ಅಕ್ಕ ಪೌಲ ಪಿಂಞ ಬಾರ್ನಬ, ದೈರ್ಯತ್ಂಜ ತಕ್ಕ್ ಪರ್ಂದತ್. ಅಯಿಂಗಳ ನೋಟಿತ್: ದೇವಡ ವಾಕ್ಯತ್‍ನ ನಿಂಗಕೇ ಆದ್ಯವಾಯಿತ್ ಎಣ್ಣ್‌ವಕ್ ಅವಸ್ಯ ಇಂಜತ್; ಆಚೇಂಗಿ ನಿಂಗ ಅದ್‍ನ ತಳ್ಳಿತ್, ನಿಂಗಳ ನಿತ್ಯ ಜೀವಕ್ ಯೋಗ್ಯ ಇಲ್ಲತಯಿಂಗಳಾಯಿತ್ ನಿಂಗಳೇ ತೀರ್ಪ್ ಮಾಡ್‍ನಗುಂಡ್, ನೋಟಿ, ನಂಗ ನಿಂಗಳ ಬುಟ್ಟಿತ್ ಯೆಹೂದ್ಯಂಗ ಅಲ್ಲತ ಬೋರೆ ಜನಡ ಪಕ್ಕ ಪೋಪಾಂದ್ ಎಣ್ಣ್‌ಚಿ.