Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ತಿಮೊಥೆಯನಿಗೆ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ತಿಮೊಥೇಯ ಎಂಬವನು ಅಂದಿನ ‘ಏಷ್ಯಾ ಮೈನರ್’ ಸೀಮೆಗೆ ಸೇರಿದ ಲುಸ್ತ್ರ ಎಂಬ ಪಟ್ಟಣದ ಯುವಕ. ಅವನ ತಂದೆ ಗ್ರೀಕನು, ತಾಯಿಯಾದರೋ ಯೆಹೂದ್ಯಳು. ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಪೌಲನಿಗೆ ಈತನು ಸಂಗಾತಿಯೂ ಸಹಾಯಕನೂ ಆಗಿದ್ದನು.
ತಿಮೊಥೇಯನಿಗೆ ಪೌಲನು ಬರೆದ ಈ ಮೊದಲನೆಯ ಪತ್ರದಲ್ಲಿ ಮೂರು ಮುಖ್ಯಾಂಶಗಳನ್ನು ಗಮನಿಸಬಹುದು:
ಮೊದಲನೆಯದಾಗಿ, ಕ್ರೈಸ್ತಸಭೆಯಲ್ಲಿ ಅಬದ್ಧ ಬೋಧನೆ ಮಾಡುವುದನ್ನು ನಿಲ್ಲಿಸಬೇಕೆಂದು ಈ ಪತ್ರ ಕೆಲವರಿಗೆ ಎಚ್ಚರಿಕೆಯನ್ನು ನೀಡುತ್ತದೆ. ಯೆಹೂದ್ಯ ಹಾಗೂ ಇನ್ನಿತರ ಧಾರ್ಮಿಕ ತತ್ವಗಳಿಂದ ಮಿಶ್ರಣವಾಗಿದ್ದ ಈ ಬೋಧನೆ ಕ್ರೈಸ್ತವಿಶ್ವಾಸಿಗಳಲ್ಲಿ ಗೊಂದಲವನ್ನುಂಟುಮಾಡಿತ್ತು. ‘ಭೌತಿಕವಾದ ಈ ಜಗತ್ತು ಕೆಟ್ಟದ್ದು; ಜೀವೋದ್ಧಾರ ಹೊಂದಬೇಕಾದರೆ ಮಾನವನಿಗೆ ಕೆಲವು ರಹಸ್ಯ ವಿಷಯಗಳ ವಿಶಿಷ್ಟ ಅರಿವು ಅಗತ್ಯ; ಕೆಲವು ಆಹಾರಪದಾರ್ಥಗಳ ಸೇವನೆ ನಿಷಿದ್ಧ; ವಿವಾಹವು ನಿಷಿದ್ಧ,’ ಎಂದೆಲ್ಲಾ ಬೋಧನೆಯಾಗುತ್ತಿತ್ತು. ಲೇಖಕನು ಇಂಥ ಬೋಧನೆ ಸರಿಯಲ್ಲವೆನ್ನುತ್ತಾನೆ.
ಎರಡನೆಯದಾಗಿ, ಕ್ರೈಸ್ತಸಭೆಯಲ್ಲಿ ಆರಾಧನೆ ಹಾಗೂ ಆಡಳಿತದ ಬಗ್ಗೆ ಕೆಲವು ಸೂಕ್ತ ಸಲಹೆಗಳನ್ನು ಈ ಪತ್ರ ನೀಡುತ್ತದೆ. ಸಭಾ ಪ್ರಮುಖರು ಹಾಗೂ ಅವರ ಸಹಾಯಕರು ಅನುಸರಿಸಬೇಕಾದ ರೀತಿನೀತಿಗಳನ್ನೂ ಉಲ್ಲೇಖಿಸುತ್ತದೆ.
ಕೊನೆಯದಾಗಿ, ತಿಮೊಥೇಯನು ಕ್ರಿಸ್ತಯೇಸುವಿನ ಪ್ರಾಮಾಣಿಕ ಸೇವಕನಾಗಿರಬೇಕು; ಕ್ರೈಸ್ತವಿಶ್ವಾಸಿಗಳ ಬಗ್ಗೆ ಜವಾಬ್ದಾರಿಯುತನಾಗಿ ನಡೆದುಕೊಳ್ಳಬೇಕು ಎಂದು ಉಪದೇಶ ನೀಡುತ್ತದೆ.
ಪರಿವಿಡಿ
ಪೀಠಿಕೆ 1:1-12
ಕ್ರೈಸ್ತಸಭೆಯ ಹಾಗೂ ಅಧಿಕಾರಿಗಳ ರೀತಿನೀತಿ 1:13—3:16
ತಿಮೊಥೇಯನಿಗೆ ಬುದ್ಧಿವಾದ 4:1—6:21

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು