2 ತಿಮೊಥೆಯ 4:7 - ಕೊಡವ ಬೈಬಲ್7 ನಾನ್ ನಲ್ಲ ಪೋರಾಟತ್‍ನ ಪೋರಾಡ್‍ನ, ಓಟತ್‍ನ ಪೂರ್ತಿ ಮಾಡ್‍ನ, ನಾಡ ನಂಬಿಕೇನ ಕಾಪಾಡ್‍ನ. Faic an caibideil |
ನಾನ್ ಪೋಯಿತೇ ಪೋಕಂಡೂಂದ್ ನಾಡ ಮನಸ್ಸ್‌ಲ್ ದೇವ ಎಣ್ಣ್‌ನಗುಂಡ್ ನಾನ್ ಅಲ್ಲಿಕ್ ಪೋಯೆ. ನಾನ್ ಅಲ್ಲಿ ಇಪ್ಪಕ, ಅಲ್ಲಿಯತ್‍ರ ಸಬೆರ ಮುಕ್ಯಪ್ಪಟಯಿಂಗಕ್, ನಾನ್ ಯೆಹೂದ್ಯರಲ್ಲತಯಿಂಗಡ ಮದ್ಯತ್‍ಲ್ ಬೋದನೆ ಮಾಡ್‌ವ ನಲ್ಲ ಸುದ್ದಿರ ವಿಷಯ ಚಾಯಿ ಗೊತ್ತಾಂಡೂಂದ್ ಒಬ್ಬೊಬ್ಬಂಗಕು ವಿವರಿಚಿಟ್ಟಿಯೆ; ಅಯಿಂಗಳು ನಾನು, ಈ ವಿಷಯತ್‍ಲ್ ಒತ್ತೊರ್ಮೆಲ್ ಇರಂಡೂಂದ್ ನಾನ್ ಇನ್ನನೆ ಮಾಡಿಯೆ. ಇಲ್ಲತೆಪೋಚೇಂಗಿ, ನಾನ್ ಇಲ್ಲಿಕತ್ತನೆ ಮಾಡ್‍ನದ್ ಪಿಂಞ ಮಾಡಿಯಂಡುಳ್ಳದ್ ಪಾಳಾಯಿ ಪೋಪಾಂದ್ ನಾಕ್ ಪೋಡಿಯಿಂಜತ್.