ಕೀರ್ತನೆಗಳು 125 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೋವನೇ ವಿಶ್ವಾಸಿಗಳ ಆಶ್ರಯ ಯಾತ್ರಾಗೀತೆ. 1 ಯೆಹೋವನಲ್ಲಿ ಭರವಸೆ ಇಡುವವರು, ಚೀಯೋನ್ ಪರ್ವತದ ಹಾಗೆ ಇದ್ದಾರೆ; ಅದು ಕದಲುವುದಿಲ್ಲ, ಸದಾ ಸ್ಥಿರವಾಗಿರುತ್ತದೆ. 2 ಪರ್ವತಗಳು ಯೆರೂಸಲೇಮಿನ ಸುತ್ತಲೂ ಹೇಗೋ ಹಾಗೆಯೇ, ಯೆಹೋವನು ಈಗಿನಿಂದ ಸದಾಕಾಲವೂ ತನ್ನ ಜನರ ಸುತ್ತಲೂ ಇರುವನು. 3 ದುಷ್ಟರ ದಂಡಾಧಿಕಾರವು ನೀತಿವಂತರ ಸ್ವತ್ತಿನಲ್ಲಿ ಉಳಿಯುವುದೇ ಇಲ್ಲ; ಉಳಿದರೆ ನೀತಿವಂತರೂ ಅಕ್ರಮಕ್ಕೆ ಕೈ ಹಾಕಬಹುದು. 4 ಯೆಹೋವನೇ, ಒಳ್ಳೆಯವರೂ, ಯಥಾರ್ಥಚಿತ್ತರೂ, ಆಗಿರುವವರಿಗೆ ಉಪಕಾರಮಾಡು. 5 ಯೆಹೋವನು ಡೊಂಕುದಾರಿ ಹಿಡಿದವರನ್ನು, ಪಾತಕಿಗಳು ಹೋಗುವ ಸ್ಥಳಕ್ಕೆ ನಡೆಸುವನು. ಇಸ್ರಾಯೇಲರಿಗೆ ಶುಭವುಂಟಾಗಲಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.