ಮುನ್ನುಡಿ
ರೋಮ್ ಸಾಮ್ರಾಜ್ಯಕ್ಕೆ ಸೇರಿದ ಅಖಾಯ ಪ್ರಾಂತ್ಯದ ರಾಜಧಾನಿಯಾಗಿದ್ದ ಕೊರಿಂಥ, ಗ್ರೀಕರ ಪ್ರಮುಖ ನಗರ. ವಿವಿಧ ಭಾಷೆಗಳ ಹಾಗೂ ಸಂಸ್ಕೃತಿಗಳ ಜನರು ಸುತ್ತಮುತ್ತಲಿನ ಪ್ರಾಂತ್ಯಗಳಿಂದ ಬಂದು ಅಲ್ಲಿ ನೆಲೆಸಿದ್ದರು. ಚುರುಕಾದ ವ್ಯಾಪಾರ ಉದ್ಯಮಕ್ಕೂ ಹೊಚ್ಚ ಹೊಸ ಸಂಸ್ಕೃತಿಗೂ ಸುಪ್ರಸಿದ್ಧವಾದ ಈ ನಗರ ವಿವಿಧ ಧರ್ಮಗಳ ಬೀಡಾಗಿತ್ತು. ಇತರ ಗ್ರೀಕ್ ಮಹಾನಗರಗಳಂತೆ ಕೊರಿಂಥವೂ ಅನೈತಿಕತೆಗೆ ಹೆಸರುವಾಸಿಯಾಗಿತ್ತು.
ಕ್ರೈಸ್ತಸಭೆಯಲ್ಲೂ ಭಿನ್ನಭೇದಗಳುಂಟಾಗಿದ್ದವು. ಅನೈತಿಕತೆ ಕಾಣಿಸಿಕೊಂಡಿತ್ತು. ಲೈಂಗಿಕ ನೀತಿನಿಯಮ, ವೈವಾಹಿಕ ಜೀವನ, ಮನಸ್ಸಾಕ್ಷಿಯ ಸಮಸ್ಯೆಗಳು, ಸಭಾಜೀವನದಲ್ಲಿ ಕ್ರಮಬದ್ಧತೆ, ಪವಿತ್ರಾತ್ಮ ಅವರ ವರದಾನ, ಪುನರುತ್ಥಾನದ ಪ್ರಶ್ನೆ - ಈ ಮುಂತಾದ ವಿಷಯಗಳು ಪೌಲನ ಗಮನವನ್ನು ಸೆಳೆಯುತ್ತಿದ್ದವು. ಇವುಗಳನ್ನು ಲೇಖಕನು ಶುಭಸಂದೇಶದ ದೃಷ್ಟಿಯಿಂದ ಸೂಕ್ಷ್ಮವಾಗಿ ಈ ಪತ್ರದಲ್ಲಿ ಪರಿಶೀಲಿಸುತ್ತಾನೆ.
ದೇವರು ಮಾನವನಿಗೆ ನೀಡಿರುವ ವರದಾನಗಳಲ್ಲಿ ಪ್ರೀತಿಯೇ ಉತ್ಕೃಷ್ಟವಾದುದು. ಇದನ್ನು ಕವನದ ರೂಪದಲ್ಲಿ ನಿರೂಪಿಸುವ ಹದಿಮೂರನೆಯ ಅಧ್ಯಾಯವು ಜನಪ್ರಿಯವಾದುದು.
ಪರಿವಿಡಿ
ಪೀಠಿಕೆ 1:1-9
ಧರ್ಮಸಭೆಯಲ್ಲಿದ್ದ ವಿವಿಧ ಪಂಗಡಗಳು 1:10—4:21
ಲೈಂಗಿಕ ನಿಯಮ, ವೈವಾಹಿಕ ಜೀವನ 5:1—7:40
ಕ್ರೈಸ್ತರು ಮತ್ತು ಕ್ರೈಸ್ತೇತರರು 8:1—11:1
ಸಭಾಜೀವನ ಮತ್ತು ಆರಾಧನೆ 11:2—14:40
ಯೇಸುವಿನ ಹಾಗೂ ಕ್ರೈಸ್ತಭಕ್ತರ ಪುನರುತ್ಥಾನ 15:1-58
ಜುದೇಯದ ಕ್ರೈಸ್ತರಿಗೆ ಕಾಣಿಕೆ 16:1-4
ವೈಯಕ್ತಿಕ ಶುಭಾಶಯಗಳೊಂದಿಗೆ ಸಮಾಪ್ತಿ 16:5-24