ಆಚೇಂಗಿ ಇಕ್ಕ ಪ್ರವಾದಿಯಂಗ ಒಳ್‍ದಿ ಬೆಚ್ಚಿತುಳ್ಳ ಮೂಲಕವು, ನಿತ್ಯವಾನ ದೇವ ಹುಕುಮ್ ಕೊಡ್‍ತನೆಕೆ, ಎಲ್ಲಾ ಯೆಹೂದ್ಯರಲ್ಲತಯಿಂಗಳು ಅಂವೊಂಡ ಮೇಲೆ ನಂಬಿಕೆ ಬೆಚ್ಚಿತ್ ಅಂವೊಂಗ್ ತಗ್ಗಿತ್ ನಡ್‍ಪನೆಕೆ, ಈ ಸುದ್ದಿ ಯೆಹೂದ್ಯ ಅಲ್ಲತ ಎಲ್ಲಾ ಜನತ್‍ರ ಗುಂಪ್‌ಕು ಗೊತ್ತ್ ಮಾಡ್‍ಚಿ.
ಅಂವೊನ ತಡೆ ಮಾಡ್‌ವಂವೊ ಇಲ್ಲಿಂಜ ಪೋಪಕ, ದುಷ್ಟ ಮನುಷ್ಯ ಪೊರಮೆ ಬಪ್ಪ; ಆಚೇಂಗಿ, ಒಡೆಯನಾನ ಯೇಸು ಬಂದಿತ್ ಅಂವೊನ ತಾಂಡ ಬಾಯಿರ ಉಸ್‍ರ್‌ರ ಮೂಲಕ ಕೊಂದಿತ್, ತಾನ್ ಬಪ್ಪ ಮಹಿಮೇರ ಬೊಳಿರಗುಂಡ್ ನಾಶ ಮಾಡ್‌ವ.
ಪೂರ್ವ ಕಾಲತ್‍ಲ್ ಪವಿತ್ರ ಪ್ರವಾದಿಯಂಗಡ ಮೂಲಕ ಎಣ್ಣ್‌ನ ತಕ್ಕ್‌ನ ಪಿಂಞ ರಕ್ಷಕನಾಯಿತುಳ್ಳ, ಒಡೆಯಂಡ ಅಪೊಸ್ತಲಂಗಳಾಯಿತುಳ್ಳ ನಂಗಡ ಮೂಲಕ ನಿಂಗಕ್ ಕ್‍ಟ್ಟ್‌ನ ಆಜ್ಞೆನ ಗೇನಮಾಡಂಡೂಂದ್ ನಾಕ್ ನೇರಾಯಿತು ಆಸೆ.