Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಇಸ್ರಾಯೇಲ್ಯರು ಸೋಲಿಸಿದ ಅರಸರ ಪಟ್ಟಿ

1 ಇಸ್ರಾಯೇಲ್ಯರು ಯೊರ್ದನ್ ನದಿಯ ಪೂರ್ವ ದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನೂ ಕಣಿವೆ ಪ್ರದೇಶದ ಪೂರ್ವಭಾಗವನ್ನೂ ಸ್ವಾಧೀನ ಮಾಡಿಕೊಂಡು ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು.

2 ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾಗಿದ್ದವನು ಸೀಹೋನ್. ಇವನು ಅರ್ನೋನ್ ಕಣಿವೆಯ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ಕಣಿವೆಯಲ್ಲಿಯೇ ಇದ್ದ ಪಟ್ಟಣಗಳು ಇವುಗಳು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ಹೊಳೆಯವರೆಗಿರುವ ಗಿಲ್ಯಾದಿನ ಅರ್ಧಪ್ರಾಂತ್ಯವು

3 ಹಾಗೂ ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೋತ್ ಸಮುದ್ರದಿಂದ ಲವಣಸಮುದ್ರವೆನಿಸಿಕೊಳ್ಳುವ ಅರಾಬ್ ಸಮುದ್ರದ ಹತ್ತಿರವಿರುವ ಬೇತಯೆಷಿಮೋತಿನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ಕಣಿವೆ ಪ್ರದೇಶವು ಇವೇ ಅವನ ರಾಜ್ಯ:

4 ಅಷ್ಟರೋತ್ ಹಾಗೂ ಎದ್ರೈ ಎಂಬ ಊರುಗಳಲ್ಲಿ ವಾಸವಾಗಿದ್ದ ರೆಫಾಯರ ವಂಶಸ್ಥರು ಬಾಷಾನಿನ ಅರಸನೂ ಆದ ಓಗನು ಸಂಹರಿಸಲ್ಪಟ್ಟವರಲ್ಲಿ ಎರಡನೆಯವನು.

5 ಇವನ ರಾಜ್ಯ ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆವರೆಗೆ ಇದ್ದ ಬಾಷಾನಿನ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗೆ ಇದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದ ವರೆಗಿದ್ದಿತ್ತು.

6 ಯೆಹೋವನ ಸೇವಕನಾದ ಮೋಶೆಯೂ, ಇಸ್ರಾಯೇಲ್ಯರ ಸಹಿತವಾಗಿ ಆ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವತ್ತಾಗಿ ಕೊಟ್ಟನು.

7 ಯೆಹೋಶುವನು ಇಸ್ರಾಯೇಲರ ಸಹಿತವಾಗಿ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಬೆಟ್ಟದ ಮೇಲಿನ ಪ್ರದೇಶಗಳು,

8 ಇಳುಕಲ್ಲಿನ ಪ್ರದೇಶಗಳು, ಕಣಿವೆ ಪ್ರದೇಶಗಳು, ಬೆಟ್ಟಗಳ ಬುಡದಲ್ಲಿರುವ ಸೀಮೆಗಳು, ಅರಣ್ಯದ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ದೇಶಗಳನ್ನು ಇಸ್ರಾಯೇಲರ ಕುಲದವರಿಗೆ ಶಾಶ್ವತ ಆಸ್ತಿಯಾಗಿ ಕೊಟ್ಟನು. ಆ ಅರಸರ ಪಟ್ಟಿಯು ಹೇಗೆಂದರೆ,

9 ಯೆರಿಕೋವಿನ ಅರಸನು - 1 ಬೇತೇಲ್ ಬಳಿಯಲ್ಲಿರುವ ಆಯಿ ಎಂಬ ಊರಿನ ಅರಸನು - 1

10 ಯೆರೂಸಲೇಮಿನ ಅರಸನು - 1 ಹೆಬ್ರೋನಿನ ಅರಸನು - 1

11 ಯರ್ಮೂತಿನ ಅರಸನು - 1 ಲಾಕೀಷಿನ ಅರಸನು - 1

12 ಎಗ್ಲೋನಿನ ಅರಸನು - 1 ಗೆಜೆರಿನ ಅರಸನು - 1

13 ದೆಬೀರಿನ ಅರಸನು - 1 ಗೆದೆರಿನ ಅರಸನು - 1

14 ಹೊರ್ಮದ ಅರಸನು - 1 ಅರಾದಿನ ಅರಸನು - 1

15 ಲಿಬ್ನದ ಅರಸನು - 1 ಅದುಲ್ಲಾಮಿನ ಅರಸನು - 1

16 ಮಕ್ಕೇದದ ಅರಸನು - 1 ಬೇತೇಲಿನ ಅರಸನು - 1

17 ತಪ್ಪೂಹದ ಅರಸನು - 1 ಹೇಫೆರಿನ ಅರಸನು - 1

18 ಅಫೇಕದ ಅರಸನು - 1 ಲಷ್ಷಾರೋನಿನ ಅರಸನು - 1

19 ಮಾದೋನಿನ ಅರಸನು - 1 ಹಾಚೋರಿನ ಅರಸನು - 1

20 ಶಿಮ್ರೋನ್ಮೆರೋನಿನ ಅರಸನು - 1 ಅಕ್ಷಾಫಿನ ಅರಸನು - 1

21 ತಾನಕದ ಅರಸನು - 1 ಮೆಗಿದ್ದೋವಿನ ಅರಸನು - 1

22 ಕೆದೆಷಿನ ಅರಸನು - 1 ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು - 1

23 ದೋರ್ ಪ್ರಾಂತ್ಯದ ದೋರಿನ ಅರಸನು - 1 ಗಿಲ್ಗಾಲಿನ ಅರಸನು - 1

24 ತಿರ್ಚದ ಅರಸನು - 1 ಒಟ್ಟು 31 ಮಂದಿ ಅರಸರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು