Biblia Todo Logo
Bìoball air-loidhne

- Sanasan -




1 ಪೇತ್ರ 1:2 - ದೇವ್ನಿ ಖ್ಹಾಚಿ ವಚನ್

2 ಪವಿತ್ರಾತ್ಮಥಿ ಅಭಿಷೇಕ್ ಕರೈಲಿದಹುಯಿನ್ ವಿಧೇಯ ಹುವಾನಖ್ಹಾಜೆ, ಯೇಸು ಕ್ರಿಸ್ತನ ಲ್ಹೋಯಿಥಿ ಛಿಡ್‍ಕೈನ್, ಬಾ ಹುಯಿರ‍್ಹೋತೆ ದೇವ್ನಿ ಭವಿಶ್ಯನಿ ಗ್ಯಾನ್‌ಥಿ ಚೂ಼ಣೈಗಯಹುಯಾನ ಲೀಖಾನು ಶಾತ್‍ಕತೊ ತುಮುನ ವಾರ್‌ಖ್ಹೊಬಿ ಶಾಂತಿಬಿ ಘಣು ಮಳಾದೆ.

Faic an caibideil Dèan lethbhreac




1 ಪೇತ್ರ 1:2
53 Iomraidhean Croise  

ದೇವ್ ಯೋ ಖ್ಹಾರ ದನ್ನ ಕಮ್ ನಾ ಕರ‍್ಯೋತೊ, ಏಕ್‌ ಅದ್ಮಿ ಜಿನ್‌ಕುಬಿ ಬಚಿಜಾಶೆಕೊಯ್ನಿ; ಕತೋಬಿ ಇನೆ ಚೂ಼ಣಿಲಿದೊತೆ ಅದ್ಮಿನಖ್ಹಾಜೆ ದೇವ್ ಯೋ ಖ್ಹಾರ ದನ್ನ ಕಮ್ ಕರ್ಶೆ.


ಶನಕತೊ ಝೂ಼ಟುಕ್ರೈಸ್ತರ್‌ ಖ್ಹಾರು ಅಜು಼ ಝೂ಼ಟು ಪ್ರವಾದಿಖ್ಹಾರು ದೆಖೈನ್, ಇವ್ಣೇಥಿ ಹುಯೂತೊ ದೇವ್‍ಥಿ ಚೂ಼ಣೈರ‍್ಹವಾಳನಾಬಿ ಠಗಾವಾನಖ್ಹಾಜೆ, ಅದ್ಭುತ್‌ಕಾಮ್‌ ಅಜು಼ ಅಶ್ಚರ್ಯನು ಕಾಮ್‌ಖ್ಹಾರು ಕರಿ ವತಾಳ್‌ಶೆ.


ಅಜು಼ ಯೋ ತುತ್ತೂರಿನೊ ಮೋಟೊ ಅವಾಜ಼್‌ಥಿ, ಇನ ದೂತರ್‌ನ ಜ಼ಮೀನ್ನಿ ಚಾರ‍್ಹೆ ಬಾಜೂ಼ಮ ಮೋಕಲ್‌ಶೆ, ಇವ್ಣೆ ಇನೆ ಚೂ಼ಣಿಲಿದೊತೆ ಇವ್ಣುನ ಆಬ್‌ನ ಏಕ್‌ ಬಾಜು಼ಥು ಧರಿನ್ ಬಿಜೇಕ್ ಬಾಜೂ಼ಲಗು ಎಕ್ಟು ಕರ್ಶೆ.


ಪ್ರಭು ಯೋ ಖ್ಹಾರ ದನ್ನ ಕಮ್ ನಾ ಕರ‍್ಯೋತೊ, ಏಕ್‌ ಅದ್ಮಿಬಿ ಬಚಿಕೊರ‍್ಹಿಷೇನಿ. ಕತೋಬಿ ಇನೆ ಚೂ಼ಣಿಲಿದೊತೆ ಖ್ಹಾರ ಅದ್ಮಿನಖ್ಹಾಜೆ ಯೋ ಖ್ಹಾರ ದನ್ನ ಕಮ್ ಕರಿರಾಖ್ಯೋಸ್.


ಶನಕತೊ ಝೂ಼ಟುಕ್ರೈಸ್ತರ್‌ ಖ್ಹಾರು ಅಜು಼ ಝೂ಼ಟು ಪ್ರವಾದಿಖ್ಹಾರು ದೆಖೈನ್, ಇವ್ಣೇಥಿ ಹುಯೂತೊ ದೇವ್‍ಥಿ ಚೂ಼ಣೈರ‍್ಹವಾಳನಾಬಿ ಠಗಾವಾನಖ್ಹಾಜೆ ಅದ್ಭುತ್‌ಕಾಮ್‌ ಅಜು಼ ಅಶ್ಚರ್ಯನು ಕಾಮ್‌ಖ್ಹಾರು ಕರಿ ವತಾಳ್‌ಶೆ.


ತದೆ ಯೋ ಇನ ದೂತರ್‌ನ ಜ಼ಮೀನ್ನಿ ಚಾರ‍್ಹೆ ಬಾಜೂ಼ಮ ಮೋಕ್ಲಿನ್‌ ಧರ್ತಿನ ಕಡೇಶಿಥು ಧರೀನ್ ಆಬ್‍ನಿ ಖ್ಹರ್ತಿಲಗು, ಇನೆ ಚೂ಼ಣಿಲಿದೊತೆ ಖ್ಹಾರ ಅದ್ಮಿನ ಜಗತ್‌ನು ಏಕ್‌ ಬಾಜು಼ಥು ಧರಿನ್ ಬಿಜೇಕ್ ಬಾಜೂ಼ಲಗು ಎಕ್ಟು ಕರ್ಶೆ.


ದೇವ್ನೆ ಚೂ಼ಣ್ಯೋತೆ ಅದ್ಮಿ ರಾತ್-ದನ್ ಇನ ಮದತ್‌ಖ್ಹಾಜೆ ಬಿಂತಿಕರ‍್ಯೊತೊ, ಯೋ ಇವ್ಣಿ ಬಾರೇಮ ದೇರ್‌ಕರ‍್ಯುತೋಬಿ ಇವ್ಣಿ ನ್ಯಾವ್‌ನ ಫೇಡವಸ್‍ಕೊಂತೆ ರ‍್ಹಿಶೇಕಿ ಶು? ಯೋ ಇವ್ಣಿ ಮದತ್ ಕರಾನ ವೇರಸ್‌ ಕರ್ಶೆ ಕೊಯ್ನಿ.


ಶುರುಮಾಥು ಆ ಖ್ಹಾರು ಕಾಮ್ನ ಖ್ಹಮ್‌ಜಾ಼ಡ್ಯೊತೆ ಪ್ರಭು ಬೋಲುಕರಸ್, ಕರಿ ಲೀಖೈರ‍್ಹುಸ್.


ಯೊ ಯೇಸುಸ್ ದೇವ್ನಿ ಘಟ್ ಖ್ಹೂಜ಼್‌ಥೀಬಿ, ಆವ್‌ಶೇತೆ ಹಗಾಮ್ನಿ ಪರಕ್ಮ ದೆವೈಜಾ಼ವದಿನ್, ತುಮೆ ಅಲಕ್ಅದ್ಮಿವೋನ ದೀನ್ ಶಿಲ್‌ಬೇಪರ್ ಮೇಕ್ ಮರೈನ್ ಮಾರಿನಾಖ್ಯ.


“ಮೇ ಹಮ್ಕೆ ತುಮೂನ ದೇವ್‍ನಾಬಿ ಇನ ವಾರ್‌ಖ್ಹಾನಿ ವಚನ್ನಾಬಿ ದೆವುಕರೂಸ್. ಯೊ ತುಮಾರಮ ಭಕ್ತಿನ ಭಡಾವನಾಬಿ, ಪರಿಶುದ್‌ಥಿ ತುಮೂನ ಹಕ್ನ ದ್ಯವಾನಾಬಿ ಶಕತ್‌ವಾಳೊ ಹುಯಿರೋಸ್.


ಇನು ನಾಮ್ನಿ ಮಹಿಮೆನಖ್ಹಾಜೇಸ್ ಅಖ್ಖಾಸ್ ದೇಖ್ಹ್‌ನು ಅದ್ಮಿಖ್ಹಾರು ಅನ ವಿಶ್ವಾಸ್‍ಕರಿನ್, ವಿಧೇಯಹುಯಿನ್ ಚಾ಼ಲನಿತರ ಕರಾನ ಅಪೊಸ್ತಲಹುವಾನಿ ಮೋಕಾನ ಯೇಸುಕ್ರಿಸ್ತಥಿಸ್ ದೇವ್ನೆ ಮನ ದೀರಾಖ್ಯೊಸ್.


ಅಜು಼ ಇಮ್ಮಸ್ ದೇವ್ ಪ್ಯಾರ್‌ಕರಾತೆ ಅಜು಼ ಇನು ಶೊಂತ್ ಅದ್ಮಿವೊ ಕರಿ ಹುಯಿರ‍್ಹುತೆ ರೋಮ್‌ವಾಳ ತುಮುನ ಲೀಖುಕರುತೆ‍ ಶಾತ್‌ಕತೊ: ಬಾ ಹುಯಿರ‍್ಹೋತೆ ದೇವ್‍ಥೀಬಿ ಪ್ರಭು ಯೇಸುಕ್ರಿಸ್ತಥೀಬಿ ತುಮೂನ ವಾರ್‌ಖ್ಹೊಬಿ ಶಾಂತಿಬಿ ಮಳಾದೆ.


ದೇವ್, ಯೋ ಅಗಾಡಿಸ್ ಮಾಲುಮ್ ಕರಿರಾಖ್ಯೊತೆ ಇಸ್ರಾಯೇಲ್‌ ಅದ್ಮೆವ್‌ನ ಝಿಟ್ಕಾರ್‌ ದಿದೊಕೊಯ್ನಿ. ದೇವ್ನಿ ವಚನ್ ಎಲೀಯನಿ ಬಾರೇಮ ಶಾತ್ ಬೋಲಸ್‍ಕರಿ ತುಮೂನ ಮಾಲುಮ್ ಕೊಯ್ನಿಕಿಶು?


ಶನಖ್ಹಾಜೆಕತೊ ಇವ್ಣೆ ಸುವಾರ್ತೆನ ಝಿಟ್ಕಾರ‍್ಯು, ಅಜು಼ ಯೆಹೂದ್ಯರ್ ಕೊಂತೆ ಇವ್ಣೆ ತುಮಾರೇಥಿ ದೇವ್ನ ವಿರೋದಿಹುಯು. ಕತೋಬಿ ದೇವ್ನಿ ಚು಼ನಾವ್ಣಿನಿ ಕಾರಣ್‍ಥಿ ಇವ್ಣೆ ಇನ ಪ್ಯಾರ್‌ವಾಳ ಹುಯಿರಾಸ್,ಇನ ಪಿಳ್ಗಿವಾಳು ಕಾರಣ್‍ಹುಯಿರ‍್ಹುಸ್.


ಅಮ್ಮಸ್ ಯೆಹೂದ್ಯರ್‌ಕಾಹೆತೆ ಅದ್ಮಿವೊನಖ್ಹಾಜೆ ಯೇಸುಕ್ರಿಸ್ತನಿ ಸೇವಕ್‌ಹುವಾನಖ್ಹಾಜೆ ಮನ ದೇವ್ನಿ ಆಶೀರ್ವಾದ್‌ ಹುಯು. ಮೇ ದೇವ್ನಿ ಸುವಾರ್ತೆನಿ ಸೇವೆನ ಏಕ್‌ ಯಾಜಕ್‍ನಿತರ ಚ಼ಲೈನ್ ಪವಿತ್ರಾತ್ಮಥಿ ದೇವ್ನ ಸಮರ್ಪಣ್‌ಕರಾನ ಕೋಶಿಷ್ ಕರುಕರೂಸ್.


ತುಮಾರಿ ವಿಧೇಯತೆ, ಖ್ಹಾರಾಸ್ ಅದ್ಮಿವ್‌ನ ಮಾಲುಮ್ ಹುವಾನಿತರ ಹುಯು. ಇನಖ್ಹಾಜೆ ಮೇ ತುಮಾರಿ ಬಾರೇಮ ಖುಷಿಕರುಸ್. ಕತೋಬಿ ತುಮೆ ಅಛ್ಛಾ಼ನಿ ಬಾರೇಮ ಗ್ಯಾನಿ ಖ್ಹಾರಹುಯಿನ್ ಖಾರಾಬ್‌ನಿ ಬಾರೇಮ ಶನು ಕಳಂಕ್‌ಕೊಂತೆ ರ‍್ಹೇಣು ಕರಿ ಆಖ್ಹ್‌ಕರುಸ್.


ಹಮ್ಕೆ ಯೋ ಖ್ಹಾಚು಼ ಪ್ರವಾದ್‍ನೆನು ನಿಯಮ್‌ಥಿ ಹಮ್ಕೆ ಭಡ್‍ಕೈನ್ ಲೈರಾಖ್ಯುಸ್; ಅಜು಼ ಹರ್‌ಹಮೇಶ ರ‍್ಹವಾಳ ದೇವ್ನಿ ಹುಕುಮ್‌ನಿಮತ್ ಅಖ್ಖಾಸ್ ಜ಼ಗ್‌ಜಾ಼ತ್ನ ಅದ್ಮಿವೋನ ಮಾಲುಮ್‍ಪಡಾನಿ ಘೋಣಿ ಕರಿರಾಖ್ಯುಸ್, ಅಮ್ ವಿಧೇಯ ಹೋಣು ಅಜು಼ ವಿಶ್ವಾಸ್‌ ಕರ‍್ನು.


ಶನಕತೊ ತುಮೆ ಶರೀರ್‌ನ ಆಖ್ಹ್‌ನ ಖ್ಹಯಾಲ್‍ವಾಳಹುಯಿನ್ ಜಿವ್ಯಾತೊ ಮರ್‌ಶು. ಕತೋಬಿ ಆತ್ಮಥಿ ಶರೀರ್‌ನ ಪಾಪ್ನಕಾಮ್ನ ಮಾರ‍್ಯುತೊ, ತುಮೆ ಜಿವ್‌ಶು.


ದೇವಸ್ ಚೂ಼ಣಿಲಿದ ಹುಯಾನ ಉಪ್ಪರ್ ಕೋಣ್ ಗಲತ್‌ ಬೋಲ್‌ಶೆ? ದೇವಸ್ ಗಲ್ತಿಕರಾವಾಳು ಕಾಹೆಕರಿ ಛುಟ್ಕಾರ್‌ ಕರಾವಾಳೊ ಹುಯಿರ‍್ಹೋಸ್.


ತುಮೂನ ಕ್ರಿಸ್ತಯೇಸುಮ ಏಕ್‌ಭಾಗ್ ಕರಿ ಬಣಾಯೋತೆ ದೇವ್ನೇಸ್. ಕ್ರಿಸ್ತ ಅಪ್ಣಖ್ಹಾಜೆ ದೇವ್‌ಕಂಥು ಆಯೋತೆ ಗ್ಯಾನಿ ಹುಯಿರೊಸ್. ಅಪ್ಣೆ ನೀತಿವಾಳ ಹುಯಿರ‍್ಹವಾನ, ಅಪ್ಣೆ ಅಖ್ಖು ಪವಿತ್ರಹುಯಿರ‍್ಹಾಸ್.


ತುಮಾರಮ ಕೈಯೇಕ್‌ಜ಼ಣು ಇಮ್ಮಸ್ ಹುಯಿರ‍್ಹುಥು. ಕತೋಬಿ ತುಮೆ ಪ್ರಭು ಹುಯಿರೋತೆ ಯೇಸುಕ್ರಿಸ್ತನ ನಾಮ್‌ಥಿಬಿ ಅಜು಼ ಅಪ್ಣ ದೇವ್ನ ಆತ್ಮಥೀಬಿ ಧೊವೈನ್ ಶುದ್ಧಹುಯಿರ‍್ಹುಸ್. ದೇವ್‍ಥಿ ನೀತಿವಾಳಕರಿ ಚೂ಼ಣೈರ‍್ಹಾಸ್.


ಅಪ್ಣಿ ದೇವ್ನಿ ಗ್ಯಾನ್ನ ವಿರೋದ್ ಉಠಾತೆ ಅಹಂಕಾರ್‌ನ ಅಪ್ಣೆ ನಾಶ್‍ಕರಿನ್, ಹರೇಕ್ ಖ್ಹೂಜ್‍ನಾಬಿ ಕ್ರಿಸ್ತನ ಸಮರ್ಪಣ್‌ ಹುವಾನಿತರ ಯೋ ಅಖ್ಖಾನ ಕೊಂಡಿಲಿಯೇ.


ಅಪ್ಣೊ ಪ್ರಭು ಹುಯಿರೋತೆ ಯೇಸುಕ್ರಿಸ್ತನಿ ಕೃಪೆಬಿ ದೇವ್ನಿ ಪ್ಯಾರ್‌ಬಿ, ಪವಿತ್ರಾತ್ಮನಿ ಲಾಡ್‌ಬಿ ತುಮಾರ ಖ್ಹಾರಾಸ್‍ನಿ ಜೋ಼ಡ್ಮ ರ‍್ಹವಾದೆ.


ಇನಖ್ಹಾಜೆ ದೇವ್‍ಥಿ ಚೂ಼ಣೈಗಯು ಹುಯುಬಿ, ಪರಿಶುದ್ಧರ್‌ಬಿ ಪ್ಯಾರ್‌ನ ಹುಯಿರ‍್ಹಾತೆ ತುಮೆ ಗೋರ್‌, ದಯಾ, ಹೇಟು ಹುವಾನು, ಶೇದೇವ್‌ಥಿ, ಖ್ಹಮಾಳಾನು ಕರಿ ಆಖ್ಹಾರು ಅಛ್ಛಿಗುಣ್‍ನ ಭರ‍್ಹಿಲೆವೊ.


ಪ್ರಭು ಪ್ಯಾರ್ ಕರಾಸ್ತೆ ಭೈಯೆ ಭೇನೆವೊ, ಹಮೆ ತುಮಾರಿ ಬಾರೇಮ ಹಮೇಶ ದೇವ್ನ ಧನ್ಯವಾದ್ ಕರಾವಳ ಹುಯಿರ‍್ಹಾಸ್. ಶನಕತೊ ತುಮೆ ಪವಿತ್ರಾತ್ಮಾಥಿ ಪಾಕ್‌ ಹುಯಿನ್, ಖ್ಹಾಚಿಪರ್ ವಿಶ್ವಾಸ್‌ರಾಖಿನ್ ರಕ್ಷಣೆನ ಲೀಲ್ಯಾವದೆಕರಿ ದೇವ್ನೆ ತುಮೂನ ಶುರುವಾತ್‌ಮಾಸ್ ಚೂ಼ಣಿರಾಖ್ಯೊಸ್.


ಅನಖ್ಹಾಜೆಸ್ ದೇವ್ನೆ ಚೂ಼ಣಿರಾಖ್ಯೊತೆ ಅದ್ಮಿನಾಬಿ ಮಾರ ಜೋ಼ಡೆ ಇವ್ಣಖ್ಹಾಜೇಸ್ ಮೇ ಖ್ಹಾರುಸ್ ಖ್ಹಮಾಳಿಲೆವ್‌ಕರೂಸ್. ಕ್ರಿಸ್ತ ಯೇಸುಮ ಛಾ಼ತೆ ರಕ್ಷಣೆನ, ಇನಿ ಹಮೇಶಾನಿ ಮಹಿಮೆನ ಜೋ಼ಡೆ ಲೀಲೆಣು.


ದೇವ್‌ನೊ ಸೇವಕ್‌ಬಿ ಅಜು಼ ಯೇಸು ಕ್ರಿಸ್ತನೊ ಅಪೊಸ್ತಲ ಹುಯಿರ‍್ಹೋತೆ ಪೌಲನೆ ಲೀಖ್ಯೋತೆ. ದೇವ್ನೆ ಚೂ಼ಣ್ಯೋತೆ ಅದ್ಮಿ ಖ್ಹಾರಾನಿ ಖ್ಹಾಚಾಮ ಚ಼ಲಾವನಟೇಕೆ ವಿಶ್ವಾಸ್‌ನ ಭಡಾವಾನಖ್ಹಾಜೆ ಅಜು಼ ಯೊ ಇವ್ಣುನ ಭಕ್ತಿನಿ ಜಿವ್ಣಮ ಚ಼ಲಾವಸ್.


ಇನಖ್ಹಾಜೆ ಖರಾಬ್ ದಿಲ್ನಿಸಾಕ್ಷಿನ ಮ್ಹೆಲ್ಯಹುಯ ದಿಲ್‌ಥೀಬಿ ನೀರ್ಛೊ಼ಳ್‍ ಪಾಣಿಥಿ ಪಾಕ್‌ಹುಯ ಶರೀರ್‌ಥೀಬಿ ಖ್ಹಾಚಆತ್ಮಥಿ ಪೂರ ವಿಶ್ವಾಸ್‍ಥಿ ದೇವ್‌ಕನ ಅಯ್ಯೆ.


ಫೈಲೋಟ ಲಡ್ಕಾವ್‍ನ ಸಂಹಾರ್ ಕರಾವಾಳೊ ಧೂತ, ಇಸ್ರಾಯೇಲ್‌ವಾಳನ ಫೈಲೋಟ ಲಡ್ಕಾವ್‍ನ ನಾ ಛೀಮ್ಣುತೆ ಲ್ಹೋಯಿ ಛೀಚ಼ಕರೀನ್ ಪಸ್ಕ ಚ಼ಲಾವನಿತರ ಇನೆ ಕರ‍್ಯೊತೆ ವಿಶ್ವಾಸ್‌ಥೀಸ್.


ನವ ಒಪ್ಪಂದಾನ ಇಚ಼್‌ಮ ರ‍್ಹವಾಳೊ ಯೇಸುಕನಬಿ ಹೇಬೆಲನ ಲ್ಹೋಯಿಥೀಬಿ ಮಹಾನ್ ವಾತೆ ಬೋಲಾಸ್ತೆ ಛಿಡ್‌ಕಾಯುತೆ ಲ್ಹೋಯಿಕನಾಬಿ ಐರ‍್ಹಾಸ್.


ಆ ನಾಹುಯಿನ್ ಇನೆ ಭರ್‌ಪೂರ್‌ ಕರೀನ್, ಇನ ವಿಧೇಯಹುವಾಳ ಅಖ್ಖನಾಬಿ ಹಮೇಶ ರಕ್ಷಣೆನಖ್ಹಾಜೆ ಬಣ್ಯೊ.


ವಾತೆ ಖ್ಹಮ್‌ಜಾ಼ತೆ ಲಡ್ಕವ್ನಿತರ ಚಾ಼ಲೊ, ತುಮೆ ಅಗಾಡಿ ಬಿಣ್‍ಖ್ಹೈಲಿರ‍್ಹಾವಾನಿ ವಖ್ಹ್‌ತೆ ತುಮುನ ಥೂತೆ ನಿಕ್‌ಳ್ಯೊಜಾನ್ನಿ ತರಸ್ ಅಜೂ಼ಬಿ ಚಾ಼ಲಿಲ್ಯಾವಾಳ ನಾಹುಯಿರ‍್ಹೆವ್ಣುತೆ,


ಯೇಸು ಕ್ರಿಸ್ತಕರಿ ಬೋಲಾನು ಶನು ದೋಷ್‍ಕೊಂತೆ, ಶುದ್ದ ಹುಯಿರ‍್ಹುತೆ ಮೇಂಢಾನ ಚೆಲ್ಕಾನು ಕಿಮ್ಮತ್ನ ಲ್ಹೋಯಿಥೀಸ್‍ಕರಿ ತುಮುನ ಮಾಲುಮ್‍ಛಾ಼ನಿ.


ಯೊ ಜಗತ್‌ ಉಬ್‌ಜಾ಼ನ ಅಗಾಡಿಸ್ ದೆವೈಜಾ಼ವಾಳೂ ಹುಯಿರ‍್ಹಿನ್, ಆ ಖ್ಹರ್ತಿನ ಹಗಾಮ್ಮ ತುಮಾರಖ್ಹಾಜೆ ದೆಖಾಯೊ.


ತುಮೆ ಖ್ಹಾಚ ಉಪದೇಶ್‍ನ ವಿಧೇಯ ಹುಯಿರ‍್ಹಿನ್ ತುಮಾರ ಆತ್ಮಾನ ಪಾಕ್‍ ಕರಿಲಿದಾತೆ ಇನಾಖ್ಹಾಜೆ ಪಾಕ್‌ಮನ್‌ಥಿ ಭೈಯೆಭೇನೆನಿ ಪ್ಯಾರ್‌ವಾಳ ಹುಯಿರ‍್ಹೇವ್ಣು. ಅಮ್‍ರ‍್ಹವಾಪರ್, ಏಕ್‌ಥಿಏಕ್ ಪಾಕ್‍ದಿಲ್‍ಥೀಬಿ, ಛು಼ಟ ದಿಲ್‌ಥಿ ಪ್ಯಾರ್‌ಕರೊ.


ಕತೋಬಿ ಅಂಧಾರಮ ಛಾ಼ತೆ ತುಮುನ ಬುಲೈನ್ ಇನ ಆಶ್ಚರ್ಯನ ಉಜಾ಼ಳಮ ಮಳೈಲಿದ ಹುಯಾನ ಅದ್ಭುತ್ ಕಾಮ್ನ ಕರಾವಳ ಹೋಣುಕರಿ ತುಮೆ ಚೂ಼ಣೈಗಯುಹುಯು ಜ಼ಗ್‌ಜಾ಼ತ್‌ಬಿ, ರಾಜಾ಼ನ ಖಾನ್‌ದಾನ್ನ ಯಾಜಕ್‍ಬಿ, ಪರಿಶುಧ್ ಅದ್ಮಿಬಿ, ದೇವ್ನ ಶೊಂತ್‌ ಅದ್ಮಿಬಿ ಹುಯಿರ‍್ಹಾಸ್.


ದೇವ್ ತುಮುನ ಪರಿಶುದ್ ಕರಾನಖ್ಹಾಜೆ ಘಣಾದನ್ನ ಅಗ್ಗಳಸ್ ವಿಚಾರ್‌ ಕರಿರಾಖ್ಯೊಸ್. ದೇವ್ನಿ ಬಾರೇಮಾಬಿ ಅಜು಼ ಅಪ್ಣೊ ಪ್ರಭು ಹುಯಿರ‍್ಹೋತೆ ಯೇಸುನಿ ಬಾರೇಮಾನಿ ಛಾ಼ತೆ ಗ್ಯಾನ್‌ಥಿ, ತುಮೂನ ವಾರ್‌ಖ್ಹೊ ಅಜು಼ ಶಾಂತಿ ಘಣೇಥಿ ಘಣು ಮಳಾದೆ.


ಸಬೇನೊ ಶಾಣಾವ್‍ಮಾಥೊ ಏಕ್‍ಜ಼ಣೊ ಹುಯಿರ‍್ಹೋತೆ ಮೆ ದೇವ್ನೆ ಚೂ಼ಣಿರಾಖ್ಯುತೆ ಖ್ಹಾಚ ಪ್ಯಾರ್‌ನಿ ಭೇನೆನಾಬಿ ಇನ ಲಡ್ಕಾನಾಬಿ ಲೀಖುಕರುಸ್ತೆ ಶಾತ್‍ಕತೊ;


ದೇವ್ನೆ ಚೂ಼ಣ್ಯೋತೆ ತುಮಾರಿ ಪ್ಯಾರ್‌ನಿ ಭೇನೆನ ಲಡ್ಕಾ ತುಮುನ ಧನ್ಯವಾದ್ ಬೋಲುಕರಸ್.


ತುಮೂನ ಗೋರ್‌ಬಿ, ಶಾಂತಿ, ಪ್ಯಾರ್ ಘಣೇಥಿ ಮಳಾದೆ.


Lean sinn:

Sanasan


Sanasan