Biblia Todo Logo
Bìoball air-loidhne

- Sanasan -




ಪ್ರಕಾಶಿತ್ 2:9 - ದೇವ್ನಿ ಖ್ಹಾಚಿ ವಚನ್

9 ಮೇ ತಾರು ಖ್ಹತಾಪ್ಣಿ ಅಜು಼ ಗರೀಬ್‍ರ‍್ಹವಾನುಬಿ ಮಾಲುಮ್ ಕರಿರಾಖ್ಯೊಸ್, ಕತೋಬಿ ತೂ ಶೌಕಾರಸ್ ಹುಯಿರ‍್ಹೋಸ್. ಅತ್ರೇಸ್‍ಕಾಹೆತೆ ಯೆಹೂದ್ಯರ್ ಕರಿ ಬೋಲೈಲ್ಯವಾಳು ಇವ್ಣೆಸ್ ತಾರಿ ಬಾರೇಮ ದೂಷಣೆ ಬೋಲಾನು ಮಾಲುಮ್. ಇವ್ಣೆ ಯೆಹೂದ್ಯರ್ ಕಾಹೆ, ಶೈತಾನ್ನ ಸಬೆನಾ ಮಂದಿರ್‌ವಾಳು ಹುಯಿರ‍್ಹೂಸ್

Faic an caibideil Dèan lethbhreac




ಪ್ರಕಾಶಿತ್ 2:9
29 Iomraidhean Croise  

ತದೆ ಯೇಸುನೆ, “ಇನ, ಶೈತಾನ್‍ ತೂ ಹಟಿಜಾ಼! ‘ತಾರೊ ದೇವ್ ಹುಯಿರ‍್ಹೋತೆ ಪ್ರಭುನ ಎಕ್ಕಸ್ ಜ಼ಣಾನ ಆರಾದನೆ ಕರ‍್ನು ಅಜು಼ ಸೇವೆ ಕರ‍್ನು ಕರಿ ವಚನ್‌ಮ ಲೀಖೈರ‍್ಹುಸ್” ಕರಿ ಬೋಲ್ಯೊ.


ಇನಖ್ಹಾಜೆ ಯೋಸ್‌, ಧನ್‌-ದೌಲತ್‌ನ ಜ಼ಮಕರಿಲ್ಯವಾಳಾನಿ ಹಾಲ್‌ಬಿ ಅಮ್ಮಸ್, ಕತೋಬಿ ದೇವ್ನ ಡೋಳಾಮ ಇವ್ಣೆ ಶೌಕಾರ್ ಕಾಹೆ.


ಅಜು಼ ಇನಿಬಾರೇಮ ಕೈಏಕ್ ದೂಷಣೆ ಬೋಲಿನ್, ಖ್ಹರಮ್‌ ಕಾಡ್ಯು.


ಪ್ರಭುನು ಆತ್ಮ ಮಾರಪರ್ ಛಾ಼, ಗರೀಬ್‌ನ ಸುವಾರ್ತೆ ಬೋಲಾನಟೇಕೆ ದೇವ್ನೆ ಮನ ಅಬಿಷೇಕ್ ಕರಿರಾಖ್ಯೋಸ್, ಧರೈಗೂತೆ ಅದ್ಮಿನ, “ತುಮೆ ಛು಼ಟಿಗಯ ಕರಿ ಅಜು಼ ಕಾಣಾವ್ನ, ತುಮುನ ಡೋಳ ದೆಖಾವ್‌ಶೆ’ ಕರಿ ಬೋಲಾನಟೇಕೆ, ಅಜು಼ ಖ್ಹತಾವ್ಣಿಮ ಛಾ಼ತೆ ಇವ್ಣುನ ಛೋ಼ಡಾವನಟೇಕೆ,


ಯೇಸುನೆ ಇನ ಶಿಷ್ಯರ್‌ ಭಣಿ ದೇಖಿನ್ ಬೋಲ್ಯೋಕಿ, “ಗರೀಬ್ ಹುಯಿರ‍್ಹವಾಳ ತುಮೆ ಖ್ಹುಶಾಲಿವಾಳು ಹುಯಿರ‍್ಹುಸ್, ದೇವ್‌ನು ರಾಜ್ಯ ತುಮಾರುಸ್!


ತುಮೆ ಮಾರಾಮ ರ‍್ಹೀನ್, ತುಮೂನ ಶಾಂತಿ ಮಳ್‌ಣು ಕರಿ ಆ ಖ್ಹಾರು ತುಮೂನ ಬೋಲಿರಾಖ್ಯೊಸ್. ಜಗತ್‌ಮ ತುಮೂನ ಖ್ಹತಾಪ್ಣಿ ಛಾ಼, ಕತೋಬಿ ಘಟ್ ರ‍್ಹವೊ,ಶನಕತೊ ಮೇ ಜಗತ್ನ ಜೂತಿರಾಖ್ಯೋಸ್‌” ಕರಿಬೋಲ್ಯೊ.


ಹಿಜ಼್ಜಾನ ಶಿಷ್ಯರ‍್ನ ಭಾಲಿದೀನ್ ವಿಶ್ವಾಸ್ಮ ಘಟ್ ಭೀರಾವನ ಹಿಮ್ಮತ್ ದಿದಾ. “ಅಪ್ಣಿ ದೇವ್ನಿ ರಾಜ್ಯನ ಘಣು ಮುಶ್ಕಿಲ್‍ನ ಮಹಿಕರಿ ಜಾ಼ವ್ಣುಪಡಸ್” ಕರಿ ಬೋಲಿಲಿದ.


ಅಖ್ಖಾ ಸಬೇನು ಮಂದಿರ್‌ಮಾಬಿ ಮೇ ಕೈಯೇಕ್‌ಹಲ್ಲ ಇನ ಖ್ಹತಾಪ್ಣಿ ದೀನ್ ಇನೇಥಿ ದೇವ್ನ ದೂಷಣೆನಿ ವಾತೆ ಬೋಲಾವಾನಿತರ ಕೋಶಿಶ್‌ಕರ‍್ಯೊ. ಯೋ ವಿಶ್ವಾಸಿಖ್ಹಾರಾಪರ್ ಇರಾದೊ ಕರ್ತೊಹುಯಿನ್ ಇವ್ಣುನ ಢೂಂಡಿನ್ ಲತಾಡ ದ್ಯವಾನಖ್ಹಾಜೆ ಭಾರ್‌ ದೇಖ್ಹ್‌ನ ಖ್ಹಯೇರ್‌ಮಾಬಿ ಗಯೋಥೊ.


ಕ್ರಿಸ್ತವಾಳು ಭರೋಖ್ಹಾನಿ ಮಹಾ ಇನಾಮ್ನ ಖ್ಹಯಾಲ್ ಕರೀನ್ ಖುಷಿಥಿರ‍್ಹವಾಳಾಬಿ, ಖ್ಹತಾಪ್ಣಿಮ ಖ್ಹಮಾಳಿಲ್ಯಾವಾಳಾಬಿ, ಅಖ್ಖಿ ವೇಳ್ಮ ಘಟ್‍ದಿಲ್‌ಥಿ ಪ್ರಾರ್ಥನೆ ಕರ್ತರ‍್ಹೇವೊ.


ಕತೋಬಿ ತೂ ಯೆಹೂದ್ಯಕರಿ ಬೋಲೈಲ್ಯಾವಾಳ ಧರ್ಮಶಾಸ್ತ್ರನಸ್ ಆಧಾರ್ ಕರಿರಾಖ್ಯೊಸ್, ತೂ ದೇವ್ನಿಬಾರೇಮ ಬಡೈಮಾರಿಲೇಸ್.


ಎತ್ರೇಸ್ ಖಲಿಕಾಹೆ, ಅಪ್ಣುನ ಆವಸ್ತೆ ಖ್ಹತಾಪ್ಣಿಮಾಬಿ ಖುಷಿಥಿ ಛಿಯೆ. ಕತೋಬಿ ಖ್ಹತಾಪ್ಣಿ ಖ್ಹಮಾಳಿ ರ‍್ಹವಾನ ಶಿಕಾಡಸ್‌ಕರಿ ಅಪ್ಣುನ ಮಾಲುಮ್‌ ಛಾ಼.


ಅಮ್ ರ‍್ಹವಾಪರ್ ಕ್ರಿಸ್ತನಿ ಪ್ಯಾರ್‌ಥಿ ಅಪ್ಣುನ ಅಲಕ್ ಕರವಾಳು ಕೋಣ್? ವದೇಖ್ಹ್‌ಕಿ, ವಾಖ್ಯೋಕಿ, ಖ್ಹತಾಪ್ಣಿಕಿ, ಭುಕ್ಯೋಕಿ, ಪೆರ‍್ಹಾನ ಕೊಯ್ನಿತೇಕಿ, ನಘಾಡೋಮ್‌ಕಿ, ನತರ್ ಮರಣ್‌ಕಿ?


ಹೈರೂತೆ ದೇವ್ನಿ ವಾತೆ ಗಲತ್‌ ಹುಯ್ಗುಕರಿ ಅಪ್ಣೆ ನಾ ಲಾಜ಼್‌ಣು. ಶನಕತೊ ಇಸ್ರಾಯೇಲ್‌ನು ಖ್ಹಾರುಸ್ ಅದ್ಮಿಬಿ ಇಸ್ರಾಯೇಲ್ವಾಳು ಕಾಹೆ.


ದುಖ್‌ಲ್ಯವಾಳ ರ‍್ಹಿಯಾತೋಬಿ ಸೇವೆಮ ಕದೇಬಿ ಹಾಶಿಖ್ಹುಶಾಲಿಥಿ ರ‍್ಹವಾಳ ಹುಯಿರ‍್ಹಾಸ್, ಗರೀಬ್‍ರ‍್ಹಿಯತೋಬಿ ಕೈಏಕ್ ಜ಼ಣನ ವಿಶ್ವಾಸ್‌ಮ ಧನ್‍ದೌಲತ್‌ವಾಳ ಕರೀನ್ ಬಣೈರಾಖ್ಯಾಸ್; ಶಾತ್‍ಬಿಕೊಂತೆ ರ‍್ಹಿಯತೋಬಿ ಅಖ್ಖಾನ ಲೀರಾಖವಾಳ ಹುಯಿರ‍್ಹಾಸ್.


ಯೋ ಸಬೆವಾಳು ಜಾ಼ಖ್ಹತ್ ಲತಾಡ ಖ್ಹಮಾಳವಾಳು ರ‍್ಹಯುತೋಬಿ ಬಿಜು಼ ಘಣು ಗರೀಬ್ ರ‍್ಹಯುತೋಬಿ ಘಣು ಖ್ಹುಶಿಥಿ ಭರೈರ‍್ಹೀನ್ ಛುಟಾದಿಲ್‍ಥಿ ದಿದು.


ಅಪ್ಣೊ ಪ್ರಭು ಹುಯಿರ‍್ಹೋತೆ ಯೇಸು ಕ್ರಿಸ್ತನಿ ವಾರ್‌ಖ್ಹಾನ ತುಮೆ ಮಾಲುಮ್ ಕರಿರಾಖ್ಯಸ್. ಕಿಮ್‌ಕತೊ ಯೋ ಧನ್‍ ದೌಲತ್‌ವಾಳೊ ರ‍್ಹಯೊತೋಬಿ ಯೋ ಗರೀಬ್ ಹುವಾಥೀಸ್ ತುಮೆ ಧನ್‌ ದೌಲತ್‌ವಾಳ ಬಣನಿತರ ಯೋ ತುಮಾರಖ್ಹಾಜೆ ಗರೀಬ್‍ಹುಯೊ.


ಶನಕತೊ ತುಮಾರಕನ ಥಾತೆ ತದೆ, ಖ್ಹತಾಪ್ಣಿನ ಖ್ಹಮಾಳ್‌ನುಸ್‌ಪಡ್ಯು ಕರಿ ಪಹಿಲೇಸ್ ಬೋಲ್ಯಾಥಾನಿ. ಇಮ್ಮಸ್‌ಹುಯು ಕರಿ ತುಮೂನ ಅಛ್ಛಿನಿತರ ಮಾಲುಮ್‌ ಪಡಿರ‍್ಹುಸ್.


ಅಗಾಡಿ ಮೇ ಕ್ರಿಸ್ತನಿ ವಿರೋದ್ ವಾತೆ ಬೋಲಿನ್, ಇನ ಖ್ಹತೈರಾಖ್ಯೋಸ್ ಅಜು಼ ಇನಿ ಖ್ಹರಮ್‌ಬಿ ಕಾಡಿರಾಖ್ಯೊಸ್. ಶನಕತೊ, ಮೇ ತದೆ ಅವಿಶ್ವಾಸ್‌ಮ ಥೊ, ಇನಖ್ಹಾಜೆ ಮೇ ಶಾತ್‌ ಕರುಕರೂಸ್ ಕರಿ ಮನ ಮಾಲುಮ್ ಕೋ ಥೂನಿ. ತೋಬಿ ದೇವ್ನೆ ಮಾರಪರ್ ಗೋರ್‌ ಕರಿರಾಖ್ಯೋಸ್.


ಇವ್ಣುನ ಹುಕುಮ್ ದೇಕಿ; ಇವ್ಣೆ ಅಛ್ಛು಼ ಕಾಮ್ ಕರ‍್ನು. ಅಜು಼ ಅಛ್ಛು಼ ಕಾಮ್ ಕರಾಮ ಇವ್ಣೆ ಶೌಕಾರಿ ಹುಯಿರ‍್ಹೇಣು, ಧರ್ಮಿ, ಅಜು಼ ಇವ್ಣಾಕನ ಛಾ಼ತೆ ಜಿನಖ್ಹ್‌ನ ವಾಟಪಾಡಿಲ್ಯವಾದೆ.


ಯೋಹಾನಕರಿ ಮೆ ಕ್ರಿಸ್ತಮ ತುಮಾರೊ ಭೈ ಹುಯಿರೋಸ್. ಅಪ್ಣೆ ಹಿಡಿಕ್ ಯೇಸುನಖ್ಹಾಜೆ ಖ್ಹತಾಪ್ಣಿಮಾಬಿ,ರಾಜ್ಯಮಾಬಿ, ಖ್ಹಮಾಳಮಾಬಿ ವಾಟೊಲೀರಾಖ್ಯಸ್, ಮೆ ದೇವ್ನಿ ಸಮಾಚಾರ್‌ನಾಬಿ ಯೇಸುನಿ ಬಾರೇಮ ಸಾಕ್ಷಿ ದ್ಯವಾನಖ್ಹಾಜೆ ಪತ್ಮೋಸ್ ಟಾಪಾಮ ಥೊ.


ತೂ ಜಿವ್ಣುಕರುಕರಾತೆ ಝ಼ಗೊ ಮಾಲುಮ್ ಕರಿರಾಖ್ಯೊಸ್, ಯೋ ಶೈತಾನ್ನು ಸಿಂಹಾಸನ್ನು ಝ಼ಗೊ ಹುಯಿರ‍್ಹುಸ್. ತೂ ಮಾರ ನಾಮ್ನ ಘಟ್‍ಥಿ ಧರಿರಾಖ್ಯೊಸ್. ಶೈತಾನ್ನು ಘರ್ ಹುಯಿರ‍್ಹೂತೆ ತಾರ ಖ್ಹಯೇರ್‌ಮ ಮನ ವಿಶ್ವಾಸ್‌ವಾಳೊ ಸಾಕ್ಷಿ ಹುಯಿರೊಥೋತೆ ಅಂತಿಪ ಮರೈಜಾ಼ವನಿ ವಖ್ಹ್‌ತೆಬಿ ಮಾರಾಮ ಮಿಛಾ಼ಣ್ಯೊಥೊತೆ ವಿಶ್ವಾಸ್ ಧಖೆಲ್ಯೊಕೊಯ್ನಿ.


ತಾರು ಕಾಮ್‌ಖ್ಹಾರು ಅಜು಼ ಮಿನ್ಹತ್‌ಬಿ ಖ್ಹಮಾಳನುಬಿ ಮೇ ಮಾಲುಮ್ ಕರಿರಾಖ್ಯೋಸ್. ತೂ ಖರಾಬ್ ಅದ್ಮಿನ ಖ್ಹಮಾಳಿಷ್ ಕೊಯ್ನಿ. ಅಪೊಸ್ತಲರ್ ಕಾಹೆತೆಬಿ ಇವ್ಣುನ ಅಪೊಸ್ತಲರ್‌ಕರಿ ಬೋಲೈಲ್ಯವಾಳು ತೂ ಪರ್ಖಿನ್ ಇವ್ಣುನ ಝೂ಼ಟುಕರಿ ಮಾಲುಮ್‌ಕರಿಲಿದೊ.


ಕತೋಬಿ ಥುವತೈರಾಮ ರ‍್ಹವಾಳ, ಬಿಜ಼ಖ್ಹಾರನ ಮೇ ಬೋಲಾನು ಶಾತ್‍ಕತೊ, ತುಮೆ ಇನು ಶಿಕಾಡನಿತರ ಚಾ಼ಲ್ಯಕೊಯ್ನಿ ಶೈತಾನ್ನು ಖ್ಹರ್ತಿನು ಗಪ್ಲತ್‍ಖ್ಹಾರು ಕೋಣ್ ಕೋಣ್ ಮಾಲುಮ್‌ ಕೋಕರ‍್ಯಾನಿತೆ ರ‍್ಹೇಸ್ಕಿ ಇವ್ಣುನ ಬೋಲಾನು ಶಾತ್‍ಕತೊ ಮೇ ಬಿಜೇಕ್ ವಜ಼ನ್ ತುಮಾರಪರ್ ಕೋನಾಖಿಷ್‌ನಿ.


ಖ್ಹಮಜ಼್! ಯೆಹೂದ್ಯರ್‌ಕರಿ ಝೂ಼ಟೊ ಬಡೈಮಾರಿನ್‍ ಥೋಡುಜ಼ಣು ಶೈತಾನ್ನ ಸಬೆನಾ ಮಂದಿರ್‌ಮ ರ‍್ಹವಾಳು ಹುಯಿರ‍್ಹುಸ್. ಯೋ ಅದ್ಮಿಖ್ಹಾರು ತಾರಖ್ಹಾಮ್ಣೆ ಆಯಿನ್ ತಾರ ಗೋಡಾಪರ್ ಆಡ್‍ಪಡಿನ್ ಖ್ಹಲಾಮ್ ಕರಾನಿಘೋಣಿ ಕರೀಶ್. ಮೇ ಪ್ಯಾರ್ ಕರ‍್ಯೊತೆ ಅದ್ಮಿ ತುಮೇಸ್‍ಕರಿ ಬೋಲಾನು ತದೆ ಇವ್ಣೆ ಮಾಲುಮ್ ಕರಿಲಿಶೆ.


ತದೆ ಏಕ್‌ ಪ್ರಭುನೆ, “ಆ ಅದ್ಮಿಖ್ಹಾರು ಘಣು ಮೋಟಿ ಖ್ಹತಾಪ್ಣಿ ಲೀನ್ ಆಯುಹುಯು.ಇವ್ಣೆ ಮೇಂಢಾನ ಚೆಲ್ಕಾನ ಲ್ಹೋಯಿಥಿ, ಇವ್ಣ ಝ಼ಗ್ಗಾನ ಧೊಯಿನ್ ಕೋರು ಹುಯಿರುಸ್.


Lean sinn:

Sanasan


Sanasan