1 ಪೂರ್ವಕಾಲ ವೃತ್ತಾಂತ 8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಬೆನ್ಯಾಮೀನ್ ಕುಲ 1 ಬೆನ್ಯಾಮೀನನ ಮಕ್ಕಳು: ಬೆಳನು ಚೊಚ್ಚಲ ಮಗ. ಅಷ್ಬೇಲ್ ಎರಡನೆಯವನು, ಅಹ್ರಹ ಮೂರನೆಯವನು, 2 ನೋಹ ನಾಲ್ಕನೆಯವನು, ರಾಫ ಐದನೆಯವನು. 3 ಬೆಳನ ಮಕ್ಕಳು: ಅದ್ದಾರ್, ಗೇರ, ಅಬೀಹೂದ್, 4 ಅಬೀಷೂವ, ನಾಮಾನ್, ಅಹೋಹ, 5 ಗೇರ, ಶೆಪೂಫಾನ್ ಮತ್ತು ಹೂರಾಮ್ ಎಂಬವರು. 6 ಏಹೂದನ ಸಂತಾನದವರು ಗೆಬ ಊರಿನ ಎಲ್ಲಾ ಕುಟುಂಬಗಳಲ್ಲಿ ಪ್ರಮುಖರು. 7 ನಾಮಾನ್, ಅಹೀಯ ಮತ್ತು ಗೇರ ಇವರು ಮಾನಹತಿಗೆ ಒಯ್ಯಲ್ಪಟ್ಟರು. ಏಹೂದನು ಉಚ್ಚ ಮತ್ತು ಅಹೀಹುದ್ ಇವರನ್ನು ಪಡೆದನು. 8 ಶಹರಯಿಮನು ತನ್ನ ಹೆಂಡತಿಯರಾದ ಹೂಷೀಮ್ ಮತ್ತು ಬಾರ ಎಂಬವರನ್ನು ತ್ಯಜಿಸಿ, 9 ಮತ್ತೊಬ್ಬ ಹೆಂಡತಿಯಾದ ಹೋದೆಷಳಿಂದ ಮೋವಾಬ್ ದೇಶದಲ್ಲಿ ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ ಮತ್ತು ಮಿರ್ಮ ಇವರನ್ನು ಪಡೆದನು. 10 ಶಹರಯಿಮನ ಮಕ್ಕಳಾದ ಇವರು ಗೋತ್ರ ಪ್ರಧಾನರಾಗಿದ್ದರು. 11 ಇದಲ್ಲದೆ ಅವನು ಹುಷೀಮಳಿಂದ ಅಬೀಟೂಬ್, ಎಲ್ಪಾಲ ಇವರನ್ನು ಪಡೆದನು. 12 ಎಲ್ಪಾಲನ ಮಕ್ಕಳು ಏಬರ್, ಮಿಷ್ಷಾಮ್ ಮತ್ತು ಶೆಮೆದ್. ಇವರೂ ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು. 13 ಅಯ್ಯಾಲೋನ್ ಊರಿನ ಕುಟುಂಬಗಳಲ್ಲಿ ಪ್ರಮುಖರೂ, ಗತ್ ಊರಿನವರನ್ನು ಓಡಿಸಿ ಬಿಟ್ಟವರು ಬೆರೀಯ ಮತ್ತು ಶಮ. 14 ಅಹಿಯೋ, ಶಾಷಕ್, ಯೆರೇಮೋತ್, 15 ಜೆಬದ್ಯ, ಅರಾದ್, ಎದೆರ್, 16 ಮಿಕಾಯೇಲ್, ಇಷ್ಪ ಮತ್ತು ಯೋಹ ಬೆರೀಯನ ಮಕ್ಕಳು. 17 ಎಲ್ಪಾಲನ ಮಕ್ಕಳು ಜೆಬದ್ಯ, ಮೆಷುಲ್ಲಾಮ್, ಹೆಬೆರ್, ಹಿಜ್ಕೀ, 18 ಇಷ್ಮೆರೈ, ಇಜ್ಲೀಯ ಮತ್ತು ಯೋಬಾಬ್. 19 ಯಾಕೀಮ್, ಜಿಕ್ರೀ, ಜಬ್ದೀ, 20 ಎಲೀಗೇನೈ, ಚಿಲ್ಲೆತೈ, ಎಲೀಯೇಲ್, 21 ಆದಾಯ, ಬೆರಾಯ ಮತ್ತು ಶಿಮ್ರಾತ್ ಇವರು ಶಮ್ಮೀಯ ಮಕ್ಕಳು. 22 ಇಷ್ಪಾನ್, ಏಬೆರ್, ಎಲೀಯೇಲ್, 23-24 ಅಬ್ದೋನ್, ಜಿಕ್ರೀ, ಹಾನಾನ್, ಹನನ್ಯ, ಏಲಾಮ್, ಅನೆತೋತೀಯ, 25 ಇಫ್ದೆಯಾಹ ಮತ್ತು ಪೆನೂವೇಲನು ಇವರು ಶಾಷಕನ ಮಕ್ಕಳು. 26 ಶಂಷೆರೈ, ಶೆಹರ್ಯ, ಅತಲ್ಯ, 27 ಯಾರೆಷ್ಯ, ಏಲೀಯ ಮತ್ತು ಜಿಕ್ರೀ ಇವರು ಯೆರೋಹಾಮನ ಮಕ್ಕಳು. 28 ಇವರು ವಂಶಾವಳಿಯ ಪ್ರಕಾರ ಗೋತ್ರಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು. 29 ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲಪುರುಷನಾದ ಯೆಗೂವೇಲ್ ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ. 30 ಚೊಚ್ಚಲ ಮಗನು ಅಬ್ದೋನನು, ತರುವಾಯ ಹುಟ್ಟಿದವರು, ಚೂರ್, ಕೀಷ್, ಬಾಳ್, ನಾದಾಬ್, 31 ಗೆದೋರ್, ಅಹ್ಯೋ ಮತ್ತು ಜೆಕೆರ್ ಇವರು. 32 ಮಿಕ್ಲೋತನು ಶಿಮಾಹನನ್ನು ಪಡೆದನು. ಇವರು ತಮ್ಮ ಗೋತ್ರದ ಕುಟುಂಬದವರೊಂದಿಗೆ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು. ಸೌಲನ ಕುಟುಂಬ 33 ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳ ಇವರನ್ನು ಪಡೆದನು. 34 ಯೋನಾತಾನನು ಮೆರೀಬ್ಬಾಳನನ್ನು ಪಡೆದನು; ಮೆರೀಬ್ಬಾಳನು ಮೀಕನನ್ನು ಪಡೆದನು. 35 ಮೀಕನ ಮಕ್ಕಳು: ಪೀತೋನ್, ಮೆಲೆಕ್, ತರೇಯ, ಆಹಾಜ್ ಇವರೇ. 36 ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾಹನು ಆಲೆಮೆತ್, ಅಜ್ಮಾವೆತ್, ಜಿಮ್ರೀ ಇವರನ್ನು ಪಡೆದನು. 37 ಜಿಮ್ರೀಯು ಮೋಚನನ್ನು ಪಡೆದನು. ಮೋಚನು ಬಿನ್ನನನ್ನು ಪಡೆದನು. ಇವನ ಮಗ ರಾಫ. ಇವನ ಮಗನು ಎಲ್ಲಾಸ. ಇವನ ಮಗನು ಅಚೇಲ. 38 ಅಚೇಲನಿಗೆ ಆರು ಮಂದಿ ಮಕ್ಕಳಿದ್ದರು. ಅವರ ಹೆಸರುಗಳು ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್. 39 ಆಚೇಲನ ತಮ್ಮನಾದ ಏಷಕನ ಮಕ್ಕಳು: ಚೊಚ್ಚಲು ಮಗ ಊಲಾಮ್, ಎರಡನೆಯವನು ಯೆಯೂಷ್, ಮೂರನೆಯವನಾದ ಎಲೀಫೆಲೆಟ್. 40 ಊಲಾಮನ ಮಕ್ಕಳು ಬಿಲ್ಲನ್ನು ಉಪಯೋಗಿಸುವುದರಲ್ಲಿ ಗಟ್ಟಿಗರಾದ ರಣವೀರರು. ಅವರು ಅನೇಕ ಮಂದಿ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಪಡೆದರು. ಒಟ್ಟು ನೂರ ಐವತ್ತು ಜನರು ಅವರ ಕುಟುಂಬದಲ್ಲಿದ್ದರು. ಎಲ್ಲರೂ ಬೆನ್ಯಾಮೀನ್ಯರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.