Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಅರಸುಗಳು INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಸಮುವೇಲನ ಎರಡು ಗ್ರಂಥಗಳಲ್ಲಿ ಪ್ರಾರಂಭವಾದ ಇಸ್ರಯೇಲರ ಅರಸೊತ್ತಿಗೆಯ ಚರಿತ್ರೆ “ಅರಸುಗಳು” ಎಂಬ ಈ ಪ್ರಥಮ ಭಾಗದಲ್ಲಿ ಮುಂದುವರಿಯುತ್ತದೆ. ಇದರಲ್ಲಿಯ ಚಾರಿತ್ರಿಕ ವಿವರಗಳನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.
1: ಸೊಲೊಮೋನನು ಇಸ್ರಯೇಲಿಗೂ ಜುದೇಯಕ್ಕೂ ಅರಸನಾದದ್ದು ಮತ್ತು ಅವನ ತಂದೆ ದಾವೀದನ ಮರಣ.
2: ಸೊಲೊಮೋನನ ಆಳ್ವಿಕೆ ಹಾಗು ಸಾಧನೆಗಳು. ಅವನು ಜೆರುಸಲೇಮಿನಲ್ಲಿ ಕಟ್ಟಿಸಿದ ಮಹಾದೇವಾಲಯ ಮತ್ತು ಇತರ ಮಹತ್ಕಾರ್ಯಗಳು.
3: ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ಸೀಳಿಹೋದ ಅವನ ಸಾಮ್ರಾಜ್ಯ ಮತ್ತು ಕ್ರಿ.ಪೂ. 9ನೇ ಶತಮಾನದ ಮಧ್ಯಕಾಲದವರೆಗೆ ಈ ರಾಜ್ಯಗಳನ್ನಾಳಿದ ಇತರ ಅರಸರು.
ಪ್ರತಿಯೊಬ್ಬ ಅರಸನ ಹಾಗು ಆತನ ಪ್ರಜೆಗಳ ಸೋಲು ಗೆಲುವುಗಳು, ಅಳಿವು-ಉಳಿವುಗಳು, ದೇವರಲ್ಲಿ ಅವರಿಗಿದ್ದ ಶ್ರದ್ಧೆ ಹಾಗು ದೇವರ ಆಜ್ಞೆಗಳನ್ನು ಅನುಸರಿಸುವುದರಲ್ಲಿ ಅವರು ವಹಿಸುವ ಶ್ರಮೆ ಇವುಗಳನ್ನು ಅವಲಂಬಿಸಿರುತ್ತವೆ. ಅವಿಧೇಯತೆ ಹಾಗೂ ವಿಗ್ರಹಾರಾಧನೆಯು ನಾಶನಕ್ಕೆ ನಡಿಸುವ ಹಾದಿಗಳು. ಈ ಪರಿಪಾಟವನ್ನು ಮನದಟ್ಟಾಗಿಸುತ್ತದೆ “ಅರಸುಗಳು” ಎಂಬ ಬೈಬಲ್ಲಿನ ಈ ಭಾಗ. ಈ ದೃಷ್ಟಿಯಿಂದ ನೋಡಿದ್ದಾದರೆ, ಇಸ್ರಯೇಲರ ಉತ್ತರದ ಅರಸರು ದೈವಿಕ ಪರೀಕ್ಷೆಯಲ್ಲಿ ಸೋತುಹೋಗುತ್ತಾರೆ. ದಕ್ಷಿಣದ ಅರಸರ ಫಲಿತಾಂಶ ಸಮ್ಮಿಶ್ರವಾದುದು.
ಅರಸುಗಳ ಈ ಎರಡು ಭಾಗಗಳಲ್ಲೂ ಪ್ರವಾದಿಗಳ ಪಾತ್ರ ಪ್ರಮುಖವಾದದ್ದು. ಸರ್ವೇಶ್ವರನ ಪರವಾಗಿ ಧೈರ್ಯದಿಂದ ಮಾತನಾಡಿದ ಈ ಮಹಾನ್ ವ್ಯಕ್ತಿಗಳು, ದೇವರಿಗೆ ಅವಿಧೇಯರಾಗಿ ನಡೆಯುವುದರಿಂದ ಹಾಗು ಮೂರ್ತಿಪೂಜೆಗೆ ಮಾರುಹೋಗುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ರಾಜರನ್ನೂ ಪ್ರಜೆಗಳನ್ನೂ ಎಚ್ಚರಿಸುತ್ತಾರೆ. ಪ್ರವಾದಿ ಎಲೀಯನಿಗೂ ಬಾಳ್ ದೇವತೆಯ ಪ್ರವಾದಿಗಳಿಗೂ ನಡೆದ ವಾಗ್ವಾದ ಹಾಗು ಸವಾಲು ಸ್ವಾರಸ್ಯವಾದುದು. ಇದನ್ನು 18ನೇ ಅಧ್ಯಾಯದಲ್ಲಿ ಕಾಣಬಹುದು.
ಪರಿವಿಡಿ
ದಾವೀದನ ಆಳ್ವಿಕೆಯ ಅಂತ್ಯ 1:1—2:12
ಸೊಲೊಮೋನನ ಪಟ್ಟಾಭಿಷೇಕ 2:13—2:46
ಸೊಲೊಮೋನನ ರಾಜ್ಯಭಾರ 3:1—11:43
ಅ). ಆರಂಭದ ವರ್ಷಗಳು 3:1—4:34
ಆ). ಮಹಾದೇವಾಲಯದ ನಿರ್ಮಾಣ 5:1—8:66
ಇ). ಅನಂತರದ ವರ್ಷಗಳು 9:1—11:43
ಸೀಳಿಹೋದ ಸಾಮ್ರಾಜ್ಯ 12:1—22:53
ಅ). ಉತ್ತರದ ಗೋತ್ರಗಳಿಂದ ದಂಗೆ 12:1—14:20
ಆ). ಜುದೇಯದ ಹಾಗು ಇಸ್ರಯೇಲಿನ ರಾಜರುಗಳು 14:21—16:34
ಇ). ಪ್ರವಾದಿ ಎಲೀಯ 17:1—19:21
ಈ). ಇಸ್ರಯೇಲಿನ ರಾಜ ಅಹಾಬ 20:1—22:40
ಉ). ಜುದೇಯದ ಯೆಹೋಷಾಫಾಟ ಮತ್ತು ಇಸ್ರಯೇಲಿನ ಅಹಜ್ಯ 22:41-53

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು