1 ಪೂರ್ವಕಾಲ ವೃತ್ತಾಂತ 1 - ಕನ್ನಡ ಸತ್ಯವೇದವು C.L. Bible (BSI)ಆದಾಮನಿಂದ ಅಬ್ರಹಾಮನವರೆಗೆ ( ಆದಿ. 5:1-32 ; 10:1-32 ; 11:10-26 ) 1 ಆದಾಮನ ಮಗ ಶೇತ್, ಶೇತನ ಮಗ ಎನೋಷ್, ಎನೋಷನ ಮಗ ಕೇನಾನ್, 2 ಕೇನಾನನ ಮಗ ಮಹಲಲೀಲ್, ಮಹಲಲೀಲನ ಮಗ ಯೆರೆದ್, 3 ಯೆರೆದನ ಮಗ ಹನೋಕ್, ಹನೋಕನ ಮಗ ಮೆತೂಷೆಲಹ, ಮೆತೂಷೆಲಹನ ಮಗ ಲೆಮೆಕ್, 4 ಲೆಮೆಕನ ಮಗ ನೋಹ, ನೋಹನಿಗೆ ಶೇಮ್, ಹಾಮ್, ಯೆಫೆತ್ ಎಂಬ ಮೂರು ಜನ ಮಕ್ಕಳು ಇದ್ದರು. 5 ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು ಯೆಫೆತನ ಮಕ್ಕಳು. ಇವರ ಹೆಸರುಗಳಿರುವ ಜನಾಂಗಗಳಿಗೆ ಇವರೇ ಮೂಲಪುರುಷರು. 6 ಅಷ್ಕೆನೆಜ್, ರೀಫತ್, ತೋಗರ್ಮ - ಇವರು ಗೋಮೆರನ ಮಕ್ಕಳು. 7 ಎಲೀಷ, ಸ್ಪೇನ್, ಸೈಪ್ರಸ್, ದೋದಾನೀಮ್ ಎಂಬ ಸ್ಥಳಗಳವರು ಯಾವಾನನ ಮಕ್ಕಳು. 8 ಕೂಷ್, ಈಜಿಪ್ಟ್ (ಮಿಚ್ರಯಿಮ್), ಲಿಬ್ಯ (ಪೂಟ್), ಕಾನಾನ್‍ಗಳಲ್ಲಿರುವವರು ಹಾಮನ ವಂಶಜರು. ಇವೇ ಈ ಜನಾಂಗಗಳ ಮೂಲಪಿತೃಗಳ ಹೆಸರುಗಳು. 9 ಸೆಬ, ಹವೀಲ, ಸಬ್ತ, ರಮ್ಮಸಬ್ತೆಕಾಗಳ ಜನರು ಕೂಷನ ಸಂತತಿಯವರು. ಶೆಬ ಮತ್ತು ದೆದಾನಿನವರು ರಮ್ಮ ಸಂತಾನದವರು. ( 10 ಕೂಷನ ಮಗ ನಿಮ್ರೋದ; ಇವನು ಪರಾಕ್ರಮದಿಂದ ಮೊದಲನೆಯ ಭೂರಾಜನಾದನು.) 11 ಈಜಿಪ್ಟಿನ ಜನಾಂಗದಿಂದ ಲೂದ್ಯರೂ, ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ 12 ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಜನಿಸಿದರು. (ಫಿಲಿಷ್ಟಿಯರು ಕಸ್ಲುಹ್ಯರಿಂದ ಬಂದವರು.) 13 ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಹೇತ್ ಎರಡನೆಯವನು. ಈ ಹೆಸರಿನ ಜನಾಂಗದವರಿಗೆ ಇವರೇ ಮೂಲಪುರುಷರು. 14 ಯೆಬೂಸಿಯ, ಅಮೋರಿಯ, ಗಿರ್ಗಾಷಿಯ, 15 ಹಿವ್ವಿಯ, ಅರ್ಕಿಯ, ಸೀನಿಯ, 16 ಅರ್ವಾದಿಯ, ಚೆಮಾರಿಯ ಮತ್ತು ಹಮಾತಿನ ಜನರ ಮೂಲಪಿತೃ ಕಾನಾನನು. 17 ಶೇಮನ ಮಕ್ಕಳು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್, ಮೆಷೆಕ್ ಎಂಬವರು. ಈ ಹೆಸರಿನ ಜನಾಂಗಗಳಿಗೆ ಇವರೇ ಮೂಲಪುರುಷರು. 18 ಅರ್ಪಕ್ಷದ್, ಶೆಲಹನ ತಂದೆ, ಶೆಲಹ, ಏಬೆರನ ತಂದೆ. 19 ಏಬೆರನಿಗೆ ಇಬ್ಬರು ಮಕ್ಕಳು - ಪೆಲೆಗ್ ಎಂಬವನು ಒಬ್ಬ. ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಯೊಕ್ತಾನ ಎಂಬವನು ಇನ್ನೊಬ್ಬ. 20 ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ, 21 ಹದೋರಾಮ್, ಊಜಾಲ್, ದಿಕ್ಲ, 22 ಏಬಾಲ್, ಅಬೀಮಾಯೇಲ್, ಶೆಬಾ, 23 ಓಫೀರ್, ಹವೀಲಾ, ಯೋಬಾಬ್ ಎಂಬ ಸ್ಥಳಗಳವರು ಯೊಕ್ತಾನನ ಸಂತಾನದವರು. 24 ಶೇಮನಿಂದ ಅಬ್ರಾಮನವರೆಗಿನ ಸಂತತಿಯವರು ಇವರು: ಅರ್ಪಕ್ಷದ್, ಶೆಲಹ, 25 ಏಬೆರ್, ಪೆಲೆಗ್, ರೆಯೂ, 26 ಸೆರೂಗ್, ನಾಹೋರ್, ತೆರಹ; 27 ಅಬ್ರಾಮ್ (ಇವನು ಅಬ್ರಹಾಮ ಎಂದೂ ಹೆಸರು ಹೊಂದಿದವನು). ಇಷ್ಮಾಯೇಲನ ವಂಶಜರು ( ಆದಿ. 25:12-16 ) 28 ಅಬ್ರಹಾಮನಿಗೆ ಇಬ್ಬರು ಮಕ್ಕಳು - ಇಸಾಕ್ ಮತ್ತು ಇಷ್ಮಾಯೇಲ್. 29 ಇಷ್ಮಾಯೇಲನ ಮಕ್ಕಳು ಹನ್ನೆರಡು ಗೋತ್ರಗಳ ಮುಖ್ಯಸ್ಥರಾದರು. ಅವರು - ನೆಬಾಯೋತ್, (ಇಷ್ಮಾಯೇಲನ ಹಿರೀಮಗನಿಂದ ಈ ಹೆಸರಿನ ಉತ್ಪತ್ತಿ), ಕೇದಾರ್, ಅದ್ಬೆಯೇಲ್, ಮಿಬ್ಸಾಮ್, 30 ಮಿಷ್ಮಾ, ದೂಮಾ, ಮಸ್ಸ, ಹದದ್, ತೇಮ, 31 ಯೆಟೂರ್, ನಾಫೀಷ್, ಕೇದೆಮ ಎಂಬವರು. 32 ಅಬ್ರಹಾಮನಿಗೆ ಕೆಟೂರಳೆಂಬ ಉಪಪತ್ನಿ ಇದ್ದಳು. ಇವಳಿಂದ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬ ಆರು ಜನ ಮಕ್ಕಳು ಜನಿಸಿದರು. ಯೊಕ್ಷಾನ್‍ನಿಗೆ ಶೆಬಾ ಮತ್ತು ದೆದಾನ್ ಎಂಬಿಬ್ಬರು ಮಕ್ಕಳು ಹುಟ್ಟಿದರು. 33 ಮಿದ್ಯಾನ್ ಗೆ ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬ ಐದು ಜನ ಮಕ್ಕಳು ಹುಟ್ಟಿದರು. ಏಸಾವನ ವಂಶಜರು ( ಆದಿ. 36:1-19 ) 34 ಅಬ್ರಹಾಮನ ಮಗ ಇಸಾಕನಿಗೆ ಇಬ್ಬರು ಮಕ್ಕಳು - ಏಸಾವ ಮತ್ತು ಯಕೋಬ. 35 ಏಸಾವನ ಮಕ್ಕಳು - ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್, ಹಾಗೂ ಕೋರಹ ಎಂಬವರು. 36 ಎಲೀಫಜ್ ನ ಮಕ್ಕಳು ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್ ಹಾಗೂ ತಿಮ್ನ ಎಂಬುವಳಿಂದ ಜನಿಸಿದ ಅಮಾಲೇಕ್ ಎಂಬವರು. 37 ರೆಯೂವೇಲನ ಮಕ್ಕಳು - ನಹತ್, ಜೆರಹ, ಶಮ್ಮ ಮತ್ತು ಮಿಜ್ಜ ಎಂಬವರು. ಎದೋಮಿನ ಮೂಲನಿವಾಸಿಗಳು ( ಆದಿ. 36:20-30 ) 38 ಈ ಕೆಳಗೆ ನಮೂದಿಸಿದ ಎದೋಮಿನ ಮೂಲನಿವಾಸಿಗಳು ಸೇಯೀರನಿಂದ ಹುಟ್ಟಿದವರು: ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್, ದೀಶಾನ್. 39 ಹೋರೀ ಮತ್ತು ಹೋಮಾಮ್ ಕುಲಗಳ ಮೂಲಪುರುಷ ಲೋಟಾನ್. ಲೋಟಾನನಿಗೆ ತಿಮ್ನ ಎಂಬ ಒಬ್ಬ ತಂಗಿಯಿದ್ದಳು. 40 ಶೋಬಾಲ್ - ಇವನು ಅಲ್ಯಾನ್, ಮಾನಹತ್, ಏಬಾಲ್, ಶೆಫೀ, ಓನಾಮ್ ಎಂಬವರ ಕುಲಗಳ ಪೂರ್ವಜ. 41 ಅನಾಹನು ದೀಶೋನನ ತಂದೆ. ದೀಶೋನನು ಹಮ್ರಾನ್, ಎಷ್ಬಾನ್, ಇತ್ರಾನ್, ಕೆರಾನ್ ಗೋತ್ರಗಳ ಪೂರ್ವಜ. 42 ಏಚೆರ್: ಇವನು ಬಿಲ್ಹಾನ್, ಜಾವಾನ್, ಯಾಕಾನ್ ಎಂಬ ಕುಲಗಳ ಮೂಲಪುರುಷ. ದೀಶಾನನು, ಉಚ್ ಹಾಗೂ ಅರಾನ್ ಕುಲಗಳ ಪೂರ್ವಜ. ಎದೋಮಿನ ಅರಸರು ( ಆದಿ. 36:20-30 ) 43 ಇಸ್ರಯೇಲರಲ್ಲಿ ಅರಸರೇ ಇರಲಿಲ್ಲದ ಕಾಲದಲ್ಲಿ ಎದೋಮ್ ದೇಶವನ್ನು ಆಳಿದ ಅರಸರು. ಬೆಯೋರನ ಮಗ ಬೆಳನು; ದಿನ್ಹಾಬಾ ಇವನ ರಾಜಧಾನಿ. 44 ಬೆಳನು ಮರಣಹೊಂದಿದ ತರುವಾಯ ಬೊಚ್ರದ ಜೆರಹನ ಮಗ ಯೋಬಾಬ ಅವನ ಉತ್ತರಾಧಿಕಾರಿಯಾದನು. 45 ಯೋಬಾಬ ಮೃತನಾದ ಮೇಲೆ ತೇಮಾನೀಯರ ನಾಡಿನ ಹುಷಾಮ ಅರಸನಾದ. 46 ಹುಷಾಮ ಮೃತನಾದ ಮೇಲೆ ಅವೀತದ ಬೆದದನ ಮಗ ಹದದ ಅರಸನಾದ. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್. 47 ಹದದ ಮೃತನಾದ ಮೇಲೆ ಮಸ್ರೇಕದ ಸಮ್ಲಾಹ ಅರಸನಾದ. 48 ಸಮ್ಲಾಹ ಮೃತನಾದ ಮೇಲೆ ಯುಪ್ರಟಿಸ್ ನದೀತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದ. 49 ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ಹಾನಾನ ಅರಸನಾದ. 50 ಬಾಳ್ಹಾನಾನ್ ಮೃತನಾದ ಮೇಲೆ ಪಾಗೀಯ ಹದದನು ಅರಸನಾದ. ಇವನ ಹೆಂಡತಿ ಮೆಹೇಟಬೇಲ್; ಈಕೆ ಮಟ್ರೇದಳ ಮಗಳು, ಮೇಜಾಹಾಬನ ಮೊಮ್ಮಗಳು. 51-54 ಹದದನು ಮೃತನಾದ ತರುವಾಯ ಆಳಿದ ಎದೋಮ್ಯರು: ತಿಮ್ನ, ಅಲ್ಯ, ಯೆತೇತ್, ಒಹೋಲಿಬಾಮ, ಏಲ, ಪೀನೋನ್, ಕೆನಜ್, ತೇಮಾನ್, ಮಿಬ್ಚಾರ್, ಮಗ್ದೀಯೇಲ್ ಮತ್ತು ಗೀರಾಮ್ ಎಂಬ ಕುಲನಾಯಕರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India