವರು: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬೂಲೂನ್, 2 ದಾನ್, ಜೋಸೆಫ್, ಬಿನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್. 3 ಯೆಹೂದನ ಹೆಂಡತಿ ಶೂನನ ಮಗಳಾದ ಕಾನಾನಳು. ಅವಳಿಂದ ಏರ್, ಓನಾನ್, ಶೇಲಹ ಎಂಬ ಮೂರು ಮಕ್ಕಳು ಜನಿಸಿದರು. ಅವನ ಹಿರಿಯ ಮಗ ಏರನು ಬಹಳ ದುಷ್ಟ. ಆದುದರಿಂದ ಸರ್ವೇಶ್ವರ ಅವನನ್ನು ಕೊಂದುಹಾಕಿದರು. 4 ಯೆಹೂದನಿಗೆ ಅವನ ಸೊಸೆ ತಾಮಾರಳಿಂದ ಪೆರೆಜ್ ಹಾಗೂ ಜೆರಹ ಎಂಬ ಮಕ್ಕಳು ಜನಿಸಿದರು. ಯೆಹೂದನ ಮಕ್ಕಳು ಒಟ್ಟು ಐದು ಮಂದಿ. 5 ಪೆರೆಚನಿಗೆ ಹೆಚ್ರೋನ್, ಹಾಮುಲ್ ಎಂಬಿಬ್ಬರು ಮಕ್ಕಳು. 6 ಅವನ ಸಹೋದರ ಜೆರಹನಿಗೆ ಐದು ಜನ ಮಕ್ಕಳು: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್, ಮತ್ತು ದಾರ. 7 ಜೆರಹನ ಸಂತತಿಯಲ್ಲಿ ಕರ್ಮಿಯ ಮಗ ಆಕಾರನು ಸರ್ವೇಶ್ವರನಿಗೆ ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡದ್ದರಿಂದ ಇಸ್ರಯೇಲರಿಗೆ ಆಪತ್ತನ್ನು ತಂದಿದ್ದನು. 8 ಏತಾನನಿಗೆ ಅಜರ್ಯನೆಂಬ ಒಬ್ಬ ಮಗನಿದ್ದನು. ಅರಸ ದಾವೀದನ ವಂಶಾವಳಿ 9 ಹೆಚ್ರೋನನಿಗೆ ಮೂರು ಜನ ಮಕ್ಕಳು ಇದ್ದರು. ಅವರು - ಯೆರಹ್ಮೇಲ್, ರಾಮ್ ಮತ್ತು ಕೆಲೂಬಾಯ್ ಎಂಬವರು. 10 ರಾಮನಿಂದ ಜೆಸ್ಸೆವರೆಗಿನ ವಂಶಜರು: ಅಮ್ಮೀನಾದಾಬ್, ಯೆಹೂದ ಗೋತ್ರದ ಪ್ರಮುಖ ವ್ಯಕ್ತಿಯಾದ ನಹಶೋನ, 11 ಸಲ್ಮನ, ಬೋವಜ, 12 ಓಬೇದ ಹಾಗೂ ಜೆಸ್ಸೆ. 13 ಜೆಸ್ಸೆಯ ಏಳು ಜನ ಮಕ್ಕಳು: ಎಲೀಯಾಬ್, ಅಬೀನಾದಾಬ್, ಶಿಮ್ಮ, 14 ನೆತನೇಲ್, ರದ್ದೈ, 15 ಓಚೆಮ್ ಮತ್ತು ದಾವೀದ್. 16 ಅವನ ಇಬ್ಬರು ಹೆಣ್ಣು ಮಕ್ಕಳು: ಚೆರೂಯ ಹಾಗೂ ಅಬೀಗೈಲ ಎಂಬವರು. ಜೆಸ್ಸೆಯ ಮಗಳು ಚೆರೂಯಳಿಗೆ ಅಬೈ , ಯೋವಾಬ್ , ಅಸಾಹೇಲ್ ಎಂಬ ಮೂರು ಜನ ಮಕ್ಕಳಿದ್ದರು . 17 ಅವನ ಇನ್ನೊಬ್ಬ ಮಗಳು ಅಬೀಗೈಲಳು ಇಷ್ಮಾಯೇಲನ ವಂಶಜ ಯೆತೆರ್ ಎಂಬವನನ್ನು ವಿವಾಹವಾಗಿ ಅಮಾಸ ಎಂಬ ಮಗನನ್ನು ಪಡೆದಳು. ಹೆಚ್ರೋನನ ವಂಶಜರು 18 ಹೆಚ್ರೋನನ ಮಗ ಕಾಲೇಬ, ಅಜೂಬಳನ್ನು ಮದುವೆಯಾಗಿ ಯೆರ್ಯೋತ್ ಎಂಬ ಮಗಳನ್ನು ಪಡೆದನು. ಆಕೆಯ ಮೂರು ಜನ ಗಂಡುಮಕ್ಕಳು: ಯೇಷೆರ್, ಶೊಬಾಬ್, ಅರ್ದೋನ್ ಎಂಬವರು. 19 ಅಜೂಬಳ ಮರಣದ ನಂತರ ಕಾಲೇಬನು ಎಫ್ರಾತಳನ್ನು ಮದುವೆ ಆಗಿ ಹೂರ್ ಎಂಬ ಮಗನನ್ನು ಪಡೆದನು. 20 ಹೂರನಿಗೆ ಊರಿಯ ಎಂಬ ಮಗ ಮತ್ತು ಬೆಚಲೇಲ ಎಂಬ ಮೊಮ್ಮಗ ಇದ್ದರು. 21 ಹೆಚ್ರೋನ ಅರುವತ್ತು ವರ್ಷದವನಾದಾಗ ಗಿಲ್ಯಾದನ ಸೋದರಿಯಾದ ಮಾಕೀರನ ಮಗಳನ್ನು ಮದುವೆಯಾದನು. ಅವರಿಗೆ ಸೆಗೂಬ ಎಂಬ ಮಗ ಜನಿಸಿದ. 22 ಸೆಗೂಬನಿಗೆ ಯಾಯೀರ ಎಂಬ ಮಗ ಜನಿಸಿದ. ಯಾಯೀರ ಗಿಲ್ಯಾದನ ಇಪ್ಪತ್ಮೂರು ಪಟ್ಟಣಗಳ ಮೇಲೆ ಆಡಳಿತ ಮಾಡಿದನು. 23 ಆದರೆ ಗೆಷೂರ್ಯರ ಮತ್ತು ಅರಾಮ್ಯರ ರಾಜ್ಯಗಳವರು ಯಾಯೀರನ ಹಾಗೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನೂ ಅವುಗಳ ಸಮೀಪದ ಪಟ್ಟಣಗಳನ್ನೂ ಸೇರಿ ಒಟ್ಟು ಅರುವತ್ತು ಪಟ್ಟಣಗಳನ್ನು ಗೆದ್ದುಕೊಂಡರು. ಅಲ್ಲಿ ವಾಸಿಸಿದ್ದ ಎಲ್ಲಾ ಜನರೂ ಗಿಲ್ಯಾದನ ತಂದೆ ಮಾಕೀರನ ವಂಶಜರೇ ಆಗಿದ್ದರು. 24 ಹೆಚ್ರೋನನು ಮರಣ ಹೊಂದಿದ ನಂತರ ಅವನ ಮಗ ಕಾಲೇಬ್ ತನ್ನ ತಂದೆಯ ವಿಧವೆ ಎಫ್ರಾತಳನ್ನು ಮದುವೆಯಾದನು. ಅವರಿಗೆ ಅಷ್ಹೂರ ಎಂಬ ಮಗ ಜನಿಸಿದ. ತೆಕೋವ ಪಟ್ಟಣವನ್ನು ಕಟ್ಟಿದವನು ಇವನೇ. ಯೆರಹ್ಮೇಲನ ವಂಶಜರು 25 ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನಿಗೆ ಐದು ಜನ ಮಕ್ಕಳು ಇದ್ದರು. ಅವರು - ಹಿರಿಯವನಾದ ರಾಮ್ ಮತ್ತು ಬೂನ, ಓರೆನ್, ಓಚೆಮ್, ಹಾಗೂ ಅಹೀಯ ಎಂಬವರು. 26-27 ರಾಮನಿಗೆ ಮಾಚ್, ಯಾಮೀನ್, ಏಕೆರ್ ಎಂಬ ಮೂರು ಮಕ್ಕಳಿದ್ದರು. ಯೆರೆಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಅವಳಿಂದ ಓನಾಮ ಎಂಬ ಮಗ ಜನಿಸಿದ. 28 ಓನಾಮನಿಗೆ ಶಮ್ಮೈ, ಮತ್ತು ಯಾದ ಎಂಬ ಇಬ್ಬರು ಮಕ್ಕಳಿದ್ದರು. ಶಮ್ಮೈ ಮಕ್ಕಳು: ನಾದಾಬ್ ಹಾಗೂ ಅಬೀಷೂರ್. 29 ಅಬೀಷೂರ ಅಬೀಹೈಲ್ ಎಂಬವಳೊಂದಿಗೆ ವಿವಾಹವಾಗಿ ಅಹ್ಬಾನ್, ಮೋಲೀದ್ ಎಂಬಿಬ್ಬರು ಮಕ್ಕಳನ್ನು ಪಡೆದನು. 30 ಅಬೀಷೂರನ ಸಹೋದರ ನಾದಾಬನಿಗೆ ಸೆಲೆದ್, ಅಪ್ಪಯಿಮ್ ಎಂಬಿಬ್ಬರು ಮಕ್ಕಳಿದ್ದರು. ಆದರೆ ಸೆಲೆದನು ಮಕ್ಕಳಿಲ್ಲದೇ ಮರಣ ಹೊಂದಿದನು. 31 ಅಪ್ಪಯಿಮ್ ಇಷ್ಷೀಯ ತಂದೆ. ಇಷ್ಷೀ ಶೇಷಾನ್ ನ ತಂದೆ, ಶೇಷಾನನು ಅಹ್ಲ್ಯೋ ತಂದೆ. 32 ಶಮ್ಮೆಯ ತಮ್ಮನಾದ ಯಾದಾನಿಗೆ ಯೆತೆರ್ ಮತ್ತು ಯೋನಾತಾನ್ ಎಂಬ ಮಕ್ಕಳು ಇದ್ದರು. ಯೆತೆರ್ ಮಕ್ಕಳಿಲ್ಲದೇ ಮಡಿದನು. 33 ಯೋನಾತಾನನಿಗೆ ಪೆಲಿತ್, ಜಾಜ ಎಂಬ ಮಕ್ಕಳಿದ್ದರು. ಇವರೆಲ್ಲರೂ ಯೆರಹ್ಮೇಲನ ವಂಶಜರು. 34 ಶೇಷಾನನಿಗೆ ಗಂಡುಮಕ್ಕಳಿರಲಿಲ್ಲ; ಹೆಣ್ಣು ಮಕ್ಕಳೇ ಇದ್ದರು. ಅವನಿಗೆ ಯರ್ಹ ಎಂಬ ಸೇವಕನಿದ್ದನು. 35 ಅವನಿಗೆ ತನ್ನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಟ್ಟನು. ಅವರಿಗೆ ಜನಿಸಿದ ಮಗನ ಹೆಸರು ಅತ್ತೈ ಎಂದು. 36 ಅತ್ತೈನಿಂದ ಎಲೀಮಾನವರೆಗಿನ ವಂಶಜರ ಹೆಸರುಗಳು: ಅತ್ತೈ, ನಾತಾನ್, ಜಾಬಾದ, 37 ಎಫ್ಲಾಲ, ಓಬೇದ್, 38 ಯೇಹೂವು, ಅಜರ್ಯ, 39 ಹೆಲೆಚ, ಎಲ್ಲಾಸ, 40 ಸಿಸ್ಮೈ, ಶಲ್ಲೂಮ, 41 ಯೆಕಮ್ಯಾಹ ಮತ್ತು ಎಲೀಷಾಮ. ಕಾಲೇಬನ ವಂಶಜರು 42 ಕಾಲೇಬನ ಚೊಚ್ಚಲು ಮಗನಿಗೆ ಅಂದರೆ ಯೆರಹ್ಮೇಲನ ಸಹೋದರನಿಗೆ ಮೇಷ ಎಂದು ಹೆಸರಿಡಲಾಗಿತ್ತು. ಮೇಷನು ಜೀಫ್ಯನ ತಂದೆ, ಇವನು ಮಾರೇಷನ ತಂದೆ, ಇವನು ಹೆಬ್ರೋನನ ತಂದೆ, 43 ಹೆಬ್ರೋನನಿಗೆ ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆವು ಎಂಬ ನಾಲ್ವರು ಮಕ್ಕಳು ಇದ್ದರು. 44 ಶೆಮ ರಹಮನ ತಂದೆ, ಯೊರ್ಕೆಯಾಮ್ಯನ ಅಜ್ಜ. ಶೆಮನ ಸಹೋದರ ರೆಕೆಮ ಶಮ್ಮೈಯನ ತಂದೆ, 45 ಇವನು ಮಾವೋನ್ಯನ ತಂದೆ, ಇವನು ಬೇತ್ಸೂರನ ತಂದೆ. 46 ಕಾಲೇಬನಿಗೆ ಏಫಾ ಎಂಬ ಉಪಪತ್ನಿ ಇದ್ದಳು. ಅವಳಿಂದ ಅವನಿಗೆ ಹಾರಾನ್, ಮೋಚ, ಗಾಜೇಜ್ ಹುಟ್ಟಿದರು. ಹಾರಾನನಿಗೆ ಗಾಜೇಜ ಎಂಬ ಹೆಸರಿನ ಮಗನಿದ್ದನು. 47 ಯಾದೈ ಎಂಬವನಿಗೆ ಆರು ಜನ ಮಕ್ಕಳು: ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಪ, ಶಾಫ್ ಎಂಬವರು. 48 ಕಾಲೇಬನ ಇನ್ನೊಬ್ಬ ಉಪಪತ್ನಿ - ಮಾಕಾ. ಅವಳಿಂದ ಶೆಬಿರ್, ತಿರ್ಹನ ಎಂಬಿಬ್ಬರು ಮಕ್ಕಳು ಜನಿಸಿದರು. 49 ಅನಂತರ ಅವಳಿಗೆ ಮತ್ತೆ ಇಬ್ಬರು ಮಕ್ಕಳು ಜನಿಸಿದರು: ಮದ್ಮನ್ನ ಪಟ್ಟಣವನ್ನು ಕಟ್ಟಿಸಿದ ಶಾಫ್ ಒಬ್ಬನು. ಮಕ್‍ಬೇನ ಮತ್ತು ಗಿಬ್ಯ ಪಟ್ಟಣಗಳನ್ನು ಕಟ್ಟಿಸಿದ ಶೆವ ಇನ್ನೊಬ್ಬನು. ಇವರಲ್ಲದೆ ಕಾಲೇಬನಿಗೆ ಅಕ್ಸಾಹ ಎಂಬ ಹೆಣ್ಣು ಮಗಳು ಇದ್ದಳು. 50 ಇನ್ನುಳಿದ ಕಾಲೇಬನ ವಂಶಜರು: ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ ಎಂದು. ಹೂರನ ಮಗ ಶೋಬಾಲ್ - ಕಿರ್ಯತ್ಯಾರೀಮ್ ಪಟ್ಟಣವನ್ನೂ 51 ಅವನ ಇನ್ನೊಬ್ಬ ಮಗ ಸಲ್ಮ ಬೆತ್ಲೆಹೇಮನ್ನೂ ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು. 52 ಕಿರ್ಯತ್ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು ಹರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ, 53 ಹಾಗೂ ಕಿರ್ಯತ್ಯಾರೀಮ್‍ನಲ್ಲಿ ವಾಸಿಸುವ ಯೆತೆರಿನವರ, ಪೂತ್ಯರ, ಶುಮಾತ್ಯರ ಹಾಗೂ ಮಿಷ್ರಾಗ್ಯರ ಪೂರ್ವಜನಾಗಿದ್ದನು. ಚೊರ್ರಾತ್ಯರು ಹಾಗೂ ಎಷ್ಟಾವೋಲ್ಯರು ಈ ಗೋತ್ರಗಳಿಗೆ ಸೇರಿದವರು. 54 ನೆಟೋಫಾ, ಅಟರೋತ್, ಬೇತ್ಯೋವಾಬ್ ಹಾಗೂ ಮಾನಹತಿಯರ ಎರಡು ಗೋತ್ರಗಳಲ್ಲಿ ಒಂದಾದ ಜೊರ್ಗದ ನಿವಾಸಿಗಳಿಗೆ ಬೆತ್ಲೆಹೇಮ್ ಪಟ್ಟಣದ ಸ್ಥಾಪಕ ಸಲ್ಮನು ಮೂಲಪುರುಷ ಆಗಿದ್ದನು. 55 ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ನಕಲು ಮಾಡುವುದರಲ್ಲಿ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು, ಸುಕಾತ್ಯರು ಯಾಬೇಚಿನಲ್ಲಿ ವಾಸಿಸಿದ್ದರು. ರೇಕಾಬ್ಬರೊಂದಿಗೆ ಅಂತರ್ ವಿವಾಹ ಮಾಡಿಕೊಂಡ ಕೇನ್ಯರು ಇವರೇ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India